More

    ಕೃಷಿಕರ ಅಭಿವೃದ್ಧಿಗೆ ಹೊಸ ಕಾಯ್ದೆ: ಬಳ್ಳಾರಿ ಬಿಜೆಪಿ ರೈತ ಮೋರ್ಚಾ ಮುಖಂಡ ಓಬಳೇಶ್ ಹೇಳಿಕೆ

    ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ರೈತರ ಅಭಿವೃದ್ಧಿ ದೃಷ್ಟಿಯಿಂದ ಹೊಸ ಕಾನೂನು ಜಾರಿಗೆ ತಂದಿದ್ದಾರೆ. ಆದರೆ, ದೆಹಲಿಯಲ್ಲಿ ನಡೆಯುತ್ತಿರುವ ಕೃಷಿಕರ ಧರಣಿಗೆ ಕೆಲ ವಿಪಕ್ಷಗಳ ರಾಜಿಕೀಯ ದುರುದ್ದೇಶವೇ ಕಾರಣ ಎಂದು ಬಿಜೆಪಿ ರೈತ ಮೋರ್ಚಾದ ಮುಖಂಡ ಓಬಳೇಶ್ ಆರೋಪಿಸಿದರು.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 96ನೆ ಜನ್ಮದಿನ ನಿಮಿತ್ತ ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ರೈತ ಮೋರ್ಚಾ ಘಟಕ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಹಾಗೂ ಜಿಲ್ಲೆಯ ಕೃಷಿ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ರೈತರಿಗೆ ಬಿಜೆಪಿ ಸರ್ಕಾರ ಆರಂಭದಿಂದ ಇಲ್ಲಿಯವರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಿದೆ, ಬೆಂಬಲ ಬೆಲೆ ಘೋಷಿಸಿದೆ. ಕರ್ನಾಟಕದ 58 ಲಕ್ಷ ರೈತರು ಸೇರಿ ದೇಶದ 9.50 ಕೋಟಿ ಕೃಷಿಕರ ಬ್ಯಾಂಕ್ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ತಲಾ 2,000 ರೂ. ಆನ್‌ಲೈನ್ ಮುಖೇನ ಜಮಾ ಮಾಡಲಾಗಿದೆ. ನೂತನ 3 ಕೃಷಿ ಕಾಯ್ದೆಗಳ ಉದ್ದೇಶವನ್ನು ರೈತರಿಗೆ ಪ್ರಧಾನಿ ಮನವರಿಕೆ ಮಾಡಿಕೊಡಲಿದ್ದಾರೆ ಎಂದರು. ರೈತರಾದ ತಿಪ್ಪಣ್ಣ, ಕೆ.ಪಂಪಾಪತಿ, ಹನುಮಂತಪ್ಪ, ವಸಿಕೇರಿ, ತಿಪ್ಪೇಸ್ವಾಮಿ, ಮರೆಗೌಡರನ್ನು ಸನ್ಮಾನಿಸಲಾಯಿತು.

    ರೈತ ಮೋರ್ಚಾದ ಜಿಲ್ಲಾ ಅಧ್ಯಕ್ಷ ಗಣಪಾಲ್ ಐನಾಥ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಲಿಂಗನ ಗೌಡ್ರು, ನಗರ ಘಟಕದ ಅಧ್ಯಕ್ಷ ಸತ್ಯನಾರಾಯಣ, ಮುಖಂಡರಾದ ಶಿವರೆಡ್ಡಿ, ವನ್ನರೆಡ್ಡಿ, ಮಲ್ಲಿಕಾರ್ಜನ ರೆಡ್ಡಿ, ಕೆ.ಗುರುಮೂರ್ತಿ, ಪ್ರಶಾಂತ್ ರೆಡ್ಡಿ, ನಾಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts