More

    ಚುರುಕುಗೊಂಡ ಕೃಷಿ ಚಟುವಟಿಕೆ

    ವಿಜಯವಾಣಿ ಸುದ್ದಿಜಾಲ ಗಜೇಂದ್ರಗಡ

    ಕೆಲ ದಿನಗಳಿಂದ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಇಳೆ ಹಸಿಯಾಗಿದ್ದು, ರೈತರು ಬಿತ್ತನೆಗೆ ಮುಂದಾಗಿದ್ದಾರೆ.

    ಗಜೇಂದ್ರಗಡ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಮತ್ತು ಶನಿವಾರ ರಾತ್ರಿ ಸುರಿದ ಮಳೆಯಿಂದ ಕೃಷಿ ಚಟುವಟಿಕೆ ಗರಿಗೆದರಿದೆ. ಅನ್ನದಾತ ಹರ್ಷದಿಂದಲೇ ಬಿತ್ತನೆ ಕಾರ್ಯದಲ್ಲಿ ನಿರತನಾಗಿದ್ದಾನೆ.

    ಹಿಂಗಾರು ಹಂಗಾಮಿನ ಬೆಳೆಗಳ ರಾಶಿಯ ನಂತರ ಹೊಲಗಳನ್ನೆಲ್ಲ ಸ್ವಚ್ಛಗೊಳಿಸಿ, ಕೊಟ್ಟಿಗೆ ಗೊಬ್ಬರ ತುಂಬಿಸಿ, ಹಲವಾರು ಬಾರಿ ಹರಗಿ ಬಿತ್ತನೆಗಾಗಿ ಬೀಜ, ಗೊಬ್ಬರಗಳನ್ನು ಸಂಗ್ರಹಿಸಿಕೊಂಡು ಮಳೆಗಾಗಿ ಎದುರು ನೋಡುತ್ತಿದ್ದ ರೈತ ಸಮೂಹಕ್ಕೆ ಸಕಾಲಕ್ಕೆ ವರುಣದೇವನು ಸಾಥ್ ನೀಡಿದ್ದಾನೆ. ಎರಡು ದಿನಗಳಿಂದ ಹೊಲಗಳ ತುಂಬೆಲ್ಲ ಎತ್ತುಗಳು, ಟ್ರ್ಯಾಕ್ಟರ್ ಮೂಲಕ ಬಿತ್ತುವ ದೃಷ್ಯಗಳು ಕಾಣಿಸುತ್ತವೆ.

    ಬಿತ್ತನೆ ಕ್ಷೇತ್ರ: ತಾಲೂಕಿನಲ್ಲಿ ಒಟ್ಟು 93,000 ಹೆಕ್ಟೇರ್ ಪ್ರದೇಶ ಸಾಗುವಳಿ ಜಮೀನನ್ನು ಹೊಂದಿದೆ. ಇದರದಲ್ಲಿ ಪ್ರಸ್ತುತ 62,000 ಹೆಕ್ಟೇರ್​ನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ನಡೆಯುಉವ ಸಾಧ್ಯತೆ ಇದೆ. 42,000 ಹೆಕ್ಟೇರ್ ಎರಿ 18,000 ಹೆಕ್ಟೇರ್ ಮಸಾರಿಯಲ್ಲಿ ಬಿತ್ತನೆಯಾಗಲಿದೆ. ಎರಿ ಮತ್ತು ಮಸಾರಿ ಭೂಮಿಯಲ್ಲಿ ಹೆಸರು 25 ಸಾವಿರ ಹೆಕ್ಟೇರ್, ಬಿಟಿ ಹತ್ತಿ 900 ಹೆಕ್ಟೇರ್, ಮೆಕ್ಕೆ ಜೋಳ 16 ಸಾವಿರ ಹೆಕ್ಟೇರ್, ಶೇಂಗಾ 9 ಸಾವಿರ ಹೆಕ್ಟೇರ್, ಎಣ್ಣಿ ಕಾಳುಗಳಾದ ಎಳ್ಳು 300 ಹೆಕ್ಟೇರ್, ಹೈಬ್ರಿಡ್ ಸೂರ್ಯ ಕಾಂತಿ 500 ಹೆಕ್ಟೇರ್, ಗುರೆಳ್ಳು 100 ಹೆಕ್ಟೇರ್ ಬಿತ್ತನೆ ಕ್ಷೇತ್ರವನ್ನು ನಿರೀಕ್ಷಿಸಲಾಗಿದೆ ಎಂದು ತಾಲೂಕು ಕೃಷಿ ಅಧಿಕಾರಿ ರವೀಂದ್ರಗೌಡ ಪಾಟೀಲ ತಿಳಿಸಿದ್ದಾರೆ.

    ಎತ್ತುಗಳಿಂದ ಬಿತ್ತನೆ ಕಾರ್ಯ: ಎತ್ತುಗಳಿಂದ ಬಿತ್ತನೆ ಕಾರ್ಯ ನಡೆಸಿದರೆ ಉತ್ತಮ ಇಳುವರಿ ಪಡೆಯುವುದರ ಜೊತೆಗೆ ಭೂಮಿ ಫಲವತ್ತತೆಯಿಂದ ಕೂಡಿರುತ್ತದೆ ಎಂಬ ನಂಬಿಕೆಯಿಂದ ರೈತ ಸಮೂಹ ಎತ್ತುಗಳಿಂದ ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ. ಆದರೆ, ತಾಲೂಕಿನಲ್ಲಿ ಶೇ.75 ರಷ್ಟು ಟ್ರಾ್ಯಕ್ಟರ್ ಗಳಿದ್ದರೆ, ಶೇ.25 ರಷ್ಟು ಮಾತ್ರ ಎತ್ತುಗಳಿವೆ. ಹೀಗಾಗಿ ಎತ್ತುಗಳಿರುವ ರೈತರು ಮೊದಲು ತಮ್ಮ ಹೊಲಗಳ ಬಿತ್ತನೆ ಕಾರ್ಯ ಪೂರ್ಣಗೊಳಿಸಿ, ನಂತರ ಬೇರೆಯವರ ಹೊಲಗಳನ್ನು ಬಾಡಿಗೆ ರೂಪದಲ್ಲಿ ಬಿತ್ತಲು ತೆರಳುತ್ತಾರೆ. ಹೀಗಾಗಿ ಎತ್ತು ಸಕಾಲಕ್ಕೆ ದೊರೆಯದ ಕಾರಣ ರೈತರು ಅನಿವಾರ್ಯವಾಗಿ ಟ್ರಾ್ಯಕ್ಟರ್ ಮೂಲಕ ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts