More

    ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡ ಅನುಮಾನ

    ನವದೆಹಲಿ: ಮುಂದಿನ ತಿಂಗಳು ಯುಎಇಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ  ತಂಡ ಪಾಲ್ಗೊಳ್ಳುವುದು ಅನುಮಾನ ಮೂಡಿಸಿದೆ. ಅಫ್ಘಾನಿಸ್ತಾನದ ಆಡಳಿತವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಸ್ಥಳೀಯ ಕ್ರಿಕೆಟ್ ಆಡಳಿತವೂ ಅಸ್ತವ್ಯಸ್ಥಗೊಂಡಿದ್ದು, ಈಗಾಗಲೇ ಮಹಿಳಾ ಕ್ರಿಕೆಟ್ ಅನ್ನು ದೇಶದಲ್ಲಿ ನಿಷೇಧಿಸಲಾಗಿದೆ. ತಾಲಿಬಾನ್ ಆಡಳಿತ ಬಂದ ತಕ್ಷಣವೇ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಕಾರ್ಯಕಾರಿಣಿ ನಿರ್ದೇಶಕ ಸ್ಥಾನದಿಂದ ಹಮೀದ್ ಶಿನ್ವಾರಿ ಅವರನ್ನು ವಜಾಗೊಳಿಸಿ, ನಸೀಬುಲ್ಲಾ ಹಕಾನಿ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ. ಹೀಗಾಗಿ ತಾಲಿಬಾನ್ ಬಾವುಟದಡಿ ಆ್ಘನ್ ತಂಡ ಸ್ಪರ್ಧಿಸಲು ಮುಂದಾದರೆ, ಐಸಿಸಿ ಅನುಮತಿ ನೀಡುವುದಿಲ್ಲ ಎನ್ನಲಾಗಿದೆ.

    ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರಿದಿ ಸೇರಿದಂತೆ ಪ್ರಮುಖರು ತಾಲಿಬಾನ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಒಂದು ವೇಳೆ ತಾಲಿಬಾಲ್ ಬಾವುಟದಡಿ ಅಫ್ಘಾನಿಸ್ತಾನ ತಂಡ ಸ್ಪರ್ಧಿಸಲು ಮುಂದಾದರೆ, ಇತರ ತಂಡಗಳು ಆ ತಂಡದ ವಿರುದ್ಧ ಆಡುವುದು ಕೂಡ ಇನ್ನು ಖಚಿತವಾಗಿಲ್ಲ.  ‘ಇದುವರೆಗೂ ತಾಲಿಬಾಲ್ ಬಾವುಟದಡಿಯಲ್ಲಿ ಆಡಿಸಬೇಕೆಂದು ಯಾವುದೇ ಮನವಿ ಬಂದಿಲ್ಲ. ಈ ಕುರಿತು ಐಸಿಸಿ ಆಡಳಿತ ಮಂಡಳಿ ತೀರ್ಮಾನ ಕೈಗೊಳ್ಳಲಿದೆ. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಚಟುವಟಿಕೆ ಕುರಿತು ಪ್ರತಿಯೊಬ್ಬರು ಗಮನಹರಿಸುತ್ತಿದ್ದು, ಒಂದು ವೇಳೆ ಕ್ರಿಕೆಟ್ ಮಂಡಳಿಯನ್ನು ಐಸಿಸಿ ಅಮಾನತಿನಲ್ಲಿಟ್ಟರೂ ರಶೀದ್ ಖಾನ್, ಮೊಹಮದ್ ನಬಿಯಂಥ ಆಟಗಾರರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ಐಸಿಸಿ ಆಡಳಿತ ಮಂಡಳಿ ಸದಸ್ಯರೊಬ್ಬರು ತಿಳಿಸಿದ್ದಾರೆ.

    ಐಸಿಸಿ ಸದಸ್ಯತ್ವದ ಪ್ರಕಾರ, ಸ್ಥಳೀಯ ಕ್ರಿಕೆಟ್ ಮಂಡಳಿಗಳು ಉತ್ತಮ ಆಡಳಿತ ಹೊಂದಿರಬೇಕು. ಸದಸ್ಯತ್ವ, ಆಟದ ನಿಯಮ, ಮಾನ್ಯತೆ ಸೇರಿದಂತೆ ಹಲವು ಹಂತಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಕ್ರಿಕೆಟ್ ಆಡಳಿತದಲ್ಲಿ ಯಾವುದೇ ಗೊಂದಲವಿರಬಾರದು ಎಂದು ತಿಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಈಗಾಗಲೇ ತಾಲಿಬಾನ್‌ಗಳು ಮಹಿಳಾ ಕ್ರಿಕೆಟ್ ನಿಷೇಧಿಸಿರುವುದರಿಂದ ಐಸಿಸಿ ನಿಮಯ ಉಲ್ಲಂಸಿದಂತಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts