More

    ಅರ್ಥಪೂರ್ಣವಾಗಿ ಜಯಂತ್ಯುತ್ಸವ ಆಚರಣೆ: ಎಡಿಸಿ ಡಾ.ಎಚ್.ಎಲ್.ನಾಗರಾಜು ಮಾಹಿತಿ

    ಮಂಡ್ಯ: ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏ.5ರಂದು ಡಾ.ಬಾಬು ಜಗಜೀವನ ರಾಂ ಹಾಗೂ ಏ.14 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅದು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಜಯಂತ್ಯುತ್ಸವದಂದು ಯಾವುದೇ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಕರೆತಂದು ಭಾಷಣ ಮಾಡಿಸಬಾರದು. ಜತೆಗೆ ಉಪನ್ಯಾಸ ನೀಡುವವರು ರಾಜಕೀಯವಾಗಿ ಮಾತನಾಡಬಾರದು ಎಂದು ಹೇಳಿದರು.
    ಮಹಾನ್ ವ್ಯಕ್ತಿಗಳ ಜಯಂತಿಯನ್ನು ಕೇವಲ ಒಂದು ವರ್ಗ ಮತ್ತು ಒಂದು ಸ್ಥಳಕ್ಕೆ ಸೀಮಿತ ಮಾಡಬಾರದು. ಜಯಂತಿಗಳ ದಿನದಂದು ಎಲ್ಲಾ ಶಾಲಾ ಕಾಲೇಜಿನಲ್ಲಿ ವ್ಯಕ್ತಿಗಳ ತತ್ವ ಹಾಗೂ ಆದರ್ಶಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಸರ್ಕಾರಿ ಕಚೇರಿಯನ್ನು ದೀಪಾಲಂಕಾರಗೊಳಿಸಿ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಖುದ್ದು ಹಾಜರಿದ್ದು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.
    ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ.ಸಿದ್ದಲಿಂಗೇಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯಶ್ರೀ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖಾಧಿಕಾರಿ ಓಂಪ್ರಕಾಶ್, ಪ್ರಾದೇಶಿಕ ಸಾರಿಗೆ ಇಲಾಖಾಧಿಕಾರಿ ವಿವೇಕಾನಂದ, ವಿಜಯಲಕ್ಷ್ಮೀ ರಘುನಂದನ್, ಗುರುಪ್ರಸಾದ್ ಕೆರಗೋಡು, ತುಳಸಿದಾಸ್, ಸೋಮಶೇಖರ್ ಕೆರಗೋಡು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts