More

    ಕೆಜಿಎಫ್ ನಗರಸಭೆಗೆ ಎಸಿಬಿ ದಾಳಿ : ಅಧಿಕಾರಿಗಳ ಸೂಚನೆ ಮೇರೆಗೆ ನಗರಸಭೆಯ ಮುಖ್ಯದ್ವಾರದ ಗೇಟ್ ಬಂದ್

    ಕೋಲಾರ : ಕೆಜಿಎಫ್ ನಗರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಮಾಹಿತಿ ಆಧರಿಸಿ ಎಸಿಬಿ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿ ಅಧಿಕಾರಿ ಮತ್ತು ಸಿಬ್ಬಂದಿಗೆ ಶಾಕ್ ನೀಡಿದ್ದಾರೆ.

    ಎಸಿಬಿ ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿ ಸಂಜೆ 4 ಗಂಟೆಗೆ ನಗರಸಭೆ ಕಚೇರಿಗೆ ದಾಳಿ ನಡೆಸಿ ಇಡೀ ನಗರಸಭೆಯನ್ನು ಸುಪರ್ದಿಗೆ ಪಡೆದು ಅಧಿಕಾರಿ ಮತ್ತು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಇದಕ್ಕೂ ಮುನ್ನ ನಗರಸಭೆ ಕಚೇರಿಗೆ ಸಾರ್ವಜನಿಕರು ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ರಾಬರ್ಟ್‌ಸನ್‌ಪೇಟೆ ಪೊಲೀಸರು ಎಸಿಬಿ ಅಧಿಕಾರಿಗಳ ಸೂಚನೆ ಮೇರೆಗೆ ನಗರಸಭೆಯ ಮುಖ್ಯದ್ವಾರದ ಗೇಟ್ ಬಂದ್ ಮಾಡಿದ್ದರು.

    ನಗರಸಭೆಯೊಳಗಿದ್ದ್ದ ಕೆಲವು ಸಾರ್ವಜನಿಕರು ಮತ್ತು ಸದಸ್ಯರನ್ನು ವಿಚಾರಿಸಿ ಹೊರಗೆ ಕಳುಹಿಸಿದರೆ, ಆಯುಕ್ತೆ ಸರ್ವರ್ ಮರ್ಚೆಂಟ್ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ಕುಳಿತಿದ್ದ ಕೆಲವರನ್ನು ಸೇರಿಸಿ ಸಮಗ್ರ ವಿಚಾರಣೆಯೊಂದಿಗೆ ನಗದು ಮತ್ತು ಪ್ರಮುಖ ಕಡತ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಸತತ ನಾಲ್ಕು ಗಂಟೆಗಳಿಂದ ವಿವಿಧ ಶಾಖೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ರಾತ್ರಿಯೂ ಮುಂದುವರಿಯುವ ಸಾಧ್ಯತೆ ಇದೆ.

    ನಗರಸಭೆ ವ್ಯಾಪ್ತಿಯ ಮಾರುಕಟ್ಟೆಯಲ್ಲಿ ಅಂಗಡಿ ಹರಾಜು ವಿಚಾರದಲ್ಲಿ ಸಾಕಷ್ಟು ಹಣದ ಹೊಳೆ ಹರಿದಿದೆ ಎಂದು ವಿಧಾನಸಭೆಯಲ್ಲಿ ಕ್ಷೇತ್ರದ ಶಾಸಕಿ ಎಂ.ರೂಪಕಲಾ ಆರೋಪಿಸಿದ್ದರಲ್ಲದೆ ಸಾರ್ವಜನಿಕರಿಂದಲೂ ಆರೋಪ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ತನಿಖೆಗೆ ಸರ್ಕಾರ ಎಸಿಬಿಗೆ ಸೂಚಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts