More

    ಮದುವೆಗೆ ಕೂಡಿಟ್ಟ 1 ಲಕ್ಷ ರೂ. ಹಣ ಕೋವಿಡ್​ ನಿಧಿಗೆ ದಾನ

    ಕಾಮರೂಪ್​​ (ಅಸ್ಸಾಂ): ಎಬಿವಿಪಿ ಕಾರ್ಯಕರ್ತೆಯೊಬ್ಬರು ತಮ್ಮ ಮದುವೆಗಾಗಿ ಕೂಡಿಟ್ಟುಕೊಂಡಿದ್ದ 1 ಲಕ್ಷ ರೂ. ಅನ್ನು ಕೋವಿಡ್​ 19 ಪರಿಹಾರ ಕಾರ್ಯಗಳಿಗಾಗಿ ಬಳಸಲು ಅಸ್ಸಾಂ ಸಿಎಂ ಪರಿಹಾರ ನಿಧಿಗೆ ದೇಣಿಗೆಯಾಗಿ ಕೊಟ್ಟು ಔದಾರ್ಯ ಮೆರೆದಿದ್ದಾರೆ.

    ಕಾಮರೂಪ್​​ ಜಿಲ್ಲೆಯ ರಂಗಿಯಾ ಘಟಕದ ಜಂಟಿ ಕಾರ್ಯದರ್ಶಿ ರೀಮಾ ಘೋಷ್​ ದೇಣಿಗೆ ನೀಡಿದವರು. ರಂಗಿಯಾ ಶಾಸಕ ಭಾಪೇಶ್​ ಕಾಲಿಟಾ ಮೂಲಕ ಈ ಹಣವನ್ನು ಅವರು ಸಿಎಂ ಪರಿಹಾರನಿಧಿಗೆ ಅರ್ಪಿಸಿದರು.

    ಇದನ್ನೂ ಓದಿ: ಮುಂಬೈ ಆಸ್ಪತ್ರೆಯಲ್ಲಿ ಶವಗಳ ಪಕ್ಕದಲ್ಲೇ ಕರೊನಾ ಸೋಂಕಿತರಿಗೆ ಚಿಕಿತ್ಸೆ

    ನಾಗರಿಕ ಸೇವೆ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದ್ದ ರೀಮಾ ಘೋಷ್​, ಲಾಕ್​ಡೌನ್​ ತೆರವಾದ ಬಳಿಕ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ಬಯಕೆ ಹೊಂದಿದ್ದರು.

    ನಾನು ಆರು ವರ್ಷದವಳಾಗಿದ್ದಾಗಿನಿಂದ ನನ್ನ ತಂದೆ ನನ್ನ ಮದುವೆಗಾಗಿ ಹಣವನ್ನು ಉಳಿಸುತ್ತಿದ್ದರು. ಹೀಗೆ 1,00,099 ರೂ. ಉಳಿತಾಯವಾಗಿತ್ತು. ಈ ಹಣವನ್ನು ನಾನು ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಬಳಸಿಕೊಳ್ಳಲು ಬಯಸಿದ್ದೆ. ಆದರೆ ಈ ನನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಮುನ್ನ ಕೋವಿಡ್​ 19 ಪಿಡುಗು ಬಂದು ಅಪ್ಪಳಿಸಿತು. ಇದರಿಂದಾಗಿ ಸಾಕಷ್ಟು ಜನರು ತೊಂದರೆಗೆ ಒಳಗಾದರು. ಅವರೆಲ್ಲರಿಗೂ ನನ್ನ ಕೈಯಲ್ಲಾದಷ್ಟು ಸಹಾಯ ಮಾಡಲು ಈ ಹಣವನ್ನು ಸಿಎಂ ಪರಿಹಾರ ನಿಧಿಗೆ ಅರ್ಪಿಸಲು ನಿರ್ಧರಿಸಿದೆ ಎಂದು ರೀಮಾ ಘೋಷ್​ ಹೇಳಿದ್ದಾರೆ.

    ಉಳಿತಾಯದ ಹಣವನ್ನು ಸಿಎಂ ಪರಿಹಾರ ನಿಧಿಗೆ ಅರ್ಪಿಸುವುದಾಗಿ ಪ್ರಸ್ತಾಪಿಸಿದಾಗ ತಂದೆ ಕೂಡ ತುಂಬುಹೃದಯದಿಂದ ಒಪ್ಪಿಗೆ ಸೂಚಿಸಿದರು. ಇದಕ್ಕಾಗಿ ಅವರಿಗೆ ಕೃತಜ್ಞತೆ ಅರ್ಪಿಸಲು ಬಯಸುವುದಾಗಿ ತಿಳಿಸಿದ್ದಾರೆ.

    ವಿಷಾನಿಲ ದುರಂತ; ಮೃತರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts