More

    ಬಿಗ್ ಬಾಷ್ ಲೀಗ್‌ನಿಂದ ಎಬಿ ಡಿವಿಲಿಯರ್ಸ್‌ ಹಿಂದೆ ಸರಿಯಲು ಕಾರಣವೇನು..?

    ದುಬೈ: ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಿರುವ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ ಮುಂಬರುವ ಬಿಗ್ ಬಾಷ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಬ್ರಿಸ್ಬೇನ್ ಹೀಟ್ ಪರ ಅವರು ಕಣಕ್ಕಿಳಿಯಬೇಕಿತ್ತು. ಕರೊನಾ ವೈರಸ್ ಭೀತಿ ಒಂದೆಡೆಯಾದರೆ, ಎಬಿಡಿ ದಂಪತಿ ಮೂರನೇ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಬಿಬಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಎರಡು ಕಾರಣಗಳಿಂದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಬಿಬಿಎಲ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

    36 ವರ್ಷದ ಎಬಿಡಿ ಸದ್ಯ ಯುಎಇಯಲ್ಲಿ ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ನಮ್ಮ ಕುಟುಂಬ ಮತ್ತಷ್ಟು ದೊಡ್ಡದಾಗುತ್ತಿದೆ. ಜತೆಗೆ ಕೋವಿಡ್-19ರಿಂದಾಗಿ ಪ್ರವಾಸಕ್ಕೆ ಈ ಸಮಯ ಯೋಗ್ಯವಲ್ಲ ಎಂದು ಡಿವಿಲಿಯರ್ಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ಭವಿಷ್ಯದಲ್ಲಿ ಬ್ರಿಸ್ಬೇನ್ ಹೀಟ್ ಪರವೇ ಆಡಲು ಉತ್ಸುಕನಾಗಿದ್ದೇನೆ ಎಂದು ಎಬಿಡಿ ಹೇಳಿಕೊಂಡಿದ್ದಾರೆ. ಕಳೆದ ಆವೃತ್ತಿಯ ಬಿಬಿಎಲ್‌ನಲ್ಲಿ ಎಬಿಡಿ ಸರಾಸರಿ 24.33 ರಂತೆ 146 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

    ಸದ್ಯ ಆರ್‌ಸಿಬಿ ಉತ್ತಮ ನಿರ್ವಹಣೆ ತೋರುತ್ತಿರುವ ಎಬಿಡಿ ಇದುವರೆಗೂ ಸರಾಸರಿ 54 ರಂತೆ 324 ರನ್ ಬಾರಿಸಿದ್ದಾರೆ. ಮುಂದಿನ ಆವೃತ್ತಿಯಲ್ಲಿ ಡಿವಿಲಿಯರ್ಸ್‌ ತಂಡದ ಪರ ಆಡುವ ವಿಶ್ವಾಸವಿದೆ ಎಂದು ಬ್ರಿಸ್ಬೇನ್ ಹೀಟ್ ತಂಡದ ಮುಖ್ಯ ಕೋಚ್ ಹೇಳಿಕೊಂಡಿದ್ದಾರೆ. ಡಿಸೆಂಬರ್ 3 ರಿಂದ ಬಿಬಿಎಲ್ ಆರಂಭವಾಗಲಿದೆ.

    ಪಂಜಾಬ್ ತಂಡ ಪುಟಿದೇಳಲು ಇವರಿಬ್ಬರು ಕನ್ನಡಿಗರೇ ಕಾರಣ ಎಂದ ಗಾವಸ್ಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts