

ಬಂಟ್ವಾಳ: ಕರ್ನಾಟಕ ಸಾವಯವ ಕೃಷಿ ಯೋಜನೆ ವತಿಯಿಂದ ಆಟಿದ ಕೂಟ ಹಾಗೂ ರೈತ ಸಾಧಕರಿಗೆ ಸನ್ಮಾನ, ಅತ್ಯುತ್ತಮ ಸಾವಯವ ಕೃಷಿ ಪ್ರೋತ್ಸಾಹ ರೈತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಭಾನುವಾರ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಸಾವಯವ ಕೃಷಿ ಯೋಜನೆ ಆಡಳಿತ ನಿರ್ದೇಶಕ ಮೋಹನ್ ಗೌಡ ಕಲ್ಮಂಜ ಅಧ್ಯಕ್ಷತೆ ವಹಿಸಿದರು. ಬಂಟ್ವಾಳ ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ, ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಡಾ.ತುಕರಾಂ ಪೂಜಾರಿ, ಬಂಟ್ವಾಳ ಕ್ಷೇತ್ರ ಕಾಂಗ್ರೆಸ್ ಕಿಸಾನ್ ಘಟಕ ಅಧ್ಯಕ್ಷ ಸುಧಾಕರ್ ಶೆಣೈ ಖಂಡಿಗ, ಮಮತಾ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಜಿಪಂ ಮಾಜಿ ಸದಸ್ಯ ಪದ್ಮಶೇಖರ ಜೈನ್, ಸಾವಯವ ಕೃಷಿ ಯೋಜನೆಯ ಆಡಳಿತ ನಿರ್ದೇಶಕಿ ಅಶ್ವಿನಿ ಮೋಹನ್ ಗೌಡ, ಕಾಸರಗೋಡು ಜಿಲ್ಲಾ ಹಿರಿಯ ಅಧಿಕಾರಿ ಪೂರ್ಣಿಮಾ ಅಡೂರು ವೇದಿಕೆಯಲ್ಲಿದ್ದರು. ಭಾರತಿ ರೈ ಅರಿಯಡ್ಕ ಸ್ವಾಗತಿಸಿದರು. ಈಶ್ವರ ನಾಯ್ಕ ವಂದಿಸಿದರು.
ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ
ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಕಾಲದಲ್ಲಿ ಪಶ್ಚಿಮವಾಹಿನಿ ಯೋಜನೆ ಸಹಕಾರಗೊಳಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರನ್ನು ಸನ್ಮಾನಿಸಲಾಯಿತು. 47 ಮಂದಿ ಸಾಧಕ ರೈತರಿಗೆ ಅತ್ಯುತ್ತಮ ಸಾವಯವ ಕೃಷಿ ಪ್ರೋತ್ಸಾಹ ರೈತ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಯೋಧ ಅಮ್ಮಣ್ಣ ರೈ ದೇಲ, ದುಗ್ಗಪ್ಪ ಗೌಡ ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು.