More

    ಆರ್​ಆರ್​ಆರ್​ನಲ್ಲಿ ಆಮೀರ್ ಖಾನ್​!

    ಬೆಂಗಳೂರು: ತಾರಾಗಣ ಮತ್ತು ಮೇಕಿಂಗ್ ಮೂಲಕವೇ ಸದ್ದು ಮಾಡುತ್ತಿರುವ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿದೆ. ಅದೇನೆಂದರೆ, ಈ ಸಿನಿಮಾದ ಭಾಗವಾಗಲು ಬಾಲಿವುಡ್​ನ ಖ್ಯಾತ ನಟ ಒಪ್ಪಿಗೆ ಸೂಚಿಸಿದ್ದಾರೆ. ಆಮೀರ್ ಖಾನ್ ರಾಜಮೌಳಿಯ ‘ಆರ್​ಆರ್​ಆರ್’ ಸಿನಿಮಾದಲ್ಲಿರಲಿದ್ದಾರೆ.

    ಹಾಗಾದರೆ ಅವರ ಪಾತ್ರ ಎಂಥದ್ದಿರಬಹುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಚಿತ್ರದಲ್ಲಿ ಆಮೀರ್ ಎಲ್ಲಿಯೂ ಕಾಣಿಸುವುದಿಲ್ಲ. ಬದಲಿಗೆ ಅವರ ಧ್ವನಿ ಮಾತ್ರ ಕೇಳಿಸಲಿದೆ. ‘ಆರ್​ಆರ್​ಆರ್’ ಚಿತ್ರದ ಹಿಂದಿ ಅವತರಣಿಕೆಗೆ ಆಮೀರ್ ಖಾನ್ ತಮ್ಮದೇ ಧ್ವನಿಯಲ್ಲಿ ನಾಯಕರ ಪರಿಚಯ ಮಾಡಿಕೊಡಲಿದ್ದಾರೆ. ಇಡೀ ಚಿತ್ರದಲ್ಲಿ ಅಲ್ಲಲ್ಲಿ ಆಮೀರ್ ಧ್ವನಿ ಕೇಳಿಬರಲಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts