More

    ಚಿಂತಾಮಣಿಯಲ್ಲಿ ಸಾವಿನ ಪ್ರಯಾಣ! ಭೀಕರ ಅಪಘಾತಕ್ಕೆ 8 ಮಂದಿ ಬಲಿಯಾದ್ರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

    ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಸಮೀಪ ಸೆ.1ರ ಸಂಜೆ ಸಿಮೆಂಟ್ ಲಾರಿ ಮತ್ತು ಜೀಪಿನ ನಡುವೆ ಸಂಭವಿಸಿದ ಭೀಕರ ಅಪಘಾತಕ್ಕೆ 8 ಮಂದಿ ಬಲಿಯಾದ ಬಳಿಕವೂ ಸಾರಿಗೆ ಮತ್ತು ಪೊಲೀಸ್​ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಹಲವರು ಸಾರಿಗೆ ನಿಯಮ ಉಲ್ಲಂಘಿಸಿ ಹಣದಾಸೆಗೆ ಪ್ರಯಾಣಿಕರನ್ನು ಕುರಿಯಂತೆ ತುಮಬಿಕೊಂಡು ಹೋಗಿತ್ತಿದ್ದು, ಅಮಾಯಕರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ.

    ಪರವಾನಗಿ ಇಲ್ಲದೆ ಹಾಗೂ ಪ್ರಮಾಣಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು, ಜನನಿಬಿಡ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಕುರಿಗಳಂತೆ ತುಂಬಿಸಿಕೊಳ್ಳುವ ಬಸ್, ಆಟೋಗಳು, ಲಗೇಜ್ ಆಟೋ, ಮ್ಯಾಕ್ಸಿಕ್ಯಾಬ್, ಟೆಂಪೋ, ಮಿನಿ ಟೆಂಪೋ, ಟ್ರ್ಯಾಕ್ಟರ್, ಜೀಪ್ ಮತ್ತಿತರ ವಾಹನಗಳು ಚಿಂತಾಮಣಿಯಲ್ಲಿ ಸಂಚರಿಸುತ್ತಿದ್ದರೂ ಪ್ರಶ್ನಿಸುವವರೇ ಇಲ್ಲವಾಗಿದೆ. ಇದೆಲ್ಲವನ್ನು ಕಂಡೂ ಕಾಣದಂತಿರುವ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಮೇಲೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

    ಚಿಂತಾಮಣಿಯಲ್ಲಿ ಪದೇಪದೆ ನಡೆಯುತ್ತಿರುವ ಭೀಕರ ರಸ್ತೆ ಅಪಘಾತಗಳಿಗೆ ಹೊಣೆ ಪೊಲೀಸ್ ಇಲಾಖೆ ಅಥವಾ ಪ್ರಾದೇಶಿಕ ಸಾರಿಗೆ ಇಲಾಖೆಯೋ? ಸಾರ್ವಜನಿಕರ ನಿರ್ಲಕ್ಷ್ಯವೋ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಪಘಾತಗಳು ನಡೆದ ಬಳಿಕ ಅಧಿಕಾರಿಗಳು ಒಂದಷ್ಟು ಕಾರ್ಯಾಚರಣೆ ನಡೆಸಿ ಪರವಾನಗಿ ಇಲ್ಲದ ಏಳೆಂಟು ವಾಹನಗಳನ್ನು ವಶಕ್ಕೆ ಪಡೆಯುವ ನಾಟಕ ಆಡುತ್ತಾರೆ. ಅಧಿಕಾರಿಗಳು ಬೀದಿಗಿಳಿದು ತಪಾಸಣೆ ಬಿಗಿಗೊಳಿಸಿದಲ್ಲಿ ಅಮಾಯಾಕರ ಜೀವ ಉಳಿಸಬಹುದು. ಇನ್ನು ಪ್ರಯಾಣಿಕರು ಕೂಡ ಅಪಾಯಕಾರಿ ಅನ್ನಿಸುವ ಪ್ರಯಾಣಕ್ಕೆ ಕೈಹಾಕಬಾರದು.

    2019ರ ಜುಲೈ 4 ರಂದು ಚಿಂತಾಮಣಿ ತಾಲೂಕಿನ ಮುರಗಮುಲ್ಲ ರಸ್ತೆಯಲ್ಲಿ ಖಾಸಗಿ ಬಸ್-ಟಾಟಾ ಏಸ್ ನಡುವೆ ಸಂಭವಿಸಿದ ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದರು. ಕಳೆದ ಸೆ.12ರಂದು 8 ಮಂದಿಯನ್ನು ಬಲಿ ಪಡೆದ ಮರಿನಾಯನಹಳ್ಳಿ ಗೇಟ್ ಬಳಿಯ ಅಪಘಾತ ಪ್ರಕರಣ ತಾಲೂಕಿನ ಜನರನ್ನು ಬೆಚ್ಚಿ ಬೀಳಿಸಿದೆ.

    ಚಿಂತಾಮಣಿಯಲ್ಲಿ ಸಾವಿನ ಪ್ರಯಾಣ! ಭೀಕರ ಅಪಘಾತಕ್ಕೆ 8 ಮಂದಿ ಬಲಿಯಾದ್ರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

    ಮುರಗಮುಲ್ಲ ರಸ್ತೆಯಲ್ಲಿನ ಅಪಘಾತದ ಬಳಿಕ ಆರ್‌ಟಿಒ ಅಧಿಕಾರಿಗಳು ಸುಮಾರು 29 ಬಸ್‌ಗಳ ತಪಾಸಣೆ ನಡೆಸಿ ದಂಡ ವಿಧಿಸಿದ್ದಾರೆ. ಆಂಧ್ರಪ್ರದೇಶ ಎರಡು ಆಟೋಗಳನ್ನು ಸೀಜ್​ ಮಾಡಿದ್ದಾರೆ. ಇದಾದ ನಂತರ ಮತ್ತೆ ವಾಹನಗಳನ್ನು ತಪಾಸಣೆ ಮಾಡಿಲ್ಲ. ಇಂತಹ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.

    ಆರ್‌ಟಿಒಗಳು ರಸ್ತೆಗೆ ಇಳಿಯಲ್ಲ: ಕರ್ನಾಟಕದಲ್ಲಿ ಪರವಾನಗಿ ಇಲ್ಲದೆ ವಾಹನಗಳನ್ನು ಹಿಡಿದು ದಂಡ ಹಾಕುವುದು ತೀರಾ ಕಡಿಮೆ, ಇನ್ನು ಆರ್‌ಟಿಒ ಅಧಿಕಾರಿಗಳು ಫೈಲ್‌ಗೆ ಇಂತಿಷ್ಟು ಹಣ ಫಿಕ್ಸ್ ಮಾಡಿಕೊಂಡು ಕೆಲಸ ಮಾಡುತ್ತಾರೆಯೇ ಹೊರತು ರಸ್ತೆಗಿಳಿದು ತಪಾಸಣೆ ಮಾಡದ ಪರಿಣಾಮ ಪ್ರಯಾಣಿಕರ ಸಾಗಣೆ ವಾಹನಗಳು ಬಿಟ್ಟು ಇತರ ವಾಹನಗಳಲ್ಲಿಯೂ ಪ್ರಯಾಣಿಕರ ಸಾಗಣೆ ಮಾಡುತ್ತಿರುವುದು ಅಪಘಾತಗಳಿಗೆ ಕಾರಣ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಖಾಸಗಿ ಬಸ್ ಮಾಲೀಕರೊಬ್ಬರು.

    ಹಳೇ ಚಾಳಿ ಮುಂದುವರಿಯುತ್ತೆ: ಅಪಘಾತ ನಡೆದಾಗ ತಪಾಸಣೆಯ ನಾಟಕ ಮಾಡ್ತಾರೆ, ದಿನ ಕಳೆದಂತೆ ಹಳೇ ಚಾಳಿ ಮುಂದುವರಿಸ್ತಾರೆ, ಪರವಾನಗಿ ಇಲ್ಲದ ವಾಹನಗಳಲ್ಲಿ ಪ್ರಯಾಣಿಕರ ಸಾಗಣೆ ಮಾಡ್ತಾರೆ. ಈ ದಂಧೆ ದಶಕದಿಂದ ನಡೆಯುತ್ತಲೇ ಇದೆ ಎನ್ನುತ್ತಾರೆ ಚಿಂತಾಮಣಿ ಖಾಸಗಿ ಬಸ್​ ಮಾಲೀಕರೊಬ್ಬರು.

    ಚಿಂತಾಮಣಿಯಲ್ಲಿ ಭೀಕರ ಅಪಘಾತ, 8 ಮಂದಿ ಸಾವು: ಒಬ್ಬೊಬ್ಬರ ಹಿಂದಿದೆ ಕರುಣಾಜನಕ ಕಥೆ

    ಸಾವಿನಲ್ಲೂ ನಾಲ್ವರ ಪ್ರಾಣ ಉಳಿಸಿ ಸಾರ್ಥಕತೆ ಮೆರೆದ ಹಾವೇರಿ ಯುವತಿ

    ಮಗುವಿಗೆ ಜನ್ಮ ನೀಡಿ ಅವಿವಾಹಿತೆ ಸಾವು: ಆ ಇಬ್ಬರಲ್ಲಿ ಮಗುವಿನ ತಂದೆ ಯಾರು? ಶಿವಮೊಗ್ಗದಲ್ಲೊಂದು ವಿಚಿತ್ರ ಲವ್ ಕೇಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts