More

    ಸುಸೂತ್ರವಾಗಿ ನಡೆದ ಮಸ್ಟರಿಂಗ್ ಕಾರ್ಯ

    ಮಡಿಕೇರಿ:

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶುಕ್ರವಾರ (ಏ 26) ಮತದಾನ ನಡೆಯಲಿದ್ದು, ನಗರದ ಸಂತ ಜೋಸೆಫರ ಶಾಲಾ ಆವರಣದಲ್ಲಿ ಗುರುವಾರ ಮಸ್ಟರಿಂಗ್ ಕಾರ್ಯ ನಡೆಯಿತು. ಚುನಾವಣೆ ಮತಗಟ್ಟೆಗಳಿಗೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿ ಮತಯಂತ್ರ ಹಾಗೂ ಇತರೆ ಸಲಕರಣೆಗಳನ್ನು ಪಡೆದು ಮತಗಟ್ಟೆ ಕಡೆ ಸಾಗಿದರು.

    ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ತಲಾ 273ರಂತೆ ಒಟ್ಟು 546 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಹಿಳಾ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿ ಅಂದರೆ 2,40,182 ಇದ್ದಾರೆ. ಪುರುಷ ಮತದಾರರ ಸಂಖ್ಯೆ 2,30,568 ಆಗಿದ್ದು, 16 ಇತರ ಮತದಾರರು ಸೇರಿದಂತೆ ಒಟ್ಟು 4,70,766 ಮತದಾರರು ಕೊಡಗಿನಲ್ಲಿ ಇದ್ದಾರೆ.

    ಮತಗಟ್ಟೆ ಅಧಿಕಾರಿಗಳು ಮಗಟ್ಟೆಗಳಿಗೆ ತೆರಳಲು ಮತ್ತು ವಾಪಸ್ ಬರಲು 80 ಕೆಎಸ್‌ಆರ್‌ಟಿಸಿ ಬಸ್‌ಗಳು, 47 ಮಿನಿ ಬಸ್‌ಗಳು, 74 ಜೀಪ್‌ಗಳು ಹಾಗೂ 13 ಮ್ಯಾಕ್ಸಿಕ್ಯಾಬ್‌ಗಳ ವ್ಯವಸ್ಥೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts