More

    ರೋಹಿಣಿ ಸಿಂಧೂರಿ ಬಯೋಪಿಕ್​ ರಿಲೀಸ್​ ಆಗುತ್ತಿದ್ದಂತೆ ಸಾ.ರಾ.ಮಹೇಶ್​ ಒಂದು ಸಿನಿಮಾ ಮಾಡ್ತಾರಂತೆ!

    ಮೈಸೂರು: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಯೋಪಿಕ್‌ ಸಿನಿಮಾ ಆಗಲಿದೆ. 2020ರ ಜೂನ್ 15ರಂದೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಭಾರತ ಸಿಂಧೂರಿ’ ಸಿನಿಮಾ ಟೈಟಲ್ ರಿಜಿಸ್ಟರ್ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಲಾಕ್‌ಡೌನ್‌ ನಂತರ ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ಅಡಿ ಈ ಸಿನಿಮಾ ಸೆಟ್ಟೇರಲಿದ್ದು, ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ, ನಿರ್ದೇಶನದ ಜವಾಬ್ದಾರಿಯನ್ನು ಮಂಡ್ಯದ ಪತ್ರಕರ್ತ ಕೃಷ್ಣ ಸ್ವರ್ಣಸಂದ್ರ ಹೊತ್ತಿದ್ದಾರೆ. ಸಿಂಧೂರಿ ಪಾತ್ರವನ್ನು ಅಕ್ಷತಾ ಪಾಂಡವಪುರ ನಿರ್ವಹಿಸಲಿದ್ದಾರೆ.

    ಇದೀಗ ಈ ಸಿನಿಮಾ ರಿಲೀಸ್​ ಆದ ಕೂಡಲೇ ಶಾಸಕ ಸಾ.ರಾ.ಮಹೇಶ್​ ಅವರೂ ಒಂದು ಸಿನಿಮಾ ನಿರ್ಮಾಣ ಮಾಡ್ತಾರಂತೆ! ಈ ಬಗ್ಗೆ ಸ್ವತಃ ಅವರೇ ಬುಧವಾರ ಸುದ್ದಿಗಾರರ ಬಳಿ ಹೇಳಿಕೊಂಡಿದ್ದಾರೆ. ‘ರೋಹಿಣಿ ಸಿಂಧೂರಿ ಬಗ್ಗೆ ಸಿನಿಮಾ ಮಾಡುತ್ತಿದ್ದಾರಂತೆ. ಮಾಡಲಿ ಬಿಡಿ. ಇವರ ಸಿನಿಮಾ ರಿಲೀಸ್​ ಆದ ಮೇಲೆ ಕರ್ನಾಟಕದ ರೈತನೊಬ್ಬನ ಮಗ, ಊಟ ತಿಂಡಿಗೂ ಕಷ್ಟಪಟ್ಟು ಐಎಎಸ್​ ಮಾಡಿದವನ ಜೀವನ ಚರಿತ್ರೆ, ಒಬ್ಬ ಆಂಧ್ರದ ವ್ಯಕ್ತಿಯ ಸಹವಾಸ… ಜೀವನ ಏನಾಯ್ತು ಅಂತ 2015ರ ಏಪ್ರಿಲ್​ 14ರ ಸಿಬಿಐ ವರದಿ ಆಧಾರಿಸಿ ನಾವೂ ಒಂದು ಸಿನಿಮಾ ಮಾಡ್ತೀವಿ’ ಎನ್ನುವ ಮೂಲಕ ಪರೋಕ್ಷವಾಗಿ ಐಎಎಸ್​ ಅಧಿಕಾರಿ ದಿ. ಡಿ.ಕೆ. ರವಿ ಸಾವಿನ ಬಗ್ಗೆ ಸಾ.ರಾ.ಮಹೇಶ್​ ಪ್ರಸ್ತಾಪಿಸಿದರು.

    ರೋಹಿಣಿ ಸಿಂಧೂರಿ ಬಯೋಪಿಕ್​ ರಿಲೀಸ್​ ಆಗುತ್ತಿದ್ದಂತೆ ಸಾ.ರಾ.ಮಹೇಶ್​ ಒಂದು ಸಿನಿಮಾ ಮಾಡ್ತಾರಂತೆ!

    ರೋಹಿಣಿ ಸಿಂಧೂರಿ ಮೈಸೂರಿಗೆ ಜಿಲ್ಲಾಧಿಕಾರಿ ಆಗಿ ಬಂದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಅವರ ವಿರುದ್ಧ ವಾಕ್ಸಮರ ಮಾಡುತ್ತಲೇ ಬಂದಿರುವ ಸಾ.ರಾ.ಮಹೇಶ್​, ಸಿಂಧೂರಿ ಇದೀಗ ಜಿಲ್ಲೆಯಿಂದ ವರ್ಗಾವಣೆ ಆಗಿದ್ದರೂ ಅವರ ವಿರುದ್ಧ ಕಿಡಿಕಾರುವುದನ್ನ ಮಾತ್ರ ನಿಲ್ಲಿಸಿಲ್ಲ. ಎಲ್ಲ ಸಿನಿಮಾದಲ್ಲೂ ರಾಜಕಾರಣಿಗಳನ್ನು ಕೆಟ್ಟದಾಗಿ ತೋರಿಸಿ ಹೀಗಾಗಿದೆ. ಮೈಸೂರು ರಾಜಕಾರಣಿಗಳ್ಯಾರು ಮನುಷ್ಯರಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಐಎಎಸ್ ಅಧಿಕಾರಿಯೊಬ್ಬರ ಸಾವಿನ ಬಗ್ಗೆ ಸಿಬಿಐ ವರದಿ ಆಧರಿಸಿ ನಾವೂ ಸಿನಿಮಾ ತೆಗೆಯುತ್ತೇವೆ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

    ರೋಹಿಣಿ ಸಿಂಧೂರಿ ಮನೆಯ ವಿದ್ಯುತ್​ ಬಿಲ್​ ತಿಂಗಳಿಗೆ 50 ಸಾವಿರ ರೂ., ಈಜುಕೊಳಕ್ಕೆ ಕುಡಿವ ನೀರು ಬಳಕೆ…

    ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts