More

    ನಿವೃತ್ತ ಸೈನಿಕನಿಗೆ ತವರಿನಲ್ಲಿ ಅದ್ದೂರಿ ಸ್ವಾಗತ


    ಮಡಿಕೇರಿ: ಭಾರತೀಯ ಭೂ ಸೇನೆಯಲ್ಲಿ 18 ವರ್ಷಗಳು ಸೇವೆ ಸಲ್ಲಿಸಿ ನಿವೃತ್ತಗೊಂಡಿರುವ ಕೊಡಗು-ಹಾಸನ ಗಡಿಭಾಗದಲ್ಲಿರುವ ಹಣಸೆ ಗ್ರಾಮದ ಶಶಿಕುಮಾರ್ ಅವರನ್ನು ಶನಿವಾರಸಂತೆಯಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.


    ಶಶಿಕುಮಾರ್ ಜ.31 ರಂದು ನಿವೃತ್ತಿಗೊಂಡಿದ್ದರು. ಗಡಿಯಿಂದ ಬಂದ ಅವರು ಶನಿವಾರ ತಮ್ಮ ಹುಟ್ಟೂರು ಹಣಸೆ ಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಗ್ರಾಮಸ್ಥರು, ಸ್ನೇಹಿತರ ಬಳಗದಿಂದ ತೆರೆದ ವಾಹನದಲ್ಲಿ ಶಶಿಕುಮಾರ್ ಅವರಿಗೆ ಹೂವಿನ ಹಾರಹಾಕಿ ಸ್ವಾಗತಿಸಿದರು. ನಂತರ ಪಟ್ಟಣದ ಐ.ಬಿ. ರಸ್ತೆಯಲ್ಲಿರುವ ನಿವೃತ್ತ ಸೈನಿಕ ಸಂಘಕ್ಕೆ ಶಶಿಕುಮಾರ್ ಅವರನ್ನು ಬರಮಾಡಿಕೊಳ್ಳಲಾಯಿತು.


    ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಶಿಕುಮಾರ್, ಸೇನೆಯಲ್ಲಿ ಸೇವೆ ಸಲ್ಲಿಸುವುದು ಪುಣ್ಯದ ಕೆಲಸ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವಕರು ಸೇನೆಗೆ ಸೇರಲು ಆಸಕ್ತಿ ವಹಿಸಬೇಕು ಎಂದರು.


    ಇಂದು 10ನೇ ತರಗತಿ ಹಂತದ ವಿದ್ಯಾರ್ಥಿಗಳಿಂದ ಹಿಡಿದು ಡಿಪ್ಲೊಮಾ, ಪದವಿ ಹಂತದ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಗೆ ಪೂರಕವಾದ ಪರೀಕ್ಷೆ ಬರೆಯಲು ಅವಕಾಶ ಇದೆ. ಇದರ ಜತೆಯಲ್ಲಿ ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಸೇನೆಗೆ ಸೇರಲು ಅವಕಾಶ ಇದೆ. ಈ ದಿಸೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಸೇನೆಗೆ ಸೇರುವಂತೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಶಶಿಕುಮಾರ್ ಪಾಲಕರು, ಪತ್ನಿ, ನಿವೃತ್ತ ಸೈನಿಕ ಹಣಸೆ ಆನಂದ್, ಹಣಸೆ ಗ್ರಾಮದ ಪ್ರಮುಖರು, ಸ್ನೇಹಿತರ ಬಳಗದ ವಿನೋದ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts