More

    ಹೃದಯಸ್ತಂಭನ ಆಗಲಿದ್ದ ಆ ವ್ಯಕ್ತಿಗೆ ತನ್ನ ಹೃದಯವನ್ನೇ ಕೊಟ್ಟು ಸಾರ್ಥಕತೆ ಮೆರೆದ ಬಂಗಾರಪೇಟೆ ವ್ಯಕ್ತಿ

    ಬೆಂಗಳೂರು: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 50 ವರ್ಷದ ಪುರುಷನಿಗೆ ಮಿದುಳು ನಿಷ್ಕ್ರಿಯಗೊಂಡಿದ್ದ 38 ವರ್ಷದ ವ್ಯಕ್ತಿಯ ಹೃದಯ ಕಸಿ ಮಾಡುವ ಮೂಲಕ ಎಂ.ಎಸ್​. ರಾಮಯ್ಯ ನಾರಾಯಣ ಹೃದಯ ಕೇಂದ್ರದ ವೈದ್ಯರು ರೋಗಿಗೆ ಮರು ಜೀವನ ನೀಡಿದ್ದಾರೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ಮೂಲದ 38 ವರ್ಷದ ವ್ಯಕ್ತಿಯೊಬ್ಬರು ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ. ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಈ ವ್ಯಕ್ತಿಯ ಮಿದುಳು ನಿಷ್ಕ್ರಿಯಗೊಂಡಿತ್ತು. ಇನ್ನು ಮಗ ಬದುಕೋದೇ ಇಲ್ಲ ಎಂದು ತಿಳಿದು ಕಂಗಾಲಾದ ಕುಟುಂಬಸ್ಥರು ನೋವಲ್ಲೂ ಮಗನ ಅಂಗಾಂಗ ದಾನ ಮಾಡಿ ನಾಲ್ವರ ಜೀವ ಉಳಿಸಿದ್ದಾರೆ. ಅದರಲ್ಲಿ ಎಂ.ಎಸ್​. ರಾಮಯ್ಯ ನಾರಾಯಣ ಹೃದಯ ಕೇಂದ್ರದಲ್ಲಿ ಹೃದಯ ಕಸಿಗೆ ಒಳಗಾದ ವ್ಯಕ್ತಿಯೂ ಒಬ್ಬರು.

    ಎಂ.ಎಸ್​. ರಾಮಯ್ಯ ನಾರಾಯಣ ಹೃದಯ ಕೇಂದ್ರದಲ್ಲಿ ಈ ವರ್ಷ ನಡೆದ ಎರಡನೇ ಹೃದಯ ಕಸಿ ಶಸ್ತ್ರಚಿಕಿತ್ಸೆ ಇದಾಗಿದ್ದು, ಇದರೊಂದಿಗೆ ಆಸ್ಪತ್ರೆಯಲ್ಲಿ ಈವರೆಗೂ 39 ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಕೇಂದ್ರದ ಮುಖ್ಯಸ್ಥ ಹಾಗೂ ಹೃದಯ ಕಸಿ ತಜ್ಞ ಡಾ. ನಾಗಮಲೇಶ್​ ತಿಳಿಸಿದ್ದಾರೆ.

    ಮಿದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಹೃದಯವನ್ನು ಜಯನಗರದ ಆರ್​ವಿ ಆಸ್ಪತ್ರೆಯಿಂದ ಝಿರೋ ಟ್ರಾಫಿಕ್​ ಮೂಲಕ 20 ನಿಮಿಷಗಳಲ್ಲಿ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಯಿತು. ಮೂರು ಗಂಟೆ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ರೋಗಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಯಿತು ಎಂದು ಡಾ.ನಾಗಮಲೇಶ್​ ಹೇಳಿದರು.

    ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗೆ ಎರಡು ತಿಂಗಳ ಹಿಂದೆ ಹೃದಯಾಘಾತವಾಗಿತ್ತು. ಆದರೆ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದು ತಡವಾಗಿದ್ದರಿಂದ ಅವರ ಹೃದಯ ಬಹುತೇಕ ಹಾಳಾಗಿತ್ತು. ಇದರಿಂದ ಅವರಿಗೆ ಯಾವಾಗ ಬೇಕಾದರೂ ಹೃದಯಸ್ತಂಭನ ಆಗುವ ಸಾಧ್ಯತೆಗಳಿತ್ತು. ಹಾಗಾಗಿ ಹೃದಯ ಕಸಿಗೆ ಹೆಸರು ನೋಂದಾಯಿಸಿ ಚಿಕಿತ್ಸೆ ಒದಗಿಸಲಾಗಿತ್ತು ಎಂದು ಮಾಹಿತಿ ನೀಡಿದರು.

    ನಾಲ್ವರಿಗೆ ಜೀವ ದಾನ: ಬಂಗಾರಪೇಟೆ ಮೂಲದ 38 ವರ್ಷದ ವ್ಯಕ್ತಿಯೊಬ್ಬರು ರಸ್ತೆ ಅಪಘಾತದಲ್ಲಿ ಗಂಭಿರ ಗಾಯಗೊಂಡಿದ್ದರು. ಬೆಂಗಳೂರು ನಗರದ ಆಸ್ಟರ್​ ಆರ್​.ವಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಸಮ್ಮಿತಿಸಿದರು. ಅವರ ಹೃದಯವನ್ನು ರಾಮಯ್ಯ ನಾರಾಯಣ ಹೃದಯ ಕೇಂದ್ರದಲ್ಲಿ 50 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಉಳಿದಂತೆ ಆಸ್ಟರ್​ ಆರ್​.ವಿ. ಆಸ್ಪತ್ರೆಯಲ್ಲಿ ಲಿವರ್​ (ಯಕೃತ್​) ಮತ್ತು ಒಂದು ಕಿಡ್ನಿ ಕಸಿ ಮಾಡಲಾಗಿದೆ. ಎನ್​ಯು ಆಸ್ಪತ್ರೆಯಲ್ಲಿ ಒಂದು ಕಿಡ್ನಿ ಕಸಿ ಮಾಡುವ ಮೂಲಕ ನಾಲ್ವರಿಗೆ ಜೀವದಾನ ಮಾಡಲಾಗಿದೆ. ಜತೆಗೆ ಚರ್ಮವನ್ನು ವಿಕ್ಟೋರಿಯಾ ಆಸ್ಪತ್ರೆಯ ಸ್ಕಿನ್​ ಬ್ಯಾಂಕ್​ ಹಾಗೂ ಕಣ್ಣು (ಕಾನಿರ್ಯಾ)ನ್ನು ಮಿಂಟೋ ಕಣ್ಣಿನ ಬ್ಯಾಂಕ್​ಗೆ ನೀಡಲಾಗಿದೆ.

    ಕೆಎಸ್ಸಾರ್ಟಿಸಿ ಬಸ್​-ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ದಂಪತಿ ಸ್ಥಳದಲ್ಲೇ ಸಾವು

    ಮಹಿಳೆಯ ಕಾಟ ಸಹಿಸಲಾಗದೆ ಯುವಕ ಆತ್ಮಹತ್ಯೆ: ಸಾವಿಗೂ ಮುನ್ನ ಆತ ಮಾಡಿಟ್ಟ ವಿಡಿಯೋದಲ್ಲಿದೆ ರಹಸ್ಯ

    ಒಂದೇ ದಿನ ವಿದ್ಯಾರ್ಥಿ-ಶಿಕ್ಷಕಿ ನಾಪತ್ತೆ! ಮದ್ವೆ ಆಗಿ ಬಾಲಕನ ಜತೆ ಸಂಸಾರ ನಡೆಸುತ್ತಿದ್ದಾಕೆ ಸಿಕ್ಕಿಬಿದ್ದದ್ದೇ ರೋಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts