More

    ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘದ ಸಂಸ್ಥಾಪಕ ಬಿ.ಎಲ್. ಲಕ್ಕೇಗೌಡ ಇನ್ನಿಲ್ಲ

    ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘದ ಸಂಸ್ಥಾಪಕರೂ ಆದ ವಕೀಲ ಬಿ.ಎಲ್. ಲಕ್ಕೇಗೌಡ ಅವರು ನಿಧನರಾದರು.

    ಭಾರತ್ ಸಮೂಹ ಶಿಕ್ಷಣ ಸಂಸ್ಥೆ, ಭಾರತ್ ಕೋ ಆಪರೇಟೀವ್ ಬ್ಯಾಂಕ್ ಸ್ಥಾಪಿಸಿದ ಲಕ್ಕೇಗೌಡರು, ನಾಡಪ್ರಭು ಕೆಂಪೇಗೌಡ ಕೇಂದ್ರ ಸಮಿತಿ ಅಧ್ಯಕ್ಷರಾಗಿ ಬೆಂಗಳೂರಿನಲ್ಲಿ ದಶಕಗಳಿಂದ ಅನೇಕ ಕನ್ನಡಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

    ಬಿ.ಎಲ್. ಲಕ್ಕೇಗೌಡರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಲಕ್ಕೇಗೌಡರ ನೀಧನ ಸುದ್ದಿ ಆಘಾತ ಉಂಟುಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ, ಬಂಧು ಬಳಗ ಹಾಗೂ ಅವರ ಅಭಿಮಾನಿಗಳಿಗೆ ದೇವರು ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವೇಗೌಡರು ಟ್ವೀಟ್​ ಮಾಡಿದ್ದಾರೆ.

    ದಕ್ಷ ಅಧಿಕಾರಿ, ವಕೀಲರು, ಶಿಕ್ಷಣ ಸಂಸ್ಥೆಗಳ ಸ್ಥಾಪಕರು ಹಾಗೂ ಸಹಕಾರಿ ಧುರೀಣರಾಗಿ ಜನಸೇವೆಯನ್ನೇ ದೈವವೆಂದು ಭಾವಿಸಿ ತಮ್ಮ ಇಡೀ ಬದುಕನ್ನು ಸಮಾಜಕ್ಕೇ ಮೀಸಲಿಟ್ಟಿದ್ದ ಬಿ.ಎಲ್.ಲಕ್ಕೇಗೌಡರ ನಿಧನ ನನಗೆ ತೀವ್ರ ದುಃಖವುಂಟು ಮಾಡಿದೆ. ಅನೇಕ ಕ್ಷೇತ್ರಗಳಲ್ಲಿ ಸಮಾಜಕ್ಕಾಗಿ ಅವರು ಕೊಟ್ಟ ಕೊಡುಗೆ ಅನನ್ಯ. ಆ ಹಿರಿಯ ಚೇತನಕ್ಕೆ ನನ್ನ ಶ್ರದ್ಧಾಪೂರ್ವಕ ಸಂತಾಪಗಳು. ಅವರ ಕುಟುಂಬಕ್ಕೆ ಲಕ್ಕೇಗೌಡರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಚ್​ಡಿಕೆ ಟ್ವೀಟ್ ಮಾಡಿದ್ದಾರೆ.

    ನಟ ಪುನೀತ್​ಗಾಗಿ 500 ಕಿ.ಮೀ. ದೂರದಿಂದ ಓಟದ ಮೂಲಕವೇ ಬೆಂಗಳೂರಿಗೆ ಆಗಮಿಸುತ್ತಿದ್ದಾಳೆ 3 ಮಕ್ಕಳ ತಾಯಿ!

    ವಿವಾದದ ಸುಳಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ: ಮಾದಪ್ಪ ಭಕ್ತರಿಂದ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts