More

    ‘ವಿಧಾನಸಭೆ ಚುನಾವಣೆ ವೇಳೆ 12 ಸಚಿವರ CD ಹೊರಬರುತ್ತೆ… 30 ಕೋಟಿ ರೂಪಾಯಿಗೆ ಒಂದು ಮಂಚ ಕೊಟ್ಟಿದ್ರು’

    ಬಾಗಲಕೋಟೆ: ‘ಮುಂಬರುವ ವಿಧಾನಸಭೆ ಚುನಾವಣೆ ವೇಳೆ ರಾಜ್ಯದ 12 ಸಚಿವರ ಸಿಡಿಗಳು ಹೊರಗೆ ಬರ್ತಾವೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ‘ಕರ್ನಾಟಕದಲ್ಲಿ ಆದಂತಹ ಬೆಳವಣಿಗೆ ಮಹಾರಾಷ್ಟ್ರದಲ್ಲೂ ನಡೆಯುತ್ತಿದೆ. ಇಲ್ಲಿನಂತೆಯೇ ಶಿವಸೇನೆ ಶಾಸಕರನ್ನು ತಗೊಂಡಿದ್ದಾರೆ. ಹಿಂದೆ ನಮ್ಮ ರಾಜ್ಯದ ಕೆಲ ಶಾಸಕರಿಗೆ 30 ಕೋಟಿ ರೂಪಾಯಿಗೆ ಒಂದು ಮಂಚ ಕೊಟ್ಟಿದ್ರು. ಸಿಡಿ ಇವೆ, ಅವರೆಲ್ಲಾ ಸ್ಟೇ ತೆಗೆದುಕೊಂಡಿದ್ದಾರೆ. ಸಭಾಪತಿಗಳಿಗೆ ಸಿಡಿಯಲ್ಲಿ ಏನಿದೆ ನೋಡಿ ಸರ್ ಅಂದಿದ್ದೆ. ಸ್ಟೇ ಕೊಟ್ರಲ್ಲ, ಜಡ್ಜ್ ಅವರಾದ್ರೂ ನೋಡಬೇಕಲ್ಲ… ಸದಾನಂದಗೌಡ್ರು ಸ್ಟೇ ತಗೊಂಡಾರ… ರಾಜ್ಯದ 12 ಮಂತ್ರಿಗಳು ಸ್ಟೇ ತಗೊಂಡಾರ… ಆದರೂ ವಿಧಾನಸೌಧದಲ್ಲಿ ಬಹಳ ಗೌರವಾನ್ವಿತರಂತೆ ಮಾತಾಡ್ತಾರೆ. ಛೇ… ಛೇ…’ ಎಂದು ವ್ಯಂಗ್ಯವಾಡಿದರು.

    ‘ಬರುತ್ತೆ.. ಸಿಡಿ ಬರುತ್ತೆ.. ವಿಧಾನಸಭೆ ಚುನಾವಣೆಯಲ್ಲಿ ಸಿಡಿ ಹೊರ ಬರುತ್ತೆ. 17ರಿಂದ 18 ಸಿಡಿಗಳು ಇವೆ. ಅವರೇ ಸ್ಟೇ ತಗೊಂಡಾರಲ್ಲ… ಅದರಲ್ಲಿ ಒಬ್ಬ ಗೋಪಾಲ ನಾನು ಏನೂ ತಗೊಂಡಿಲ್ಲ‌ ಅಂದ. ಆದರೆ, ಅವರ ಹೈಟ್, ವೇಟ್​ಗೆ ಏನು ಮಾಡಾಕಾಗಲ್ಲ’ ಎಂದು ಇಬ್ರಾಹಿಂ ಲೇವಡಿ ಮಾಡಿದರು.

    ಕೋತಿರಾಜ್ ಥರಾ ಸರಸರನೆ ಚಿತ್ರದುರ್ಗ ಕೋಟೆ ಏರಿದ IPS ಅಧಿಕಾರಿ​! ಮಂಗ್ಳೂರು ಕಮೀಷನರ್​ರ ಸಾಹಸಕ್ಕೆ ಮನಸೋತ ಜನ

    ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

    ಹೆಂಡ್ತಿ ಬಂದ್ಲು, ಗಂಡ ಹೋದ! ಕಾಡಿಬೇಡಿ ಪತ್ನಿಯನ್ನು ತವರಿಂದ ಕರೆತಂದವ ಮರುದಿನ ಹೀಗಾ ಮಾಡ್ಹೋದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts