More

    13 ಶತಕೋಟಿ ವರ್ಷದ ಹಿಂದಿನ ನಕ್ಷತ್ರಪುಂಜ; ಚಿತ್ರ ರವಾನಿಸಿದ ಜೇಮ್ಸ್​ ವೆಬ್​ಟೆಲಿಸ್ಕೋಪ್

    ವಾಷಿಂಗ್ಟನ್: ಹದಿಮೂರು ಶತಕೋಟಿ ವರ್ಷದ ಹಿಂದೆ ಜಗತ್ತು ಹೇಗಿತ್ತು? ಆಗಸದಲ್ಲಿ ನಕ್ಷತ್ರಪುಂಜಗಳು ಹೇಗಿದ್ದವು ಎಂಬ ಕುತೂಹಲಕ್ಕೆ ಉತ್ತರದ ನಿಟ್ಟಿನಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ. ವಿಶ್ವದ ಪ್ರಬಲ ಟೆಲಿಸ್ಕೋಪ್, ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಜೇಮ್್ಸ ವೆಬ್ ಸ್ಪೇಸ್ ಟೆಲಿಸ್ಕೋಪ್, ಎಸ್​ಎಂಎಸಿಎಸ್0723 ಹೆಸರಿನ ನಕ್ಷತ್ರಪುಂಜ ಸಮೂಹದ ಚಿತ್ರವನ್ನು ಜುಲೈ 12ರಂದು ಸೆರೆಹಿಡಿದು ಕಳುಹಿಸಿದೆ. ಇದು, ವಿಶ್ವದ ಸೃಷ್ಟಿಗೆ ಕಾರಣವಾದ ಬಿಗ್​ಬ್ಯಾಂಗ್ (ಮಹಾಸ್ಪೋಟ) ಬಳಿಕ ಆರಂಭದಲ್ಲಿ ಅಂದರೆ ಸುಮಾರು 13 ಶತಕೋಟಿ ವರ್ಷಗಳ ಹಿಂದೆ ಸೃಷ್ಟಿಯಾದ ಗ್ಯಾಲಕ್ಸಿಯ ಚಿತ್ರ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ನಕ್ಷತ್ರಪುಂಜದ ಸಮೂಹವು ಅಗಾಧ ಆಕಾಶದ ಅತಿ ಸೂಕ್ಷ್ಮ ಅಥವಾ ಚಿಕ್ಕ ಭಾಗವಾಗಿದೆ ಎಂದು ನಾಸಾದ ಆಡಳಿತಾಧಿಕಾರಿ ಬಿಲ್ ನೆಲ್ಸನ್ ತಿಳಿಸಿದ್ದಾರೆ.

    ಇನ್​ಫ್ರಾರೆಡ್ ಕ್ಯಾಮರಾ: ಫೋಟೊವನ್ನು ವೆಬ್ ದೂರದರ್ಶಕದ ಇನ್​ಫ್ರಾರೆಡ್ ಕ್ಯಾಮರಾದಿಂದ, ಬೆಳಕಿನ ವಿವಿಧ ತರಂಗಾಂತರಗಳಲ್ಲಿ ಹನ್ನೆರಡೂವರೆ ಗಂಟೆಗಳ ಅವಧಿಯಲ್ಲಿ ಸೆರೆ ಹಿಡಿಯಲಾಗಿದೆ. 100 ಕೋಟಿ ಡಾಲರ್ ವೆಚ್ಚದಲ್ಲಿ ನಿರ್ವಿುಸಲಾಗಿರುವ ಈ ಟೆಲಿಸ್ಕೋಪ್, 6 ತಿಂಗಳ ತಯಾರಿ ಬಳಿಕ ಈ ಫೋಟೊ ಕಳುಹಿಸಿದೆ. ಇದು ಅಂತರಿಕ್ಷದಲ್ಲಿ 10 ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ನಾಸಾ ಅಂದಾಜಿಸಿತ್ತು. ಇದೀಗ ಈ ದೂರದರ್ಶಕದಲ್ಲಿ ಸಾಕಷ್ಟು ಇಂಧನ ಇರುವ ಕಾರಣ 20 ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.

    ಐತಿಹಾಸಿಕ ಕ್ಷಣ: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಚಿತ್ರವನ್ನು ಶ್ವೇತಭವನದಲ್ಲಿ ಬಿಡುಗಡೆ ಮಾಡಿದ್ದು, ಇದು ಐತಿಹಾಸಿಕ ದಿನ ಎಂದು ಬಣ್ಣಿಸಿದ್ದಾರೆ. ಚಿತ್ರವು ನೂರಾರು ಚುಕ್ಕೆಗಳು, ಗೆರೆಗಳು, ಸುರುಳಿಗಳು, ಬಿಳಿ, ಹಳದಿ, ಕಿತ್ತಳೆ ಮತ್ತು ಕೆಂಪುಬಣ್ಣದ ಸುಳಿಗಳನ್ನು ಹೊಂದಿದ್ದು, ಚಿತ್ರವು ಬ್ರಹ್ಮಾಂಡದ ಒಂದು ಚಿಕ್ಕ ಚುಕ್ಕೆ ಎಂದು ನಾಸಾದ ಬಿಲ್ ನೆಲ್ಸನ್ ತಿಳಿಸಿದ್ದಾರೆ. ಪೂರ್ಣ ಪ್ರಮಾಣದ ಕಲರ್ ಚಿತ್ರವನ್ನು ನಾಸಾವು ಮೇರಿಲ್ಯಾಂಡ್​ನಲ್ಲಿರುವ ಗೊಡ್ವಾಡ್ ಸ್ಪೇಸ್ ಫ್ಲೈ ಸೆಂಟರ್​ನಲ್ಲಿ ಬಿಡುಗಡೆ ಮಾಡಲಿದೆ.

    ಹೀಗಿದೆ ಟೆಲಿಸ್ಕೋಪ್

    • ಜೇಮ್್ಸ ವೆಬ್ ಸ್ಪೇಸ್ ಟೆಲಿಸ್ಕೋಪ್, ವಿಶ್ವದ ಅತ್ಯಂತ ಪ್ರಬಲ ಬಾಹ್ಯಾಕಾಶ ದೂರದರ್ಶಕ ವಾಗಿದೆ. ಇದನ್ನು ನಾರ್ತ್​ರಾಪ್ ಗ್ರುಮನ್ ಕಾರ್ಪ್ ನಿರ್ವಿುಸಿದೆ.
    • ನಾಸಾವು ಟೆಲಿಸ್ಕೋಪನ್ನು ಕಳೆದ ಡಿಸೆಂಬರ್​ನಲ್ಲಿ ದ. ಅಮೆರಿಕದ ಫ್ರೆಂಚ್ ಗಯಾನದಿಂದ ಏರಿಯನ್ 5 ರಾಕೆಟ್ ನಿಂದ ಉಡಾಯಿಸಿತ್ತು. ಈ ದೂರದರ್ಶಕವನ್ನು ಭೂಮಿಯಿಂದ 16 ಲಕ್ಷ ಕಿ.ಮೀ ದೂರದಲ್ಲಿ ಸ್ಥಾಪಿಸಲಾಗಿದೆ. ಅಂತರಿಕ್ಷದಲ್ಲಿ ತೇಲುತ್ತ ನಿಗೂಢ ಆಕಾಶದತ್ತ ಕಣ್ಣಿಟ್ಟಿರುತ್ತದೆ.
    • ಈ ದೂರದರ್ಶಕವು ಅತಿ ಸೂಕ್ಷ್ಮಗ್ರಾಹಿ ಇನ್ಪಾರೆಡ್ ಕ್ಯಾಮರಾಗಳನ್ನು ಹೊಂದಿದೆ. 6.5 ಮೀಟರ್ ವ್ಯಾಸ ಇರುವ ಚಿನ್ನದ ಲೇಪಿತ ಕನ್ನಡಿಯಿರುವ ಈ ಟೆಲಿಸ್ಕೋಪ್ ಅತಿದೂರದಲ್ಲಿರುವ ವಸ್ತುಗಳನ್ನು ಸೆರೆ ಹಿಡಿದು ರವಾನಿಸುವ ಸಾಮರ್ಥ್ಯ ಹೊಂದಿದೆ. ದೂರದರ್ಶಕದಲ್ಲಿರುವ ಕನ್ನಡಿಯನ್ನು ಮಡಚಬಹುದಾಗಿದೆ.
    • ಜೇಮ್್ಸ ವೆಬ್ ಅನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲು ಚಿಪ್ಪಿನಂತೆ ವಿಶೇಷ ರಕ್ಷಾಕವಚ ನಿರ್ವಿುಸಲಾಗಿದೆ. ಟೆನಿಸ್ ಕೋರ್ಟ್ ಗಾತ್ರದಷ್ಟಿರುವ ಈ ರಕ್ಷಾಕವಚವು ಐದು ಅತಿ ತೆಳ್ಳನೆಯ (ತಲೆಕೂದಲಿನಷ್ಟು ) ಪದರಗಳನ್ನು ಹೊಂದಿದೆ.
    • ಜೇಮ್್ಸ ವೆಬ್ ದೂರದರ್ಶಕವು ಕ್ಯಾರಿನಾ ನೆಬ್ಯುಲಾ ಮತ್ತು ಸದರ್ನ್ ರಿಂಗ್ ನೆಬ್ಯಲಾ ಸೇರಿದಂತೆ ಹೊಸ ನಕ್ಷತ್ರಗಳ ಅಧ್ಯಯನ ಮಾಡಲಿದೆ. ಪ್ರತಿಯೊಂದು ಭೂಮಿಯಿಂದ ಸಾವಿರಾರು ಬೆಳಕಿನ ವರ್ಷಗಳ ದೂರದಲ್ಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts