More

    ಒಂದು ವಿಭಿನ್ನ ಪ್ರತಿಭಟನೆ… ತಮ್ಮ ವಿವಾಹಕ್ಕೆ ಕುಂದು ತಂದ ಲಾಕ್​ಡೌನ್ ನಿಯಮಾವಳಿಗಳ ವಿರುದ್ಧ ಇಟಲಿಯ ಯುವತಿಯರು ಮಾಡಿದ್ದೇನು?

    ರೋಮ್: ಇಟಲಿಯ ಇತ್ತೀಚಿನ COVID-19 ಲಾಕ್‌ಡೌನ್ ನಿಯಮಾವಳಿಗಳ ವಿರುದ್ಧ ಒಂದು ರೀತಿಯ ವಿಭಿನ್ನ ಹಠಾತ್ ಪ್ರತಿಭಟನೆ ರೋಮ್‌ನ ಬೀದಿಗಳಲ್ಲಿ ನಡೆದಿದೆ.
    ವಿವಾಹ ಸಮಾರಂಭಗಳಿಗೆ ಅನುಮತಿ ನೀಡದಿರುವುದಕ್ಕೆ ಕೋಪಗೊಂಡ ಮಹಿಳೆಯರ ಗುಂಪು, ವೈಭವದ ವಿವಾಹದ ಉಡುಗೆ ಧರಿಸಿ, ಇತ್ತೀಚಿನ ಲಾಕ್‌ಡೌನ್ ಆದೇಶದ ವಿರುದ್ಧ ರ್ಯಾಲಿ ನಡೆಸಿತು.
    ಅಂದಾಜು 15-ಮಹಿಳೆಯರು, ಎಲ್ಲರೂ ಬಿಳಿ ಮಾಸ್ಕ್ ಮತ್ತು ಬಿಳಿ ಪ್ಯಾರಾಸೋಲ್​​ಗಳನ್ನು ಧರಿಸಿ, ಕೈಯಲ್ಲಿ ಪ್ಲೆಕಾರ್ಡ್​​ಗಳನ್ನು ಹಿಡಿದು ಟ್ರೆವಿ ಕಾರಂಜಿ ಮುಂದೆ ನಿಂತಿದ್ದರು. ಅದೇ ಗುಂಪು ನಂತರ ಸಂಸತ್ತಿನ ಕಟ್ಟಡಗಳ ಹೊರಗಡೆ ಲಾಕ್​ಡೌನ್​​ ನಿಯಮಗಳಿಂದ ತೊಂದರೆಗೀಡಾದ ಇತರ ಕೈಗಾರಿಕೆಗಳ ಪ್ರತಿಭಟನಾಕಾರರೊಂದಿಗೆ ಹೊರಟಿತು.

    ಇದನ್ನೂ ಓದಿ: ಚೀನಾ ವಿರುದ್ಧ ಸಮರಕ್ಕೆ ಅಮೆರಿಕ ಸೇನೆಯ ಬೆಂಬಲ ಭಾರತಕ್ಕೆ ಎಂದ ಟ್ರಂಪ್‌

    ಅವಿವಾಹಿತರ ಹಠಾತ್ ಪ್ರತಿಭಟನೆ ಎಂಬ ಹೆಸರಿನಲ್ಲಿ ಈ ಪ್ರತಿಭಟನೆಯನ್ನು ಇಟಲಿಯ ವಿವಾಹ ಸಂಘಟನೆ ಆಯೋಜಿಸಿತ್ತು.
    ‘ನಿರ್ಬಂಧಗಳಿಲ್ಲದ ವಿವಾಹಗಳು’, ‘ನೀವು ನಮ್ಮ ಮದುವೆಗಳನ್ನು ಮುರಿದಿದ್ದೀರಿ’, ‘ಮದುವೆಗಳಿಗೆ ಚರ್ಚ್​​​​​​​​​​​​​​​​​​​​ ಬಾಗಿಲುಗಳನ್ನು ಮುಚ್ಚಲಾಗಿದೆ’ ಎಂಬ ಸಂದೇಶಗಳಿರುವ ಪ್ಲ್ಯಾಕಾರ್ಡ್‌ಗಳನ್ನು ಹೊಂದಿರುವ ಮಹಿಳೆಯರನ್ನು ಹಠಾತ್ ಪ್ರತಿಭಟನೆಯ ದೃಶ್ಯಾವಳಿ ವೀಡಿಯೊದಲ್ಲಿದೆ.
    ” ಚರ್ಚ್ ಹೊರತುಪಡಿಸಿ ರೆಸ್ಟೋರೆಂಟ್‌ಗಳು ನನಗೆ ಸಿಗುತ್ತಿಲ್ಲ, ಆದ್ದರಿಂದ ಮುಂದಿನ ವರ್ಷಕ್ಕೆ ಮದುವೆಯಾಗಲು ನಿರ್ಧರಿಸಿದ್ದೇನೆ. ಏಕೆಂದರೆ ಆಗ ಎಲ್ಲವೂ ಚೆನ್ನಾಗಿರುತ್ತದೆ, ನಾನು ಅಂತಿಮವಾಗಿ ಮದುವೆಯಾಗಬಹುದು ಎಂಬ ಆಶಾಭಾವನೆ ಇದೆ. ಎನ್ನುತ್ತಾಳೆ 22 ವರ್ಷದ ಒಬ್ಬ ಪ್ರತಿಭಟನಾಗಾರ್ತಿ.
    COVID-19 ಹರಡುವುದನ್ನು ತಡೆಗಟ್ಟಲು ಇಟಲಿಯಲ್ಲಿ ಎರಡು ತಿಂಗಳು ವಿವಾಹ ಮಹೋತ್ಸವ ಸೇರಿದಂತೆ ಎಲ್ಲ ಸದ್ಯ ಅನಿವಾರ್ಯವಲ್ಲದ ವ್ಯವಹಾರಗಳು ಮತ್ತು ಚಟುವಟಿಕೆಗಳನ್ನು ನಿಷೇಧಿಸಿದ ಕೆಲವೇ ದಿನಗಳಲ್ಲಿ ಈ ಪ್ರತಿಭಟನೆ ನಡೆದಿದೆ.
    ಆದರೆ ಲಾಕ್‌ಡೌನ್ ಆದೇಶದ ಮೊದಲು, ರೋಮ್‌ನ ಸಿಟಿ ಹಾಲ್‌ನ ಅಧಿಕಾರಿಗಳು ಚರ್ಚ್ ಹೊರತುಪಡಿಸಿ ಇತರೆಡೆ ವಿವಾಹ ಮಹೋತ್ಸವ ಬುಕ್ ಮಾಡಿದ ದಂಪತಿಗೆ ವಿನಾಯಿತಿ ನೀಡಿದ್ದರು. ಅತಿಥಿಗಳ ಸಂಖ್ಯೆಯನ್ನು ಕೇವಲ ಇಬ್ಬರಿಗೆ ಸೀಮಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಾನಾ? ನೀನಾ?… ಜೋಶ್​​ನಲ್ಲಿ ಬಾಲಾಪರಾಧಿ ಮಗನನ್ನು ಕುಸ್ತಿ ಪಂದ್ಯಕ್ಕೆ ಕರೆತಂದ , ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts