More

    ನಗರಸಭೆ ಚುನಾವಣೆ: ಅತೀ ಹೆಚ್ಚು ಮತ ಪಡೆದು ಗೆದ್ದಾಕೆ ಬದುಕೇ ಇಲ್ಲ! ಮತ ಎಣಿಕೆ ಮುನ್ನಾ ದಿನವೇ ಕರೊನಾಗೆ ಬಲಿ

    ರಾಮನಗರ: ಏ.27ರಂದು ನಡೆದಿದ್ದ ರಾಮನಗರ ನಗರಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, 4ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜು ಭಾರಿ ಅಂತರದ ಮತ ಪಡೆದು ಜಯಶೀಲರಾಗಿದ್ದಾರೆ. ಆದರೆ, ಗೆಲುವಿನ ಸಂಭ್ರಮ ಆಚರಿಸಲು ಅವರೇ ಬದುಕಿಲ್ಲ!

    ಮತ ಎಣಿಕೆ ಮುನ್ನಾ ದಿನವಾದ ಗುರುವಾರವೇ ಲೀಲಾ ಗೋವಿಂದರಾಜ್(42) ಕೋವಿಡ್​ಗೆ ಬಲಿಯಾಗಿದ್ದಾರೆ. ಲೀಲಾ ಅವರಲ್ಲಿ ಇತ್ತೀಚಿಗೆ ಕರೊನಾ ಸೋಂಕು ತಗುಲಿತ್ತು. ಅವರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ನಿನ್ನೆ ಕೊನೆಯುಸಿರೆಳೆದಿದ್ದರು.

    ನಗರಸಭೆ ಚುನಾವಣೆಯ ಫಲಿತಾಂಶ ಬರುವ ಮುನ್ನವೇ ಅಭ್ಯರ್ಥಿ ಮೃತಪಟ್ಟ ಸುದ್ದಿ ಕೇಳಿ ಅವರ ಬೆಂಬಲಿಗರು ಸೇರಿದಂತೆ ಕುಟುಂಬಸ್ಥರು ದುಃಖಿತರಾಗಿದ್ದರು. ಇಂದು ರಾಮನಗರ ನಗರಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, 4ನೇ ವಾರ್ಡ್​ನ 1,144 ಮತಗಳ ಪೈಕಿ 914 ಮತಗಳೊಂದಿಗೆ ಮೃತ ಲೀಲಾ ಗೋವಿಂದರಾಜು ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಖುಷಿಯಲ್ಲಿ ಮಿಂದೇಳಬೇಕಿದ್ದ ಬೆಂಬಲಿಗರು ಲೀಲಾರನ್ನ ನೆನೆದು ಕಣ್ಣೀರು ಹಾಕಿದರು.

    18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ನಾಳೆಯಿಂದ ಆಸ್ಪತ್ರೆಗೆ ಬರಬೇಡಿ: ಸಚಿವ ಡಾ.ಸುಧಾಕರ್​

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 22 ವರ್ಷದ ಯುವತಿಗೆ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts