More

    ಶಿಕ್ಷಕರ ಮಾರ್ಗದರ್ಶನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ

    ಸೊರಬ: ಗೌರವ ಹೆಚ್ಚಾದಾಗ ವ್ಯಕ್ತಿ ಸಮಾಜದ ಆಸ್ತಿಯಾಗಲು ಸಾಧ್ಯ ಎಂದು ನಿವೃತ್ತ ಪ್ರಾಚಾರ್ಯ ಜಿ.ವಿ.ಗಣಪತಿ ರಾವ್ ಹೇಳಿದರು. ಪಟ್ಟಣದಲ್ಲಿ ಶನಿವಾರ ಸುರಭಿ ವಿದ್ಯಾವರ್ಧಕ ಸಂಘ, ಲಯನ್ಸ್ ಕ್ಲಬ್‌ನಿಂದ ಹಮ್ಮಿಕೊಂಡಿದ್ದ ನಿವೃತ್ತ ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕ ಸೃಷ್ಟಿ, ಸ್ಥಿತಿ ಮತ್ತು ಲಯಗಾರನಾಗಿದ್ದು, ಬ್ರಹ್ಮಸ್ವರೂಪಿಯಾದ ಶಿಕ್ಷಕನಿಂದ ದೇಶದ ಉತ್ತಮ ಸ್ಥಿತಿಗೆ ಸತ್ಪçಜೆಗಳನ್ನು ರೂಪಿಸುವ ಹೊಣೆಗಾರಿಕೆ ಅವರ ಮೇಲಿರುತ್ತೆ. ಶಿಕ್ಷಕರ ಸತತ ಪ್ರಯತ್ನದಿಂದ ಕಲ್ಲಿನಂತಿರುವ ಮಗು ಕೂಡ ಸುಶಿಕ್ಷಿತನಾಗಿ ಸಮಾಜದಲ್ಲಿ ತನ್ನ ಬದುಕನ್ನು ರೂಪಿಸಿಕೊಳ್ಳುತ್ತಾನೆ. ಶಿಕ್ಷಕರಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಯುತ್ತದೆ ಎಂದರು. ಶಿಕ್ಷಕನನ್ನು ನೋಡಿ ಸಮಾಜ ಕಲಿಯುತ್ತದೆ ಎಂಬ ಪ್ರe್ಞೆ ಅವರಲ್ಲಿದ್ದು, ಉತ್ತಮ ನಡವಳಿಕೆ, ಸಂಸ್ಕಾರಯುತರಾಗಿದ್ದಾಗ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು. ಜಿಲ್ಲಾ, ತಾಲೂಕು ಪ್ರಶಸ್ತಿ ಪುರಸ್ಕೃತ ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಲಯನ್ಸ್ ಅಧ್ಯಕ್ಷ ಡಿ.ಎಚ್.ಕುಮಾರ್, ಕಾರ್ಯದರ್ಶಿ ಕೃಷ್ಣಾನಂದ, ವಿದ್ಯಾವರ್ಧಕ ಸಂಘದ ಎಚ್.ಎಸ್.ಮಂಜಪ್ಪ, ಇಂದೂಧರ ಗೌಡ, ಶಿವಾನಂದ ಅನೇಕಲ್, ವಲಯಾಧ್ಯಕ್ಷ ಶಿವಾನಂದ, ಟಿ.ಆರ್.ಸುರೇಶ್, ದೀಪಕ್ ದೊಂಡೆಕರ, ಎಚ್.ಎಸ್.ಪ್ರತಿಮಾ, ದಿವಾಕರ ಭಾವೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts