More

    ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ರೂ. ಘೋಷಣೆ: ಹಣ ಕೊಡೋಕು ಮುನ್ನ ಷರತ್ತು ವಿಧಿಸಿದ ಸಿಎಂ

    ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಮುಂದಿನ ಬಜೆಟ್​ನಲ್ಲಿ 3,೦೦೦ ಕೋಟಿ ರೂಪಾಯಿ ಅನುದಾನ ನೀಡಲಾಗವುದು. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ಸೇರಿದಂತೆ ಅನೇಕ ಕಾರ್ಯಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

    ಕಲಬುರಗಿ ನಗರದ ಪೊಲೀಸ್ ಮೈದಾನದಲ್ಲಿ ‘ಕಕ ಉತ್ಸವ’ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಸಾರ್ವಜನಿಕರನ್ನು ಉದ್ದೇಶಿ ಮಾತನಾಡಿದ ಸಿಎಂ, ಈಗ ಮಂಡಳಿಯಲ್ಲಿ ಬಾಕಿ ಇರುವ 2 ಸಾವಿರ‌ ಕೋಟಿ ರೂಪಾಯಿಗಳನ್ನು ಮಾರ್ಚ್ ವೇಳೆಗೆ ಸದ್ಬಳಕೆ ಮಾಡಿಕೊಡರೆ ಮಾತ್ರ ಬಜೆಟ್​ನಲ್ಲಿ ಮತ್ತೆ 3,000 ಕೋಟಿ ಹಣ ನೀಡಲಾಗುತ್ತದೆ ಎಂದು ಷರತ್ತು ಹಾಕಿದರು.

    ನಂಜುಂಡಪ್ಪ ವರದಿಯನ್ನು ಮುಂದಿನ ಐದು ವರ್ಷಗಳ ಅವಧಿಗೆ ಹೊಸ ರೂಪದಲ್ಲಿ ಪರಿಷ್ಕರಣೆ ಮಾಡಿ ಪರಿಗಣಿಸಿ ಅಭಿವೃದ್ಧಿ ವೇಗ ಹೆಚ್ಚಿಸಲಾಗುವುದು. ಬೆಂಗಳೂರಿನಲ್ಲಿ ಇರುವ 371(ಜೆ) ಕಚೇರಿಯನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದರು.

    ಕಲ್ಯಾಣ ಕರ್ನಾಟಕ ನಿಜ ಅರ್ಥದಲ್ಲಿ ಕಲ್ಯಾಣ ಮಾಡಲು ಒತ್ತು ನೀಡಿ ಕೆಲಸ ಮಾಡುವೆ. ಅಲ್ಲದೆ ಈ ಭಾಗದ ಮಾನವ ಸಂಪನ್ಮೂಲ ಸೂಚ್ಯಂಕ ಪರಿಷ್ಕರಿಸಲು ಮೌಲ್ಯ ಮಾಪನ ಮಾಡಿಸುವ ಮೂಲಕ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮ ರೂಪಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

    ಕಕ ಭಾಗದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುವುದು. ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಲಾಗುವುದು ಎಂದರು.

    ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್, ಕಲಬುರಗಿಯಲ್ಲಿ ಮೆಗಾ ಟೆಕ್ಸ್ಟ್ ಟೈಲ್ ಪಾರ್ಕ್ ನಿಮಿರ್ಸಲಾಗುವುದು. ಇಂದು ರಾತ್ರಿ ಕೇಂದ್ರ ಸಚಿವ‌ ಪಿಯೂಷ ಗೋಯಲ್ ಅವರನ್ನು ಭೇಟಿ ಮಾಡಿ ಚರ್ಚಿಸುವೆ. ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕದ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರೊಂದಿಗೆ ಚರ್ಚಿಸಿದ್ದೇನೆ. ಎರಡು ತಿಂಗಳಲ್ಲಿ ಸಮಾವೇಶ ನಡೆಸಲಾಗುತ್ತದೆ ಎಂದು ತಿಳಿಸಿದರು.

    ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ: ಉದ್ಯೋಗ ಭರವಸೆ ನೀಡುತ್ತಲೇ ಸಿಮೆಂಟ್ ಕಂಪನಿಗಳಿಗೆ ಎಚ್ಚರಿಕೆ ಕೊಟ್ಟ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts