More

    ರಾಜ್ಯದಲ್ಲಿ 2 ಸಾವಿರ ಅಗ್ನಿಶಾಮಕ ಸಿಬ್ಬಂದಿ ನೇಮಕ: ಗೃಹ ಸಚಿವ ಜ್ಞಾನೇಂದ್ರ

    ಬೆಂಗಳೂರು: ಪ್ರಸಕ್ತ ವರ್ಷ ಅಗ್ನಿಶಾಮಕ ಇಲಾಖೆಗೆ 2 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

    ನಮ್ಮ ಮೆಟ್ರೋ ವತಿಯಿಂದ ಜಯನಗರದಲ್ಲಿ ನಿರ್ಮಿಸಿರುವ ‘ಅಗ್ನಿಶಾಮಕ ಠಾಣೆ’ಯ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಗೃಹ ಸಚಿವರು, ಅಗ್ನಿ ಶಾಮಕ ಇಲಾಖೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಪ್ರಸಕ್ತ ವರ್ಷ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಾಗಿ ಅಗ್ನಿ ಶಾಮಕ ಇಲಾಖೆಯಲ್ಲಿ ಹೊಸದಾಗಿ 2 ಸಾವಿರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಇಲಾಖೆಗೆ ಹೆಚ್ಚಿನ ಅನುದಾನ ನೀಡಲು ಸರ್ಕಾರ ಒದಗಿಸಲಿದೆ ಎಂದರು.

    ರಾಜ್ಯದ ಜನತೆಯ ಪ್ರಾಣ ಮತ್ತು ಆಸ್ತಿ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಶೀಘ್ರವೇ ಅಗ್ನಿಶಾಮಕ ಇಲಾಖೆಗೆ ಸಿಬ್ಬಂದಿಗಳ ನೇಮಕಾತಿ ಆಗಲಿದೆ ಎಂದರು.

    ಎಂಎಲ್​ಸಿ ಟಿ.ಎ. ಶರವಣ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ವಿ.ಶರತ್​ ಚಂದ್ರ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಅಮರ್​ ಕುಮಾರ್​ ಪಾಂಡೆ, ಎಡಿಜಿಪಿ ಹರಿಶೇಖರನ್​ ಮತ್ತಿತರರು ಇದ್ದರು.

    ತುಮಕೂರಲ್ಲಿ ಭಯಾನಕ ಗ್ಯಾಂಗ್​: ವಿದ್ಯಾರ್ಥಿಗಳೇ ಟಾರ್ಗೆಟ್​, ಕೆಲ್ಸದ ಆಸೆಗೆ ಫ್ಲ್ಯಾಟ್​​ಗೆ ಹೋದ ಹುಡ್ಗೀರಾ ಪಾಡು ಹೇಳತೀರದು

    ನಂಜನಗೂಡಲ್ಲಿ ಜಮೀನಿಗೆ ಹೋಗಿದ್ದ ತಾಯಿ-ಮಗಳು ಶವವಾಗಿ ಪತ್ತೆ: ಅಂತ್ಯಕ್ರಿಯೆ ಬಳಿಕ ಪ್ರಕರಣಕ್ಕೆ ಸ್ಫೋಟಕ ತಿರುವು

    ಬ್ಯಾಂಕ್​ ಮ್ಯಾನೇಜರ್​ನ 5.70 ಕೋಟಿ ರೂ. ರಹಸ್ಯ ಬಯಲು: ಒಂದೆರಡಲ್ಲ, 8 ಮಹಿಳೆಯರು… ಈತನ ಲೀಲೆ ಕೇಳಿ ಪೊಲೀಸರೇ ಶಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts