ಇನ್ನು ಮುಂದೆ ಟೀಮ್ ಇಂಡಿಯಾ ಆಯ್ಕೆ ಸಮಿತಿ ಸಭೆಯಲ್ಲಿ ವಿವಿಎಸ್ ಲಕ್ಷ್ಮಣ್ ಹಾಜರಿ!

ಮುಂಬೈನಲ್ಲಿ ಇತ್ತೀಚೆಗೆ ನಡೆದ ಪರಾಮರ್ಶೆ ಸಭೆಯ ತೀರ್ಮಾನದಂತೆ, ಆಯ್ಕೆಗಾರರು ಹಾಗೂ ಸಿಒಇ ನಡುವೆ ಯಾವುದೇ ರೀತಿಯ ತಪ್ಪು ತಿಳುವಳಿಕೆ ಇರದಂತೆ ತಡೆಯಲು, ಇನ್ನು ಮುಂದೆ ಹಿರಿಯರ ಆಯ್ಕೆ ಸಮಿತಿಯ ಎಲ್ಲ ಸಭೆಗಳಲ್ಲೂ ಲಕ್ಷ್ಮಣ್ ಅವರು ಉಪಸ್ಥಿತರಿರಲಿದ್ದಾರೆ ಎಂದು ದೇವಜಿತ್ ಸೈಕಿಯಾ ಮಾಹಿತಿ ನೀಡಿದ್ದಾರೆ.
ಗೌತಮ್ ಗಂಭೀರ್- ವಿವಿಎಸ್ ಲಕ್ಷ್ಮಣ್​
ಗೌತಮ್ ಗಂಭೀರ್- ವಿವಿಎಸ್ ಲಕ್ಷ್ಮಣ್​ಸಂಗ್ರಹ ಚಿತ್ರ
Published on: 

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ರಾಷ್ಟ್ರೀಯ ಆಯ್ಕೆ ಸಮಿತಿ ಹಾಗೂ ಬಿಸಿಸಿಐ ಶ್ರೇಷ್ಠತಾ ಕೇಂದ್ರ (ಸಿಇಒ) ನಡುವಿನ ಸಂವಹನ ಕೊರತೆ ತಪ್ಪಿಸಲು ಸಿಒಇ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಮುಂಬರುವ ಆಯ್ಕೆ ಸಮಿತಿಯ ಎಲ್ಲ ಸಭೆಗಳಲ್ಲಿ ಹಾಜರಿರಲಿದ್ದಾರೆ ಎಂದು ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.

ಗುವಾಹಟಿಯಲ್ಲಿ ಮಂಗಳವಾರ ನಡೆದ ಭಾರತ ಟಿ20 ಹಾಗೂ ಭಾರತ ಎ ತಂಡಗಳ ಆಯ್ಕೆ ಸಮಿತಿ ಸಭೆಯಲ್ಲಿ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಕಾಣಿಸಿಕೊಂಡ ನಂತರ ಈ ವಿಷಯ ಚರ್ಚೆಗೆ ಗ್ರಾಸವಾಗಿತ್ತು. ಮುಂಬೈನಲ್ಲಿ ಇತ್ತೀಚೆಗೆ ನಡೆದ ಪರಾಮರ್ಶೆ ಸಭೆಯ ತೀರ್ಮಾನದಂತೆ, ಆಯ್ಕೆಗಾರರು ಹಾಗೂ ಸಿಒಇ ನಡುವೆ ಯಾವುದೇ ರೀತಿಯ ತಪ್ಪು ತಿಳುವಳಿಕೆ ಇರದಂತೆ ತಡೆಯಲು, ಇನ್ನು ಮುಂದೆ ಹಿರಿಯರ ಆಯ್ಕೆ ಸಮಿತಿಯ ಎಲ್ಲ ಸಭೆಗಳಲ್ಲೂ ಲಕ್ಷ್ಮಣ್ ಅವರು ಉಪಸ್ಥಿತರಿರಲಿದ್ದಾರೆ ಎಂದು ದೇವಜಿತ್ ಸೈಕಿಯಾ ಮಾಹಿತಿ ನೀಡಿದ್ದಾರೆ.

ಸಿಒಇ ಮುಖ್ಯಸ್ಥರಾಗಿ ವಿವಿಎಸ್ ಲಕ್ಷ್ಮಣ್ ಭಾಗವಹಿಸಲಿದ್ದು, ಆಯ್ಕೆಗಾರರು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅಗತ್ಯವಿರುವ ಸರಿಯಾದ ಮತ್ತು ನಿಖರ ಮಾಹಿತಿಯನ್ನು ಒದಗಿಸುವುದೇ ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ ಎಂದಿದ್ದಾರೆ. ಬೆಂಗಳೂರಿನ ಸಿಒಇನಲ್ಲಿ ಆಟಗಾರರು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುವ ಮತ್ತು ಗುಣಮುಖರಾಗುವ ಸಮಯದ ಕುರಿತು ಲಕ್ಷ್ಮಣ್ ಹಾಗೂ ಮಾಜಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಹಿಂದೆ ವರದಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net