jioಸ್ಟಾರ್‌ನ ದಾಖಲೆ: ಟಾಟಾ ಐಪಿಎಲ್ 2026ರ ಪ್ರಸ್ತುತಿಯಲ್ಲಿ ಪ್ರಭಾವಿ ಪಾತ್ರ ವಹಿಸಿದ ಪ್ರಾದೇಶಿಕ ಭಾಷೆ, ಕನ್ನಡ ಫೀಡ್‌ನಲ್ಲಿ ಶೇ. 30ರಷ್ಟು ವೃದ್ಧಿ

ಜಿಯೋ ಸ್ಟಾರ್ ಸಂಸ್ಥೆಯ 'ಬಿಯಾಂಡ್ ಬೌಂಡರೀಸ್' (Beyond Boundaries) ಉಪಕ್ರಮವು ಪ್ರಾದೇಶಿಕ ಭಾಷೆಗಳಲ್ಲಿ ಕ್ರಿಕೆಟ್ ವೀಕ್ಷಣೆಯ ಬಹುವಿಧದ ಬೆಳವಣಿಗೆಯನ್ನು ತೋರಿಸುತ್ತದೆ.
IPL
jio starಸಂಗ್ರಹ ಚಿತ್ರ
Published on: 

ನವದೆಹಲಿ: ನೇರ ಪ್ರಸಾರದ ಕ್ರಿಕೆಟ್ ಫೀಡ್‌ಗಳು ಹಾಗೂ ಪಂದ್ಯದ ಮುಂಚಿನ ಮತ್ತು ನಂತರದ ಕಾರ್ಯಕ್ರಮಗಳ (PPL) ಸಹಭಾಗಿತ್ವದ ಮೂಲಕ ಜಾಹೀರಾತುದಾರರನ್ನು ಪ್ರಾದೇಶಿಕ ಭಾಷೆಯ ಕ್ರಿಕೆಟ್ ವೀಕ್ಷಕರ ಬಳಿಗೆ ಮತ್ತಷ್ಟು ಹತ್ತಿರ ತರುವ 'ಬಿಯಾಂಡ್ ಬೌಂಡರೀಸ್' ಎಂಬ ಹೊಸ ಉಪಕ್ರಮದ ಚಾಲನೆಯನ್ನು ಜಿಯೋಸ್ಟಾರ್ (JioStar) ಘೋಷಿಸಿದೆ.

ಪ್ರಾದೇಶಿಕ ಭಾಷೆಗಳಲ್ಲಿ ಕ್ರಿಕೆಟ್ ವೀಕ್ಷಿಸುವುದು ಪಂದ್ಯದ ಅನುಭವವನ್ನು ಪಡೆಯುವಲ್ಲಿ ಪ್ರಮುಖ ಭಾಗವಾಗುತ್ತಿದ್ದು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಲವಾದ ವೀಕ್ಷಕರ ತೊಡಗಿಸಿಕೊಳ್ಳುವಿಕೆ ಕಂಡುಬಂದಿದೆ. ಟಾಟಾ ಐಪಿಎಲ್ 2026ರ ಅವಧಿಯಲ್ಲಿ ಜಿಯೋಹಾಟ್‌ಸ್ಟಾರ್‌ನಲ್ಲಿ (JioHotstar) ಕನ್ನಡ ಫೀಡ್‌ನ ರೀಚ್ ವರ್ಷದಿಂದ ವರ್ಷಕ್ಕೆ (YoY) ಶೇ. 30ರಷ್ಟು ಏರಿಕೆ ಕಂಡಿದೆ. ಹಾಗೂ ತೆಲುಗು ಮತ್ತು ತಮಿಳು ಫೀಡ್‌ಗಳಲ್ಲಿ ಕ್ರಮವಾಗಿ ಶೇ. 23 ಮತ್ತು ಶೇ. 12ರಷ್ಟು ಬೆಳವಣಿಗೆ ದಾಖಲಾಗಿದೆ. ಈ ಮೂರು ಮಾರುಕಟ್ಟೆಗಳಲ್ಲಿ ಡಿಜಿಟಲ್ ವಾಚ್-ಟೈಮ್ ಶೇರ್‌ನಲ್ಲಿ (Watch-time share) ತೆಲುಗು ಶೇ. 30ರಷ್ಟು ಗರಿಷ್ಠ ಬೆಳವಣಿಗೆ ದಾಖಲಿಸಿದ್ದು, ನಂತರದ ಸ್ಥಾನಗಳಲ್ಲಿ ಕನ್ನಡ ಮತ್ತು ತಮಿಳು ಭಾಷೆಗಳಿವೆ.

ಹಿಂದಿ ಮತ್ತು ಇಂಗ್ಲಿಷ್ ಹೊರತಾಗಿಯೂ ಕ್ರಿಕೆಟ್ ವೀಕ್ಷಣೆಯ ಶೈಲಿ ಹೇಗೆ ಬೆಳೆಯುತ್ತಿದೆ ಎಂಬುದಕ್ಕೆ ಈ ಪ್ರಗತಿ ಸಾಕ್ಷಿಯಾಗಿದೆ. ನೇರ ಪ್ರಸಾರದ ಕ್ರೀಡಾ ಶಕ್ತಿಯ ಜೊತೆಗೆ ಸ್ಥಳೀಯ ಭಾಷೆ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಬೆಸೆಯುವ ಫೀಡ್‌ಗಳ ಮೂಲಕ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಜೊತೆ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.

ಪ್ರತಿಯೊಂದು ಪ್ರಾದೇಶಿಕ ಫೀಡ್ ಕೂಡ ಆಯಾ ರಾಜ್ಯದ ಅಭಿಮಾನಿಗಳ ಕ್ರಿಕೆಟ್ ಪ್ರೇಮವನ್ನು ಪ್ರತಿಬಿಂಬಿಸುವ ವ್ಯಾಖ್ಯಾನ (Commentary) ಮತ್ತು ಶೋಗಳನ್ನು ರೂಪಿಸಿದ್ದು, ಸ್ಥಳೀಯ ಫ್ರಾಂಚೈಸಿಗಳ ಸುತ್ತ ತನ್ನದೇ ಆದ ಕಾರ್ಯಕ್ರಮದ ಗುರುತನ್ನು ನಿರ್ಮಿಸಿಕೊಂಡಿದೆ. ಟಾಟಾ ಐಪಿಎಲ್ 2026ಕ್ಕಾಗಿ ತೆಲುಗು ಫೀಡ್‌ನಲ್ಲಿ 'ಕ್ರಿಕೆಟ್ ವಿತ್ ಚಾಯ್' ಮತ್ತು 'ಆರೆಂಜ್ ಓ ರಂಗು', ಕನ್ನಡ ಫೀಡ್‌ನಲ್ಲಿ 'ಕೆಂಪು ಸೈನ್ಯ' ಮತ್ತು 'ಇನ್‌ಸೈಡ್ ಆರ್‌ಸಿಬಿ' (Inside RCB), ಹಾಗೂ ತಮಿಳು ಫೀಡ್‌ನಲ್ಲಿ 'ಇನಿ ಸಿಂಗಪಾದೈ' ಶೀರ್ಷಿಕೆಯಡಿ ಪಂದ್ಯದ ದಿನದ ವಿಶೇಷ ವಿಷಯಗಳನ್ನು ಪ್ರಸಾರ ಮಾಡಲಾಗಿತ್ತು. ಇದರೊಂದಿಗೆ ಮೂರೂ ಮಾರುಕಟ್ಟೆಗಳಲ್ಲಿ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸುವ ವಿಶೇಷ ವಿಭಾಗಗಳನ್ನೂ ಪ್ರಸಾರ ಮಾಡಲಾಗಿತ್ತು.

ಈ ಪ್ರಾದೇಶಿಕ ಭಾಷೆಯ ಅನುಭವಕ್ಕೆ 12 ಭಾಷೆಗಳಲ್ಲಿ 160ಕ್ಕೂ ಹೆಚ್ಚು ಕಾಮೆಂಟೇಟರ್‌ಗಳ ತಂಡ ಸಾಥ್ ನೀಡಿತ್ತು. ಪ್ರತಿಯೊಂದು ಮಾರುಕಟ್ಟೆಯಲ್ಲೂ ಮಾಜಿ ಆಟಗಾರರು ಮತ್ತು ಪ್ರಾದೇಶಿಕ ತಜ್ಞರು ಪ್ರಸಾರವನ್ನು ಮುನ್ನಡೆಸಿದರು. ತಮಿಳು ಫೀಡ್‌ನ ತಂಡದಲ್ಲಿ ಮುರಳಿ ವಿಜಯ್, ಎಲ್. ಬಾಲಾಜಿ ಜೊತೆಗೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ರಸೆಲ್ ಅರ್ನಾಲ್ಡ್ ಮತ್ತು ಆರ್‌ಜೆ ಬಾಲಾಜಿ ಇದ್ದರು. ತೆಲುಗು ಫೀಡ್‌ನಲ್ಲಿ ಹನುಮ ವಿಹಾರಿ ಮತ್ತು ಎಂ.ಎಸ್.ಕೆ. ಪ್ರಸಾದ್ ಕಾಣಿಸಿಕೊಂಡರೆ, ಕನ್ನಡ ಕಾಮೆಂಟರಿ ಪ್ಯಾನೆಲ್‌ನಲ್ಲಿ ವಿನಯ್ ಕುಮಾರ್ ಮತ್ತು ವೇದಾ ಕೃಷ್ಣಮೂರ್ತಿ ಭಾಗವಹಿಸಿದ್ದರು. ಒಂದೇ ರಾಷ್ಟ್ರೀಯ ವ್ಯಾಖ್ಯಾನ ತಂಡಕ್ಕೆ ಸೀಮಿತವಾಗದೆ, ಆಯಾ ಮಾರುಕಟ್ಟೆಗೆ ಸೂಕ್ತವಾದ ಮತ್ತು ಚಿರಪರಿಚಿತ ಧ್ವನಿಗಳ ಮೂಲಕ ಪ್ರತಿ ಪ್ರಾದೇಶಿಕ ಫೀಡ್ ಅನ್ನು ರೂಪಿಸುವ ಜಿಒಸ್ಟಾರ್‌ನ ವಿಶಿಷ್ಟ ವಿಧಾನವನ್ನು ಇದು ಬಿಂಬಿಸುತ್ತದೆ.

2026ರ ಸೀಸನ್‌ನಲ್ಲಿ ಡಿಜಿಟಲ್ ವೇದಿಕೆಗಳಲ್ಲಿ ಬಲವಾದ ಬೆಳವಣಿಗೆ ಕಂಡುಬಂದಿದ್ದು, ಕನೆಕ್ಟೆಡ್ ಟಿವಿ (Connected TV) ರೀಚ್ ಶೇ. 22ರಷ್ಟು ಏರಿಕೆಯಾಗಿದೆ. ಇದು ಜಾಹೀರಾತುದಾರರಿಗೆ ಟಿವಿ ಮಟ್ಟದ ವ್ಯಾಪ್ತಿ ಮತ್ತು ಡಿಜಿಟಲ್ ನಿಖರತೆಯ ಸಮ್ಮಿಲನವನ್ನು ಒದಗಿಸಿದೆ. ಡಿಜಿಟಲ್ ವಿಡಿಯೋ ವೀಕ್ಷಣೆಗಳು (Video views) 25 ಬಿಲಿಯನ್ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ. 8ರಷ್ಟು ಪ್ರಗತಿ ಕಂಡಿವೆ. ಡಿಜಿಟಲ್‌ನಲ್ಲಿ ಪ್ರಾದೇಶಿಕ ಭಾಷೆಯ ವಾಚ್-ಟೈಮ್ ಪಾಲು ಶೇ. 33ರಷ್ಟು ಹೆಚ್ಚಾಗಿದೆ.

ಈ ಕುರಿತು ಮಾತನಾಡಿದ ಜಿಒಸ್ಟಾರ್‌ನ ಸ್ಪೋರ್ಟ್ಸ್ ಸೇಲ್ಸ್ ಮುಖ್ಯಸ್ಥ ಅನೂಪ್ ಗೋವಿಂದನ್, "ಪ್ರಾದೇಶಿಕ ಭಾಷೆಯ ಕ್ರಿಕೆಟ್ ವೀಕ್ಷಣೆಯ ಬೆಳವಣಿಗೆಯು ಭಾರತದಲ್ಲಿ ಕ್ರಿಕೆಟ್ ವೀಕ್ಷಣೆ ಹೇಗೆ ಬದಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ವೀಕ್ಷಕರು ಕೇವಲ ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಗಳನ್ನು ನೋಡುತ್ತಿಲ್ಲ; ಬದಲಿಗೆ ತಮಗೆ ಪರಿಚಿತವೆನಿಸುವ ಭಾಷೆ ಮತ್ತು ವಾತಾವರಣದಲ್ಲಿ ಪಂದ್ಯದ ಅನುಭವ ಪಡೆಯಲು ಬಯಸುತ್ತಿದ್ದಾರೆ. ಬ್ರ್ಯಾಂಡ್‌ಗಳಿಗೆ ಇದು ಅತ್ಯಂತ ಮುಖ್ಯವಾಗಿದೆ, ಏಕೆಂದರೆ ಇದು ವಿಭಿನ್ನ ಮಾರುಕಟ್ಟೆಗಳಲ್ಲಿ ಕ್ರಿಕೆಟ್ ಜೊತೆ ಆಳವಾಗಿ ತೊಡಗಿಸಿಕೊಳ್ಳಲು ಹೊಸ ಹಾದಿಯನ್ನು ತೆರೆಯುತ್ತದೆ. ಪ್ರಾದೇಶಿಕ ವೀಕ್ಷಣೆಯನ್ನು ಕೇವಲ ಪ್ರೇಕ್ಷಕರ ಸಂಖ್ಯೆಯ ಆಧಾರದ ಮೇಲೆ ನೋಡುವ ಬದಲು, ಪ್ರತಿಯೊಂದು ಮಾರುಕಟ್ಟೆಯ ವಿಶಿಷ್ಟತೆಯನ್ನು ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲೇ ನೈಜ ಅವಕಾಶವಿದೆ," ಎಂದು ಹೇಳಿದರು.

ಪ್ರಾದೇಶಿಕ ಭಾಷೆಯ ಫೀಡ್‌ಗಳು ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಬೃಹತ್ ಸಂಖ್ಯೆಯ ವೀಕ್ಷಕರನ್ನು ಸೆಳೆಯುತ್ತಿರುವುದರಿಂದ, ಅವು ಕ್ರೀಡಾ ವ್ಯವಸ್ಥೆಯ ಪ್ರಮುಖ ಭಾಗವಾಗಿ ಬೆಳೆಯುತ್ತಿವೆ. ಇದರಿಂದಾಗಿ ವೀಕ್ಷಕರು, ಜಾಹೀರಾತುದಾರರು ಮತ್ತು ಪಾಲುದಾರರಿಗೆ ಭಾರತದ ವೈವಿಧ್ಯಮಯ ಮಾರುಕಟ್ಟೆಗಳಲ್ಲಿ ಕ್ರಿಕೆಟ್ ಜೊತೆ ಜೋಡಣೆಗೊಳ್ಳಲು ಹೆಚ್ಚಿನ ಅವಕಾಶಗಳು ಸಿಗುತ್ತಿವೆ.

ಜಿಒಸ್ಟಾರ್ ಪಾಲಿಗೆ, ವಿವಿಧ ಭಾಷೆಗಳಲ್ಲಿ ಹೆಚ್ಚುತ್ತಿರುವ ಈ ವೀಕ್ಷಣೆ ಕ್ರೀಡಾ ಪ್ರಸಾರ ಕ್ಷೇತ್ರದಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಯನ್ನು ಸೂಚಿಸುತ್ತದೆ. ಇಲ್ಲಿ ಪ್ರಾದೇಶಿಕ ಭಾಷೆಯ ಫೀಡ್‌ಗಳು ಮುಖ್ಯ ಪ್ರಸಾರದ ಒಂದು ಸಣ್ಣ ವಿಸ್ತರಣೆಯಾಗಿ ಉಳಿಯದೆ, ಕ್ರಿಕೆಟ್ ವೀಕ್ಷಣಾ ವ್ಯವಸ್ಥೆಯ ಅತ್ಯಂತ ಪ್ರಮುಖ ಭಾಗವಾಗಿ ಬೆಳೆಯುತ್ತಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net