ಎಫ್4 ಪ್ರಶಸ್ತಿ ಮೇಲೆ ಕಣ್ಣಿಟ್ಟ ಕಿಚ್ಚಾಸ್ ಕಿಂಗ್ಸ್ ಬೆಂಗಳೂರಿನ ಆರಿಸ್ ಕೈರಿಯಾಕು; ಚೆನ್ನೈನಲ್ಲಿ ಮೂರನೇ ಸುತ್ತಿನ ರೇಸ್!

ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) 2026 ಅಕ್ಟೋಬರ್ 22 ಮತ್ತು 23ರಂದು ಚೆನ್ನೈನ ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆಯಲಿದೆ. ಎಫ್4 ಇಂಡಿಯನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಯಲಿದ್ದು, ಇದೇ ವಾರಾಂತ್ಯದಲ್ಲಿ ಇಂಡಿಯನ್ ರೇಸಿಂಗ್ ಲೀಗ್‌ನ (IRL) ಹೊಸ ಸೀಸನ್ ಕೂಡ ಆರಂಭವಾಗಲಿದೆ. ಒಂದೇ ಸರ್ಕ್ಯೂಟ್‌ನಲ್ಲಿ ಎರಡು ಚಾಂಪಿಯನ್‌ಶಿಪ್‌ಗಳ ರೇಸ್ ನಡೆಯಲಿದ್ದು, ಚೆನ್ನೈ ಸುತ್ತು ಚಾಲಕರಿಗೆ ಮಹತ್ವದ ಸವಾಲಾಗಲಿದೆ.
ಎಫ್4 ಪ್ರಶಸ್ತಿ ಮೇಲೆ ಕಣ್ಣಿಟ್ಟ ಕಿಚ್ಚಾಸ್ ಕಿಂಗ್ಸ್ ಬೆಂಗಳೂರಿನ ಆರಿಸ್ ಕೈರಿಯಾಕು; ಚೆನ್ನೈನಲ್ಲಿ ಮೂರನೇ ಸುತ್ತಿನ ರೇಸ್!
ಎಫ್4 ಪ್ರಶಸ್ತಿ ಮೇಲೆ ಕಣ್ಣಿಟ್ಟ ಕಿಚ್ಚಾಸ್ ಕಿಂಗ್ಸ್ ಬೆಂಗಳೂರಿನ ಆರಿಸ್ ಕೈರಿಯಾಕು; ಚೆನ್ನೈನಲ್ಲಿ ಮೂರನೇ ಸುತ್ತಿನ ರೇಸ್!
Published on: 

ಬೆಂಗಳೂರು: ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) 2026 ಅಕ್ಟೋಬರ್ 22 ಮತ್ತು 23ರಂದು ಚೆನ್ನೈನ ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆಯಲಿದೆ. ಎಫ್4 ಇಂಡಿಯನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಯಲಿದ್ದು, ಇದೇ ವಾರಾಂತ್ಯದಲ್ಲಿ ಇಂಡಿಯನ್ ರೇಸಿಂಗ್ ಲೀಗ್‌ನ (IRL) ಹೊಸ ಸೀಸನ್ ಕೂಡ ಆರಂಭವಾಗಲಿದೆ. ಒಂದೇ ಸರ್ಕ್ಯೂಟ್‌ನಲ್ಲಿ ಎರಡು ಚಾಂಪಿಯನ್‌ಶಿಪ್‌ಗಳ ರೇಸ್ ನಡೆಯಲಿದ್ದು, ಚೆನ್ನೈ ಸುತ್ತು ಚಾಲಕರಿಗೆ ಮಹತ್ವದ ಸವಾಲಾಗಲಿದೆ.

ಎಫ್4 ಇಂಡಿಯನ್ ಚಾಂಪಿಯನ್‌ಶಿಪ್‌ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಆರಿಸ್ ಕೈರಿಯಾಕು ಮತ್ತು ಗೋವಾ ಏಸಸ್ ಜೆಎ ರೇಸಿಂಗ್‌ನ ಲುವಿವೆ ಸಂಬುದುಲಾ ನಡುವೆ ಕೇವಲ ಐದು ಅಂಕಗಳ ಅಂತರವಿದೆ. ಹೀಗಾಗಿ ಮೂರನೇ ಸುತ್ತಿನ ರೇಸ್ ಪ್ರಶಸ್ತಿ ಹೋರಾಟದಲ್ಲಿ ನಿರ್ಣಾಯಕವಾಗುವ ಸಾಧ್ಯತೆಯಿದೆ.

ಕಳೆದ ವರ್ಷ ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆದ ರೇಸ್‌ಗಳಲ್ಲಿ ಸ್ಯಾಚೆಲ್ ರೋಟ್ಗೆ ಮೂರು ಗೆಲುವು ದಾಖಲಿಸಿದ್ದರು. ಚೆನ್ನೈ ಟರ್ಬೊ ರೈಡರ್ಸ್‌ನ ಶೇನ್ ಚಂಡಾರಿಯಾ ಕೂಡ ಒಂದು ರೇಸ್‌ನಲ್ಲಿ ಗೆದ್ದಿದ್ದರು. ಈ ಬಾರಿ ಎಫ್4 ಪ್ರಶಸ್ತಿಗಾಗಿ ಪೈಪೋಟಿ ತೀವ್ರಗೊಂಡಿರುವುದರಿಂದ ಚೆನ್ನೈ ಸುತ್ತಿನ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net