ಹಿರಿಯ ಪುತ್ರ ಆರ್ಯವೀರ್ ಬಳಿಕ ಕ್ರಿಕೆಟ್ ಪ್ರಿಯರ ಗಮನ ಸೆಳೆದ ಸೆಹ್ವಾಗ್​ರ ಕಿರಿಯ ಮಗ!

ಟೀಮ್ ಇಂಡಿಯಾ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ 19 ವಯೋಮಿತಿ ಭಾರತ ತಂಡದಲ್ಲಿ ಮಿಂಚು ಹರಿಸಿದ ನಡುವೆ ಅವರ ಕಿರಿಯ ಪುತ್ರ ವೇದಾಂತ್ ಸಹ ಕ್ರಿಕೆಟ್ ಪ್ರಿಯರ ಗಮನ ಸೆಳೆದಿದ್ದಾರೆ.
ಕೋಚ್ ಜತೆಗೆ ವೇದಾಂತ್ ಸೆಹ್ವಾಗ್ ಹಾಗೂ ಆರ್ಯವೀರ್ ಸೆಹ್ವಾಗ್
ಕೋಚ್ ಜತೆಗೆ ವೇದಾಂತ್ ಸೆಹ್ವಾಗ್ ಹಾಗೂ ಆರ್ಯವೀರ್ ಸೆಹ್ವಾಗ್ ಏಜೆನ್ಸಿ
Published on: 

ಬೆಂಗಳೂರು: ಟೀಮ್ ಇಂಡಿಯಾ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ 19 ವಯೋಮಿತಿ ಭಾರತ ತಂಡದಲ್ಲಿ ಮಿಂಚು ಹರಿಸಿದ ನಡುವೆ ಅವರ ಕಿರಿಯ ಪುತ್ರ ವೇದಾಂತ್ ಸಹ ಕ್ರಿಕೆಟ್ ಪ್ರಿಯರ ಗಮನ ಸೆಳೆದಿದ್ದಾರೆ.

ಕೂಚ್ ಬೆಹಾರ್ ಟೂರ್ನಿಯಲ್ಲಿ ದೆಹಲಿ ತಂಡದ ಪರ ಆಡುತ್ತಿರುವ 16 ವರ್ಷದ ಬಲಗೈ ಸ್ಪಿನ್ನರ್ ವೇದಾಂತ್, ಆತಿಥೇಯ ಪಂಜಾಬ್ ವಿರುದ್ಧ ಎಸೆದ 23.3 ಓವರ್‌ಗಳಲ್ಲಿ 88 ರನ್ ನೀಡಿ 7 ವಿಕೆಟ್ ಪಡೆದಿದ್ದಾರೆ. ಆರ್ಯವೀರ್ ಸಹ ತಂಡದ ಭಾಗವಾಗಿದ್ದು, ಆರಂಭಿಕನಾಗಿ 31 ರನ್‌ಗಳಿಸಿ ಔಟಾಗಿದ್ದಾರೆ.

ತಡವಾಗಿ ತಲುಪಿದ ಕಿಟ್, ಆರಂಭ ವಿಳಂಬ

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಎ ಗುಂಪಿನ ಬಂಗಾಳ ಹಾಗೂ ರಾಜಸ್ಥಾನ ತಂಡಗಳ ನಡುವಿನ ನಿರ್ಣಾಯಕ ಪಂದ್ಯದ 15 ನಿಮಿಷ ತಡವಾಗಿ ಆರಂಭಗೊಂಡಿತ್ತು. ವಾಂಖೆಡೆ ಕ್ರೀಡಾಂಗಣಕ್ಕೆ ರಾಜಸ್ಥಾನ ತಂಡದ ಆಟಗಾರರ ಕಿಟ್ ಸರಿಯಾದ ಸಮಯಕ್ಕೆ ತಲುಪದ ಕಾರಣ ನಿಗದಿತ ಸಮಯಕ್ಕಿಂತ 25 ನಿಮಿಷ ತಡವಾಗಿ ಟಾಸ್ ಪ್ರಕ್ರಿಯೆ ನಡೆಯಿತು.

ಕಿಟ್ ಆಗಮನ ವಿಳಂಬದ ನಡುವೆಯೂ ಬಂಗಾಳ ಎದುರು 6 ವಿಕೆಟ್ ಗೆಲುವು ಸಾಧಿಸಿದ ರಾಜಸ್ಥಾನ ಸೂಪರ್ ಲೀಗ್ ಹಂತಕ್ಕೇರಿತು. 2022ರಲ್ಲೂ ಭಾರತ-ವಿಂಡೀಸ್ ನಡುವಿನ ಟಿ20 ಪಂದ್ಯವೂ ಇದೇ ಕಾರಣಕ್ಕೆ ಮೂರು ಗಂಟೆ ತಡವಾಗಿ ಆರಂಭಗೊಂಡಿತ್ತು.