ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಗುರುತಿಸಿಕೊಂಡು, ಸ್ಯಾಂಡಲ್ವುಡ್ನಲ್ಲಿಯೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕರುನಾಡ ಜನರಿಗು ಹತ್ತಿರವಾಗಿರುವ ನಟಿ ಕೃತಿ ಖರಬಂದ, ಸದ್ಯ ಬಾಲಿವುಡ್ನಲ್ಲಿ ಬಿಜಿ. ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕುಟುಂಬದೊಟ್ಟಿಗೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಈ ಗೂಗ್ಲಿ ಬೆಡಗಿ. ಹೀಗಿರುವಾಗಲೇ ಗ್ಯಾಪ್ನಲ್ಲೇ ಮನೆಯಲ್ಲಿನ ಸಾಕು ನಾಯಿಗೆ ಲಿಪ್ಲಾಕ್ ಮಾಡಿ ಸುದ್ದಿಯಾಗಿದ್ದಾರೆ!
ಇದನ್ನೂ ಓದಿ: ಸದ್ಯದಲ್ಲೇ ತಾತ ಆಗಲಿದ್ದಾರೆ ವಿಕ್ರಮ್!
ಹೌದು, ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ನಾಯಿ ಜತೆಗೆ ಲಿಪ್ಲಾಕ್ ಮಾಡಿರುವ ಕೃತಿ, ‘ನಿಜವಾದ ಪ್ರೀತಿ‘ ಎಂದು ಬರೆದುಕೊಂಡು ಫೋಟೋ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋಕ್ಕೆ ನೆಟ್ಟಿಗರು ಬಗೆಬಗೆಯ ಕಮೆಂಟ್ಗಳನ್ನು ಮಾಡುತ್ತಿದ್ದು, ಆ ನಾಯಿ ಎಷ್ಟೊಂದು ಪುಣ್ಯ ಮಾಡಿದೆ ಎಂದು ಕೆಲವರು ಹೇಳಿದರೆ, ನಿಜವಾದ ಪ್ರೀತಿಗೆ ಶ್ವಾನವೊಂದೆ ಉತ್ತರ ಎಂದೂ ಕಮೆಂಟ್ ರವಾನಿಸಿದ್ದಾರೆ.
ಇದನ್ನೂ ಓದಿ: ಚೀನಾದಲ್ಲಿ ಚಿತ್ರಮಂದಿರ ಓಪನ್; ಮೊದಲ ದಿನವೇ ದಾಖಲೆಯ ಟಿಕೆಟ್ ಮಾರಾಟ!
ಇನ್ನು ಜುಲೈ 20ಕ್ಕೆ ಗೂಗ್ಲಿ ಸಿನಿಮಾ ತೆರೆಕಂಡು ಏಳು ವರ್ಷವಾಯಿತು. ಆ ಪ್ರಯುಕ್ತ ಚಿತ್ರದ ವಿಡಿಯೋ ಶೇರ್ ಮಾಡಿ, ಆ ದಿನಗಳನ್ನು ನೆನಪು ಮಾಡಿಕೊಂಡಿದ್ದರು. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ಬಾಲಿವುಡ್ ಸಿನಿಮಾಗಳಲ್ಲಿಯೇ ಹೆಚ್ಚು ಬಿಜಿಯಾಗಿರುವ ಕೃತಿ, ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. (ಏಜೆನ್ಸೀಸ್)