ಹೈದರಾಬಾದ್: “ಇಚ್ಛತಾ ವಾಹನಮುಲು ನಿಲುಪರಡು” ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಮೀನಾಕ್ಷಿ ಚೌಧರಿಗೆ ಮೊದಲ ಸಿನಿಮಾ ಕೈ ಹಿಡಿಯಲಿಲ್ಲ. ಆದರೂ ಎರಡನೇ ಸಿನಿಮಾದಲ್ಲಿ ಸೂಪರ್ ಸ್ಟಾರ್ ರವಿತೇಜ ಜತೆ ನಟಿಸುವ ಅವಕಾಶ ಸಿಕ್ಕಿದ್ದು, ಮುಂಬರುವ ಖಿಲಾಡಿ ಚಿತ್ರ ಇದೇ ತಿಂಗಳ 11ರಂದು ಬಿಡುಗಡೆಯಾಗಲಿದೆ.
ಇತ್ತೀಚೆಗಷ್ಟೇ ಖಿಲಾಡಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಅದನ್ನು ನೋಡಿದವರು ನಟಿ ಮೀನಾಕ್ಷಿ ಅವರ ಬೋಲ್ಡ್ನೆಸ್ ನೋಡಿ ದಂದಾಗಿದ್ದಾರೆ. ನಟ ರವಿತೇಜ ಜತೆ ಲಿಪ್ಲಾಕ್ ದೃಶ್ಯಗಲ್ಲಿ ಮೈಚಳಿ ಬಿಟ್ಟು ನಟಿಸಿದ್ದಾರೆ. ಹೀಗಾಗಿ ಟಾಲಿವುಡ್ನಲ್ಲಿ ಇದೀಗ ಮೀನಾಕ್ಷಿ ಹೆಸರು ಹಾಟ್ ಟಾಪಿಕ್ ಆಗಿದೆ. ಸಿನಿಮಾ ಬಿಡುಗಡೆ ಹತ್ತಿರದಲ್ಲಿದ್ದು, ಸಿನಿಮಾ ತಂಡ ಪ್ರಚಾರದ ಕೆಲಸದಲ್ಲಿ ತೊಡಗಿದೆ. ಇತ್ತೀಚೆಗೆ ಮಾಧ್ಯಮದವರು ಲಿಕ್ಪಾಕ್ ಬಗ್ಗೆ ಮೀನಾಕ್ಷಿ ಅವರನ್ನು ಪ್ರಶ್ನೆ ಮಾಡಿದ್ದು, ಅವರು ಕೊಟ್ಟ ಉತ್ತರ ಎಲ್ಲರನ್ನು ದಂಗಬಡಿಸಿದೆ.
ನಾನು ನನ್ನ ಎರಡನೇ ಸಿನಿಮಾವನ್ನು ರವಿತೇಜ ಅವರೊಂದಿಗೆ ಮಾಡುತ್ತೇನೆಂದು ನಾನು ಭಾವಿಸಿರಲಿಲ್ಲ. ಅವರ ಟೈಮಿಂಗ್ ಸಾಮಾನ್ಯವಲ್ಲ. ನನಗೆ ತೆಲುಗಿನಲ್ಲಿ ಸರಿಯಾದ ಬೆಂಬಲ ಸಿಗದೇ ಬೇಸರದಲ್ಲಿದ್ದೇ, ಆದರೆ, ಚಿಂತಿಸಬೇಡ ಎಂದು ರವಿತೇಜ ಅವರು ಒಳ್ಳೆಯ ಮಾತುಗಳನ್ನಾಡಿ ಬೆನ್ನು ತಟ್ಟಿದರು ಎಂದು ಹೇಳಿದರು.
ಸ್ಟೋರಿಗೆ ಅವಶ್ಯಕವಾಗಿರುವುದರಿಂದ ಲಿಪ್ಲಾಕ್ ಮಾಡಿದೆ ಎಂದ ಮೀನಾಕ್ಷಿ, ಚಿತ್ರದಲ್ಲಿ ನನ್ನ ಪಾತ್ರ ಎಷ್ಟು ಕಾಲ ಉಳಿಯುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ, ನನ್ನ ಪಾತ್ರ ಎಷ್ಟು ಮಹತ್ವ ಎಂಬುದನ್ನು ನಾನು ನೋಡಿದ್ದೇನೆ. ನಿರ್ದೇಶಕ ರಮೇಶ್ ವರ್ಮಾ ಅವರು ಸ್ಟೋರಿ ಹೇಳಿದಾಗ ಕಿಸ್ಸಿಂಗ್ ಮತ್ತು ರೊಮ್ಯಾನ್ಸ್ ದೃಶ್ಯಗಳು ಇರುತ್ತವೆ ಅಂತಾ ಮೊದಲೇ ಹೇಳಿದ್ದರು. ಕಮರ್ಸಿಯಲ್ ಸಿನಿಮಾಗಳಲ್ಲಿ ಅವು ಸಾಮಾನ್ಯ. ಕಿಸ್ಸಿಂಗ್ ದೃಶ್ಯಗಳಲ್ಲಿ ಅಭಿನಯಿಸುವುದರಿಂದ ನನಗೇನು ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ಇಂತಹ ಬೋಲ್ಡ್ ಮಾತುಗಳನ್ನಾಡಿರುವ ಮೀನಾಕ್ಷಿ ಅವರಿಂದ ಮುಂದೆಯೂ ಹೆಚ್ಚು ರೋಮ್ಯಾಂಟಿಕ್ ದೃಶ್ಯಗಳಿರುವ ಸಿನಿಮಾಗಳು ಬಂದರೂ ಅಚ್ಚರಿಪಡಬೇಕಿಲ್ಲ. (ಏಜೆನ್ಸೀಸ್)
ಮಂಡ್ಯದಲ್ಲಿ ಭೀಕರ ಹತ್ಯೆ ಪ್ರಕರಣ: ತಂಗಿ ಗಂಡನ ಮೇಲಿನ ವ್ಯಾಮೋಹಕ್ಕೆ ನಡುರಾತ್ರಿ ನೆತ್ತರು ಹರಿಸಿದ ಹಂತಕಿ
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಮಂಗಳೂರಿನ ವಕೀಲ ರಾಜೇಶ್ ಭಟ್ಗೆ ಷರತ್ತುಬದ್ಧ ಜಾಮೀನು
ಮಂಗ್ಳೂರಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿ ವೇಶ್ಯಾವಾಟಿಕೆ ದಂಧೆ: ಇನ್ನಷ್ಟು ಆಘಾತಕಾರಿ ಸಂಗತಿ ಬಯಲು