More

    ರಾಜಧಾನಿಯಲ್ಲಿ ಒಟ್ಟು 95,13,830 ಮತದಾರರು: ತುಷಾರ್ ಗಿರಿನಾಥ್ ಮಾಹಿತಿ

    ಬೆಂಗಳೂರು: ರಾಜಧಾನಿಯಲ್ಲಿ ಒಟ್ಟು 95,13,830 ಮತದಾರರಿದ್ದಾರೆ. ಇದರಲ್ಲಿ 49,26,270 ಪುರುಷರು, 45,85,824 ಮಹಿಳೆಯರು ಹಾಗೂ 1,736 ಇತರ ವರ್ಗದ ಮತದಾರರು ಇದ್ದಾರೆ.

    ನಗರದ 28 ಕ್ಷೇತ್ರಗಳಲ್ಲಿ ಒಟ್ಟು 8,615 ಮತಗಟ್ಟೆ ಸ್ಥಾಪಿಸಲಾಗುತ್ತದೆ. ಮಾದರಿ ನೀತಿ ಸಂಹಿತೆ ಪಾಲಿಸಲು ಅಬಕಾರಿ, ವಾಣಿಜ್ಯ ತೆರಿಗೆ, ಆದಾಯ ತೆರಿಗೆ, ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

    ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಬಿಎಂಪಿ ಕೇಂದ್ರ 1,654, ಉತ್ತರ 1,981, ದಕ್ಷಿಣ 1,897 ಹಾಗೂ ಬೆಂಗಳೂರು ನಗರದಲ್ಲಿ 3,083 ಸೇರಿ ಒಟ್ಟು 8,615 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಇದರಲ್ಲಿ 2,217 ಕ್ಲಿಟಿಕಲ್ ಪೊಲೀಂಗ್ ಮತಗಟ್ಟೆಗಳಿವೆ. 197 ಕ್ಲಸ್ಟರ್ ಪೊಲೀಂಗ್ ಸ್ಟೇಷನ್ ನಿರ್ಮಿಸಲಾಗುವುದು. 172 ಕಣ್ಗಾವಲು ತಂಡ, 202 ರಾಜ್ಯ ಫ್ಲೈಯಿಂಗ್ ಸ್ಕ್ವಾಡ್, 67 ವಿಚಕ್ಷಣ ತಂಡ, 31 ವಿಡಿಯೋ ವೀಕ್ಷಣೆ ತಂಡ ಹಾಗೂ 5 ಅಂತಾರಾಜ್ಯ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ ಎಂದರು.

    1,05,000 ಯುವ ಮತದಾರರು

    ಸಿಲಿಕಾನ್ ಸಿಟಿಯಲ್ಲಿ 1,05,000 ಯುವ ಮತದಾರರು ಇದ್ದಾರೆ. ಇದಕ್ಕೂ ಮುನ್ನ 54 ಸಾವಿರ ಇದ್ದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಯುವ ಮತದಾರರ ಸಂಖ್ಯೆ ಶೇ.1.14 ಹೆಚ್ಚಾಗಿದೆ. ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳು ಸೇರಿ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಸ್ಥಾಪಿಸಿ ಜಾಗೃತಿ ಜಾಥಾ ಮೂಡಿಸಲಾಗಿತ್ತು. ಜತೆಗೆ, ಯುವ ಮತದಾರರ ಸಹಭಾಗಿತ್ವದಲ್ಲಿ ಜಾಥ, ಸ್ಪರ್ಧೆ, ಬೈಕ್ ರ‌್ಯಾಲಿ, ವಾಕಥಾನ್ ಸೇರಿ ಇತ್ಯಾದಿ ಚಟುವಟಿಕೆಗಳನ್ನು ನಡೆಸಲಾಗಿತ್ತು. ಇದರಿಂದ ಹೆಚ್ಚಿನ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ಸಾಧ್ಯವಾಯಿತು. ಹಾಗಾಗಿ, ಈ ಬಾರಿ ಯುವ ಮತದಾರರ ಸಂಖ್ಯೆ ಏರಿಕೆಯಾಗಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು. ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ) ಹಾಗೂ ಮೇಲ್ವಿಚಾರಣಾ ಅಧಿಕಾರಿಗಳ ಸಹಯೋಗದಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ ಚುನಾವಣಾ ಪಾಠಶಾಲೆಗಳ ಮೂಲಕ ಜಾಗೃತಿ ಅಭಿಯಾನ ಮಾಡಲಾಗುತ್ತಿದೆ ಎಂದರು.

    80 ವರ್ಷ ಮೇಲ್ಪಟ್ಟ 2,36,719 ಹಿರಿಯ ಮತದಾರರ ನಗರದಲ್ಲಿ 80 ವರ್ಷಕ್ಕೂ ಮೇಲ್ಪಟ್ಟ 2,36,719 ಮತದಾರರಿದ್ದಾರೆ. ಮನೆಯಲ್ಲಿಯೇ ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂಗವಿಕಲರು, ಹಾಸಿಗೆ ಬಿಟ್ಟು ಏಳಲಾಗದ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮನೆಯಿಂದಲೇ ಗೌಪ್ಯ ಮತದಾನ ಮಾಡುವ ಅವಕಾಶ ಕೊಡಲಾಗಿದೆ ಎಂದು ತುಷಾರ್ ಗಿರಿನಾಥ್ ಹೇಳಿದರು. ಮಹಿಳಾ ಮತದಾರರನ್ನು ಸೆಳೆಯಲು ಪಿಂಕ್ ಮತಗಟ್ಟೆಗಳು, ಗೋ ಗ್ರೀನ್ ಮತಗಟ್ಟೆಗಳು, ಹಿರಿಯ ನಾಗರಿಕರ ಸ್ನೇಹಿ ಮತದಾನ ಕೇಂದ್ರಗಳು ಸೇರಿ ಮುಂತಾದ ಮಾದರಿ ಮತದಾನ ಕೇಂದ್ರಗಳನ್ನು ರಚಿಸಲು ಯೋಚಿಸಲಾಗಿದೆ ಎಂದರು.

    ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ

    ಕ್ಷೇತ್ರ: ಪುರುಷ-ಮಹಿಳೆ-ಇತರೆ-ಒಟ್ಟು
    ರಾಜರಾಜೇಶ್ವರಿನಗರ: 2,46,976-2,31,097-92-4,78,165
    ಶಿವಾಜಿನಗರ: 1,00,189-98,716-9-1,98,914
    ಶಾಂತಿನಗರ: 1,09,920-1,06,427-48-2,16,395
    ಗಾಂಧಿನಗರ: 1,16,719-1,09,607-24-2,26,350
    ರಾಜಾಜಿನಗರ: 1,03,349-1,00,921-10-2,04,280
    ಚಾಮರಾಜಪೇಟೆ: 1,16,437-1,10,505-38-2,26,980
    ಚಿಕ್ಕಪೇಟೆ: 1,11,200-1,06,832-18-2,18,050
    ಕೆ.ಆರ್.ಪುರ: 2,61,250-2,39,239-164-5,00,653
    ಮಹಾಲಕ್ಷ್ಮೀ ಲೇಔಟ್: 1,47,098-1,40,156-37-2,87,291
    ಮಲ್ಲೇಶ್ವರ: 1,11,411-1,11,164-6-2,22,581
    ಹೆಬ್ಬಾಳ: 1,44,554-1,39,125-52-2,83,731
    ಪುಲಿಕೇಶಿನಗರ: 1,18,736-1,17,059-37-2,35,832
    ಸರ್ವಜ್ಞನಗರ: 1,81,813-1,78,775-63-3,60,651
    ಸಿ.ವಿ.ರಾಮನ್‌ನಗರ: 1,40,612-1,26,588-117-2,67,317
    ಗೋವಿಂದರಾಜನಗರ:1,49,035-1,39,482-41-2,88,558
    ವಿಜಯನಗರ: 1,56,119-1,43,820-171-3,00,110
    ಬಸವನಗುಡಿ: 1,16,863-1,12,438-2-2,29,303
    ಪದ್ಮನಾಭನಗರ: 1,39,594-1,34,664-19-2,74,277
    ಬಿಟಿಎಂ ಲೇಔಟ್: 1,41,318-1,29,676-44-2,71,038
    ಜಯನಗರ: 1,04,004-1,02,710-15-2,06,729
    ಬೊಮ್ಮನಹಳ್ಳಿ: 2,37,493-2,05,155-71-4,42,719
    ಯಲಹಂಕ: 2,17,710- 2,09,374-80-4,27,164
    ಬ್ಯಾಟರಾಯನಪುರ: 2,55,185-2,38,227-116-4,93,528
    ಯಶವಂತಪುರ: 2,77,218-2,65,374-80-5,42,672
    ದಾಸರಹಳ್ಳಿ : 2,39,017-2,08,728-76-4,47,821
    ಮಹದೇವಪುರ: 3,18,238-2,72,532-121-5,90,891
    ಬೆಂಗಳೂರು ದಕ್ಷಿಣ: 3,57,417-3,19,727-103-6,77,247
    ಆನೇಕಲ್: 2,06,795-1,87,706-82-3,94,583


    ಇತರೆ ವಿವರಗಳು
    * 24,745- ವಿಶೇಷ ಚೇತನ ಮತದಾರರು
    * 1,736- ತೃತೀಯ ಲಿಂಗಿ ಮತದಾರರು
    * 22,446- ದಮನಿತ ಮಹಿಳಾ ಮತದಾರರು
    * 26,761- ಎಚ್‌ಐವಿ ಪೀಡಿತ ಮತದಾರರು
    * 2,101- ಸಾಗರೋತ್ತರ ಮತದಾರರು
    * 2,217- ಕ್ರಿಟಿಕಲ್ ಪೋಲಿಂಗ್ ಸ್ಟೇಷನ್‌ಗಳು

    ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts