More

  89.75 ಲಕ್ಷ ರೂ. ಉಳಿತಾಯ ಬಜೆಟ್

  ಕೊಳ್ಳೇಗಾಲ : ಕೊಳ್ಳೇಗಾಲ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 2024-25ನೇ ಸಾಲಿನ ಬಜೆಟ್ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು 51,74,27,529 ರೂ. ಆದಾಯದ, 50,84,52,000 ರೂ. ವೆಚ್ಚದ 89,75,529 ರೂ. ಉಳಿತಾಯ ಬಜೆಟ್ ಮಂಡಿಸಿದರು.

  ಶಾಸಕ ಎ.ಆರ್.ಕೃಷ್ಣಮೂರ್ತಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಿಲ್ಪಾನಾಗ್ ಅವರು, ವಿವಿಧ ರೀತಿಯ ತೆರಿಗೆ, ಶುಲ್ಕ, ದಂಡ ಸೇರಿದಂತೆ ಇನ್ನಿತರ ಸ್ವಂತ ಮೂಲಗಳಿಂದ ನಗರಸಭೆಗೆ 10,6,13,000 ರೂ. ಆದಾಯ ನಿರೀಕ್ಷಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಂದ 24,08,20,000 ರೂ. ಅನುದಾನ ನಿರೀಕ್ಷಿಸಲಾಗಿದೆ ಎಂದರು.

  ಯಾವುದಕ್ಕೆ ಎಷ್ಟು ಹಣ: ನಗರಸಭೆ ಒಟ್ಟು ಆದಾಯದ ಬಜೆಟ್‌ನಲ್ಲಿ ಕಚೇರಿ ಕಟ್ಟಡ, ಪೀಠೋಪಕರಣ 40 ಲಕ್ಷ, ರಸ್ತೆಗಳು ಹಾಗೂ ಪಾದಚಾರಿ ಮಾರ್ಗಕ್ಕೆ 2.10 ಕೋಟಿ ರೂ., ರಸ್ತೆ ಬದಿಯ ಚರಂಡಿ 1.60 ಕೋಟಿ ರೂ., ಬೀದಿ ದೀಪಗಳ ಅಳವಡಿಕೆಗೆ 40 ಲಕ್ಷ ರೂ., ಮಳೆ ನೀರಿನ ಚರಂಡಿ 30 ಲಕ್ಷ ರೂ., ವಿದ್ಯುತ್ ಚಿತಾಗಾರ 50 ಲಕ್ಷ ರೂ., ಘನ ತ್ಯಾಜ ನಿರ್ವಹಣೆ ಹಾಗೂ ಕಸ ತ್ಯಾಜ್ಯ ಯಂತ್ರೋ ಪಕರಣಗಳ ಖರೀದಿಗೆ 3,40 ಕೋಟಿ ರೂ., ಕ್ರೀಡಾಗಣ ನಿರ್ಮಾಣ 3.50 ಕೋಟಿ ರೂ., ಬೀದಿ ಬದಿ ವ್ಯಾಪಾರಿಗಳ ಘಟಕ 10 ಲಕ್ಷ ರೂ., ನೀರು ಸರಬರಾಜು ಕಾಮಗಾರಿ ಮತ್ತು ಯಂತ್ರೋಪಕರಣಗಳ ಖರೀದಿ 3.66 ಕೋಟಿ ರೂ., ಯುಜಿಡಿ ಕಾಮಗಾರಿಗೆ 4.20 ಕೋಟಿ ರೂ., ಉದ್ಯಾನವನ ಅಲಂಕಾರಿಕ ದೀಪ ಹಾಗೂ ನಿರ್ವಹಣೆ 40 ಲಕ್ಷ ರೂ., ನೌಕರರ ವೇತನ 6.81 ಕೋಟಿ ರೂ., 24*7 ಕುಡಿಯುವ ನೀರು ಯೋಜನೆಯ ನೌಕರರ ವೇತನ ಅನುದಾನ 20 ಲಕ್ಷ ರೂ., ಬೀದಿ ದೀಪಗಳು ಹಾಗೂ ನೀರು ಸರಬರಾಜು ವಿದ್ಯುತ್ ಬಿಲ್ 5.62 ಕೋಟಿ ರೂ., ಬೀದಿ ದೀಪಗಳ ದುರಸ್ತಿ ಹಾಗೂ ನಿರ್ವಹಣೆ 91. ಲಕ್ಷ ರೂ., ಘನತ್ಯಾಜ್ಯ ದುರಸ್ತಿ ಹಾಗೂ ನಿರ್ವಹಣೆ 5.1 ಕೋಟಿ ರೂ., ನೀರು ಸರಬರಾಜು ಹಾಗೂ ದುರಸ್ತಿ ನಿರ್ವಹಣೆ 2.48 ಕೋಟಿ ರೂ., ಯುಜಿಡಿ ದುರಸ್ತಿ ಹಾಗೂ ನಿರ್ವಹಣೆ 53 ಲಕ್ಷ ರೂ., ಸ್ಮಶಾನ ಅಭಿವೃದ್ಧಿಗೆ 53ಲಕ್ಷ ರೂ., ಸಾರ್ವಜನಿಕ ಶೌಚಗೃಹ ಹಾಗೂ ದುರಸ್ಥಿ 88.50 ಲಕ್ಷ ರೂ., ಶೌಚಗೃಹ ನಿರ್ಮಾಣಕ್ಕೆ ಸಹಾಯಧನ 51.20 ಲಕ್ಷ ರೂ., ವಿದ್ಯುತ್ ಠೇವಣಿ, ಕಡಿತಗಳ ಪಾವತಿ ಹಾಗೂ ಠೇವಣಿಗಳ ಮರು ಪಾವತಿ 3.04 ಕೋಟಿ ರೂ., ಶೇ.24.10 ರ ಯೋಜನೆ ಎಸ್ಸಿ-ಎಸ್ಟಿ ಕಲ್ಯಾಣ ಕಾರ್ಯಕ್ರಮಗಳಿಗೆ 1.1 ಕೋಟಿರೂ., ಶೇ.7.25 ಯೋಜನೆ ಇತರೆ ಬಡವರ ಕಲ್ಯಾಣ ಕಾರ್ಯಕ್ರಮಕ್ಕೆ 37 ಲಕ್ಷ ರೂ., ಇತರ ವೆಚ್ಚಗಳು ಹಾಗೂ ಸಮೂಹ ಅಭಿವೃದ್ಧಿಗೆ 1.96 ಕೋಟಿ ರೂ. ತೆಗದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

  ರಸ್ತೆ ವಿಸ್ತರಣೆಗೆ ಅನುದಾನ ತನ್ನಿ: ಬಜೆಟ್ ಸಭೆಯಲ್ಲಿ ಉಪಸ್ಥಿತಿಯಿದ್ದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಹಲವು ಸದಸ್ಯರು ಸರ್ಕಾರದಿಂದ ವಿಶೇಷ ಅನುದಾನ ತಂದು ಪಟ್ಟಣದ ಪ್ರಮುಖ ರಸ್ತೆಗಳಾದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ರಾಜ್‌ಕುಮಾರ್ ರಸ್ತೆ ಅಗಲೀಕರಣ ಮಾಡಬೇಕೆಂದು ಒತ್ತಾಯಿಸಿದರು.

  ಸದಸ್ಯ ಎ.ಪಿ ಶಂಕರ್ ಮಾತನಾಡಿ, ಸ್ವಂತ ಆದಾಯವನ್ನು ಹೆಚ್ಚುವರಿ ಮಾಡಲು ಯತ್ನಿಸಬೇಕು ಎಂದರು. ಸದಸ್ಯ ಪ್ರಕಾಶ್ ಶಂಕನಪುರ ಮಾತನಾಡಿ, ವಿದ್ಯುತ್ ಚಿತಾಗಾರ, ಕೆರೆ ಅಭಿವೃದ್ಧಿ, ಪೌರ ಕಾರ್ಮಿಕರ ವಿಶ್ರಾಂತಿ ಕೊಠಡಿ ನಿರ್ಮಿಸುವುದಕ್ಕೆ ಬಜೆಟ್‌ನಲ್ಲಿ ಅವಕಾಶ ಮಾಡಿಕೊಟ್ಟಿರುವುದು ಉತ್ತಮ ಕೆಲಸ ಎಂದು ತಿಳಿಸಿದರು.


  ಕಂದಾಯ ವಸೂಲಿಗೆ ಆದ್ಯತೆ ನೀಡಿ: ನಗರಸಭೆಯಲ್ಲಿ 16 ರಿಂದ 17 ಎಸ್ಸಿ-ಎಸ್ಟಿ ಸದಸ್ಯರಿದ್ದರೆ, ಆದರೆ, ಬಜೆಟ್‌ನಲ್ಲಿ ಎಸ್ಸಿ-ಎಸ್ಟಿ ಕಲ್ಯಾಣ ಕಾರ್ಯಕ್ರಮಗಳಿಗೆ 1.1 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈ ಮೊತ್ತ ಯಾವುದಕ್ಕೂ ಸಾಲುವುದಿಲ್ಲ ಎಂದರು.
  ಸದಸ್ಯ ಜಯಮೇರಿ ಮಾತನಾಡಿ, ಕಂದಾಯ ತೆರಿಗೆಗೆ ಒತ್ತು ನೀಡಬೇಕು. ಸದಸ್ಯರು ಹಾಗೂ ಅಧಿಕಾರಿಗಳು ಅನಧಿಕೃತ ಕಟ್ಟಡಗಳ ಬಳಿ ಕಂದಾಯ ಕಟ್ಟಿಸಿದರೆ 5 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಬಹುದು ಎಂದು ತಿಳಿಸಿದರು.

  ಪ್ರಶಾತ್ ಮಾತನಾಡಿ, ಎಸ್.ಎಫ್.ಸಿ. ವಿಶೇಷ ಅನುದಾನ 4 ಕೋಟಿ ರೂ. ನೀಡಿರುವುದು ಕಡಿಮೆ ಆಗಿದೆ. ಈ ಬಗ್ಗೆ ಶಾಸಕರು ಗಮಹರಿಸಬೇಕೆಂದು ಮನವಿ ಮಾಡಿದರು. ಇದು ಉತ್ತಮ ಬಜೆಟ್ ಆಗಿದೆ. ನಗರಸಭೆ ಆಗಿ ಬಹಳ ವರ್ಷವಾಗಿದೆ. ಈಗಾಗಲೇ ಕಂದಾಯ ವಸೂಲಿ ಆಗಬೇಕಿತ್ತು. ಮುಂದೆ ಎಲ್ಲರ ಸಹಕಾರದಿಂದ ನಗರಸಭೆ ಆದಾಯ ಹೆಚ್ಚಿಸೋಣ. ಪಟ್ಟಣದ ಬಹುನಿರೀಕ್ಷಿತ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ರಾಜ್‌ಕುಮಾರ್ ರಸ್ತೆ ವಿಸ್ತರಣೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ವಿಶೇಷ ಅನುದಾನ ತರಲು ಶ್ರಮಿಸುತ್ತೇನೆ.

  ಎ.ಆರ್.ಕೃಷ್ಣಮೂರ್ತಿ ಶಾಸಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts