More

    ರಾಜ್ಯಕ್ಕೆ ಬಾಂಗ್ಲಿಗರ ಕಂಟಕ: ಬೆಂಗ್ಳೂರು, ಹೊರವಲಯದಲ್ಲಿ 85 ಸಾವಿರ ಮಂದಿ ಅಕ್ರಮ ವಾಸ

    • ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ಭಾರತದ ಗಡಿದಾಟಿ ಒಳನುಸುಳಿರುವ ಬಾಂಗ್ಲಾದೇಶದ ಅಕ್ರಮ ನಿವಾಸಿಗಳು ಕರ್ನಾಟಕದಲ್ಲಿ ಬೇರೂರಿದ್ದಾರೆ. ಅದರಲ್ಲೂ ರಾಜಧಾನಿ ಮತ್ತು ಹೊರ ವಲಯದಲ್ಲಿ ಅಂದಾಜು 85 ಸಾವಿರ ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ಆಶ್ರಯ ಪಡೆದಿದ್ದಾರೆ. ಕೂಲಿ ಕಾರ್ವಿುಕರು, ಬ್ಯೂಟಿ ಪಾರ್ಲರ್, ವೇಶ್ಯಾವಾಟಿಕೆ ದಂಧೆ, ಚಿಂದಿ ಆಯುವ ಹಾಗೂ ಉಗ್ರ ಚಟವಟಿಕೆಯಲ್ಲಿ ತೊಡಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

    ಭಾರತದಲ್ಲಿ ಮತ್ತು ಬಾಂಗ್ಲಾದಲ್ಲಿ ಏಜೆಂಟ್​ಗಳಿದ್ದು, 5 ರಿಂದ 10 ಸಾವಿರ ರೂ. ಪಡೆದು ಬಾಂಗ್ಲಾ ಪ್ರಜೆಗಳನ್ನು ದೇಶದ ಒಳಗೆ ಕಳ್ಳ ದಾರಿಯಲ್ಲಿ ಕಳುಹಿಸಿ ಭಾರತದ ಏಜೆಂಟ್​ಗಳನ್ನು ಸಂಪರ್ಕ ಕಲ್ಪಿಸುತ್ತಾರೆ. ಇಂತಹ ದುಷ್ಕೃತ್ಯ ಪಶ್ಚಿಮ ಬಂಗಾಳ, ಮೇಘಾಲಯ, ಮಿಜೋರಾಂ, ತ್ರಿಪುರ ಮತ್ತು ಅಸ್ಸಾಂನಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಈ ರಾಜ್ಯಗಳಿಗೆ ಬರುವ ಬಾಂಗ್ಲಾ ದೇಶಿಗರು ಸ್ವಲ್ಪ ಸಮಯ ಅಲ್ಲೇ ಇದ್ದು, ಕೂಲಿ ಕೆಲಸ ಶುರು ಮಾಡುತ್ತಾರೆ. ಆನಂತರ ಸ್ಥಳೀಯ ಏಜೆಂಟ್​ಗಳ ಸಹಾಯದಿಂದ ಆಧಾರ್, ವೋಟರ್ ಐಡಿ, ಪಡಿತರ ಸೌಲಭ್ಯ ಪಡೆಯುತ್ತಾರೆ. ವಿದ್ಯೆ ಇದ್ದರೆ ಭಾರತೀಯ ಪಾಸ್​ಪೋರ್ಟ್ ಮಾಡಿಸಿಕೊಂಡು ವೀಸಾ ಪಡೆದು ವಿದೇಶಕ್ಕೆ ತೆರಳುತ್ತಾರೆ. ಇಲ್ಲವಾದರೆ, ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ ಎಂದು ಮಹಾನಗರಗಳಿಗೆ ಬಂದು ಅಕ್ರಮವಾಗಿ ವಾಸಿಸುತ್ತಾರೆ.

    ಬೆಂಗಳೂರಿನಲ್ಲಿ ಮಾರತ್​ಹಳ್ಳಿ, ವರ್ತರು, ರಾಮಮೂರ್ತಿನಗರ, ವೈಟ್​ಫೀಲ್ಡ್, ಕೆ.ಆರ್.ಪುರ, ರಾಮಮೂರ್ತಿನಗರ ಸೇರಿ ಇನ್ನಿತರ ಪ್ರದೇಶಗಳಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಕಡಿಮೆ ಕೂಲಿಗೆ ಸಿಗುತ್ತಾರೆ ಎಂಬ ಕಾರಣಕ್ಕೆ ಏಜೆಂಟ್​ಗಳು ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ ಮೂಲ ಎಂದು ಗುರುತಿನ ಚೀಟಿ ಮಾಡಿಸಿ ಶೆಡ್ ಕೊಡಿಸುತ್ತಾರೆ. ಮನೆಗೆಲಸ, ಸೆಕ್ಯೂರಿಟಿ ಗಾರ್ಡ್, ಕಟ್ಟಡ ಕಾರ್ವಿುಕರು ಇನ್ನಿತ್ತರ ಕೂಲಿ ಕೆಲಸ ಮತ್ತು ಹೆಚ್ಚಾಗಿ ರಾತ್ರಿ ವೇಳೆ ಮೂರು ಚಕ್ರದ ಸೈಕಲ್​ನಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಾರೆ. ಮತ್ತೆ ಕೆಲವರು ಬ್ಯೂಟಿ ಪಾರ್ಲರ್, ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಾರೆ. ಕೊಡಗು, ಮಡಿಕೇರಿ ಭಾಗದಲ್ಲೂ ಟೀ, ಕಾಫಿ ಎಸ್ಟೇಟ್​ಗಳಲ್ಲೂ ಕೆಲಸ ಮಾಡುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಬಾಂಗ್ಲಾ ಪ್ರಜೆಗಳ ಪತ್ತೆಯೇ ಕಷ್ಟ

    ಪಶ್ಚಿಮ ಬಂಗಾಳದ ಬೆಂಗಾಲಿಗರಿಗೂ ಬಾಂಗ್ಲಾ ಪ್ರಜೆಗಳ ಮುಖ ಚಹರೆ ಮತ್ತು ಭಾಷೆ ಹೋಲಿಕೆ ಆಗುತ್ತದೆ. ಅದಕ್ಕಾಗಿ ಬಾಂಗ್ಲಾ ಪ್ರಜೆಗಳ ಪತ್ತೆಹಚ್ಚುವುದು ಕಷ್ಟಸಾಧ್ಯವಾಗಿದೆ. ಅಕ್ರಮ ವಲಸಿಗರಿಗೆ ಏಜೆಂಟ್​ಗಳು ಪಶ್ಚಿಮ ಬಂಗಾಳದ ಗ್ರಾಮದ ಹೆಸರು, ವಿಳಾಸ, ತಂದೆ- ತಾಯಿ ಹೆಸರನ್ನು ಬಾಯಿ ಪಾಠ ಮಾಡಿಸುತ್ತಾರೆ. ಯಾರೇ ಕೇಳಿದರು ಸುಳ್ಳು ವಿಳಾಸ ಹೇಳಿಕೊಂಡು ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ನೆಲೆಸುತ್ತಾರೆ. ಅಸ್ಸಾಂ, ಬಿಹಾರ ನಾಗರಿಕರಿಗೂ ಬಾಂಗ್ಲಾ ಪ್ರಜೆಗಳು ಹೋಲುತ್ತಾರೆ. ಅದಕ್ಕಾಗಿ ಗುರುತಿಸುವುದು ಪೊಲೀಸರಿಗೆ ಕಬ್ಬಿಣದ ಕಡಲೆಯಾಗಿದೆ.

    ಮಾನವ ಕಳ್ಳಸಾಗಣೆ

    ಭಾರತ ಮತ್ತು ಬಾಂಗ್ಲಾದಲ್ಲಿ ಏಜೆಂಟ್​ಗಳು ಬಲವಾಗಿ ನೆಲೆಯೂರಿದ್ದಾರೆ. ಬ್ಯೂಟಿ ಪಾರ್ಲರ್, ನೌಕರಿ ಆಮಿಷವೊಡ್ಡಿ ಮಾವನ ಕಳ್ಳಸಾಗಾಣಿಕೆ ಮೂಲಕ ಯುವತಿಯನ್ನು ಕರೆತಂದು ಪಾರ್ಲರ್​ಗೆ ಬಿಟ್ಟು ನಿಧಾನಕ್ಕೆ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಾರೆ. ಇತ್ತೀಚೆಗೆ ರಾಮಮೂರ್ತಿನಗರದಲ್ಲಿ ನಡೆದ ಬಾಂಗ್ಲಾ ದೇಶಿಗರ ನಡುವಿನ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತ್ತು. ತಕ್ಷಣ ಎಚ್ಚೆತ್ತು ಆರೋಪಿಗನ್ನು ಬಂಧಿಸಿದ್ದಾರೆ.

    ಜೆಎಂಬಿ ಶಂಕಿತರ ಸೆರೆ

    ಬರ್ವ ಮತ್ತು ಮ್ಯಾನ್ಮಾರ್​ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್(ಜೆಎಂಬಿ) ಉಗ್ರ ಸಂಘಟನೆ ಭಾರತಕ್ಕೆ ಬಂದು ಬೌದ್ಧಧರ್ವಿುಯರ ಮೇಲೆ ದಾಳಿ ನಡೆಸಿದ್ದರು. ರಾಜ್ಯದಲ್ಲಿ ಇರುವ ಬೌದ್ಧರ ಮೇಲೆ ದಾಳಿಗೆ ಸ್ಕೆಚ್ ಹಾಕಿದ್ದ ಜೆಎಂಬಿ ಉಗ್ರರು ಸೋಲದೇವನಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ಸ್ಪೋಟಕ ತಯಾರಿಕೆ ಮಾಡಿದ್ದರು. ಮತ್ತೊಂದು ತಂಡ ಆನೇಕಲ್​ನಲ್ಲಿ ಆಶ್ರಯ ಪಡೆದಿತ್ತು. ರಾಷ್ಟ್ರೀಯ ತನಿಖಾ ದಳ ಕಾರ್ಯಾಚರಣೆ ನಡೆಸಿ 11 ಶಂಕಿತರನ್ನು ಬಂಧಿಸಿ ಕೋರ್ಟ್​ಗೆ ಆರೋಪಪಟ್ಟಿ ಸಲ್ಲಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts