More

    71ನೇ ಗಣರಾಜ್ಯೋತ್ಸವ ಆಚರಣೆಗೆ ಕ್ಷಣಗಣನೆ: ಬ್ರೆಜಿಲ್​ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸೊನಾರೊ ಮುಖ್ಯ ಅತಿಥಿ

    ನವದೆಹಲಿ: ಭಾರತದ 71ನೇ ಗಣರಾಜ್ಯೋತ್ಸವ ಆಚರಣೆಗೆ ರಾಜ್​​ಪಥ್​ನಲ್ಲಿ ಕ್ಷಣಗಣೆ ಆರಂಭವಾಗಿದೆ. ಗಣರಾಜ್ಯೋತ್ಸವದಂದು ಭಾರತದ ಸೇನೆಯ ಶಕ್ತಿ, ಸಾಂಸ್ಕೃತಿಕ ಪರಂಪರೆ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಆಗಿರುವ ಪ್ರಗತಿ ಅನಾವರಣಗೊಳ್ಳಲಿದೆ.

    ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸೊನಾರೊ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ
    ಭಾಗವಹಿಸಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಭಾರತ ಗೇಟ್​ ಬಳಿ ಇರುವ ಹುತಾತ್ಮ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಇಂಡಿಯಾ ಗೇಟ್ ಗೌರವ ಸಲ್ಲಿಸುವ ಬದಲು ಇದೆ ಮೊದಲ ಬಾರಿಗೆ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ಗೌರವ ಸಲ್ಲಿಸುತ್ತಿದ್ದಾರೆ.

    ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪಥ ಸಂಚಲನಕ್ಕೆ ಚಾಲನೆ ನೀಡಲಿದ್ದಾರೆ.  ಭಾರತೀಯ ಸೇನೆಯ ಯುದ್ಧ ಟ್ಯಾಂಕರ್​, ಭೀಷ್ಮಾ, ಉಪಗ್ರಹ ವಿರೋಧಿ ಶಸ್ತ್ರಾಸ್ತ್ರ ಮಿಷನ್ ಶಕ್ತಿ, ಕಾಲಾಳುಪಡೆ, ಯುದ್ಧ ವಾಹನಗಳು ಮತ್ತು ಭಾರತೀಯ ವಾಯು ಪಡೆಯ (ಐಎಎಫ್) ಹೊಸದಾಗಿ ಸೇರ್ಪಡೆಗೊಂಡ ಚಿನೂಕ್ ಮತ್ತು ಅಪಾಚೆ ಹೆಲಿಕಾಪ್ಟರ್‌ಗಳ ಪ್ರದರ್ಶನ ನಡೆಯಲಿದೆ.

    ಭಾರತೀಯ ಸೇನೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮುಖ್ಯ ಯುದ್ಧದ ಟ್ಯಾಂಕರ್​ ಟಿ -90 ಭೀಷ್ಮಾ ಟ್ಯಾಂಕರ್​, ಕಾಲಾಳುಪಡೆ ಯುದ್ಧ ವಾಹನ ಬಾಲ್ವೇ ಮೆಷಿನ್ ಪಿಕೇಟ್, ಕೆ -9 ವಜ್ರಾ ಮತ್ತು ಧನುಷ್ ಬಂದೂಕುಗಳು, ಸಾಗಿಸಬಹುದಾದ ಉಪಗ್ರಹ ಟರ್ಮಿನಲ್ ಮತ್ತು ಆಕಾಶ್ ಶಸ್ತ್ರಾಸ್ತ್ರ ಪ್ರಮುಖ ಆಕರ್ಷಣೆಯಾಗಿದೆ.

    ಗಣರಾಜ್ಯೋತ್ಸವದ ಮೆರವಣಿಗೆಯನ್ನು ದೆಹಲಿ ಪ್ರದೇಶದ ಪೆರೇಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆಸಿತ್ ಮಿಸ್ತ್ರಿ ವಹಿಸಲಿದ್ದಾರೆ. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts