More

    ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮೊದಲ ಕರೊನಾ ಪ್ರಕರಣ; 68ವರ್ಷದ ಮಹಿಳೆಗೆ ಸೋಂಕು

    ಪುದುಚೇರಿ: ಭಾರತದಲ್ಲಿ ಕರೊನಾ ವೈರಸ್​ ಪ್ರಮಾಣ ದಿನೇದಿನೆ ಹೆಚ್ಚುತ್ತಿದೆ. ಇಂದು ದೆಹಲಿಯಲ್ಲಿ 60 ವರ್ಷ ಮೇಲ್ಪಟ್ಟ ಮಹಿಳೆಯೋರ್ವರು ಕರೊನಾಕ್ಕೆ ಬಲಿಯಾಗಿದ್ದಾರೆ. ಅದರ ಬೆನ್ನಲ್ಲೇ ಪುದುಚೇರಿಯ ಮಾಹೆಯಲ್ಲಿ 68ವರ್ಷದ ಮಹಿಳೆಯೋರ್ವರಿಗೆ ಕರೊನಾ ತಗುಲಿದ್ದು ದೃಢಪಟ್ಟಿದೆ.

    ಈ ಮಹಿಳೆ ಕಳೆದವಾರ ಯುಎಇ(ಸಂಯುಕ್ತ ಅರಬ್​ ರಾಷ್ಟ್ರ)ದಿಂದ ವಾಪಸ್​ ಆಗಿದ್ದರು. ಇವರಿಗೆ ಮಾಹೆ ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಇದು ಪುದುಚೇರಿಯಲ್ಲಿ ಪತ್ತೆಯಾದ ಮೊದಲ ಕರೊನಾ ಕೇಸ್​.

    ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಕಳೆದ ವಾರ ಮೂವರು ಶಂಕಿತ ಕರೊನಾ ಸೋಂಕಿತರನ್ನು ಪ್ರತ್ಯೇಕ ವಾರ್ಡ್​ನಲ್ಲಿ ಇಟ್ಟು ಪರೀಕ್ಷೆಗೆ ಒಳಪಡಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪುದುಚೇರಿ ಸರ್ಕಾರ ಎಲ್​ಕೆಜಿ, ಯುಕೆಜಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಭಾನುವಾರದಿಂದಲೇ ರಜೆ ಘೋಷಣೆ ಮಾಡಿದೆ. ಹಾಗೇ ಹಲವು ಕ್ರಮಗಳನ್ನು ಕೈಗೊಂಡಿದೆ.

    ಭಾರತದಲ್ಲಿ ಒಟ್ಟು 126 ಮಂದಿಯಲ್ಲಿ ಕರೊನಾ ಇರುವುದು ದೃಢಪಟ್ಟಿದ್ದು, ಇದುವರೆಗೆ ಮೂವರು ಮೃತಪಟ್ಟಿದ್ದಾರೆ. 13 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.(ಏಜೆನ್ಸೀಸ್​)

    ವಿದ್ಯಾರ್ಥಿನಿ ಮೇಲೆ ಪದೇಪದೆ ರೇಪ್​ ಮಾಡಿದ ಬಾಕ್ಸಿಂಗ್​ ಕೋಚ್​: ರೈಲಿನಲ್ಲೇ ನಡೆಯಿತು ಮೊದಲ ಅತ್ಯಾಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts