More

    ಮಾ.25ರಿಂದ ಮತ್ತೆ 5,8,9ನೇ ತರಗತಿ ಮೌಲ್ಯಾಂಕನ ಆರಂಭ: ವಿದ್ಯಾರ್ಥಿಗಳಿಗೆ ಒತ್ತಡವಾದ ವಿಷಯಗಳು ಯಾವುವು? ಇಲ್ಲಿದೆ ಮಾಹಿತಿ

    ಬೆಂಗಳೂರು ಹೈಕೋರ್ಟ್‌ನ ವಿಭಾಗೀಯ ಪೀಠವು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇಂದಿನಿಂದ (ಮಾ.25) 5,8 ಮತ್ತು 9ನೇ ತರಗತಿಗೆ ಮಂಡಳಿ ವತಿಯಿಂದ ಮೌಲ್ಯಾಂಕನ ನಡೆಸಲಾಗುತ್ತಿದೆ.

    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಈಗಾಗಲೇ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಅದರಂತೆ ಸೋಮವಾರ 5ನೇ ತರಗತಿಗೆ ಪರಿಷರ ವಿಜ್ಞಾನ, 8 ಮತ್ತು 9ನೇ ತರಗತಿಗೆ ತೃತೀಯ ಭಾಷೆ ಹಿಂದಿ ಪರೀಕ್ಷೆಗಳು ನಡೆಯಲಿವೆ. ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆಗಳು ಮುಗಿದಿವೆ. ಮಾ.26ರಂದು ಗಣಿತ, ಮಾ.27ರಂದು ವಿಜ್ಞಾನ. ಮಾ.28ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.

    ಖಾಸಗಿ ಶಾಲಾ ಸಂಘಟನೆಗಳಾದ ರುಪ್ಸಾ ಮತ್ತು ಅವರ್ಸ್ ಸ್ಕೂಲ್ ವತಿಯಿಂದ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಏಕ ಸದಸ್ಯಪೀಠ ವಿಚಾರಣೆ ನಡೆಸಿ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಬಳಿಕ ವಿಭಾಗೀಯ ಪೀಠವು ಪರೀಕ್ಷೆ ನಡೆಸಲು ಅನುಮತಿ ನೀಡಿತು.

    ಈ ತೀರ್ಪಿನ ವಿರುದ್ಧ ಖಾಸಗಿ ಶಾಲಾ ಸಂಘಟನೆಯು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಪರೀಕ್ಷೆಯನ್ನು ರದ್ದುಗೊಳಿಸಿ ಪ್ರಕರಣವನ್ನು ಮತ್ತೆ ಹೈಕೋರ್ಟ್‌ಗೆ ವರ್ಗಾಯಿಸಿತು. ಹೈಕೋರ್ಟ್‌ನ ವಿಭಾಗೀಯ ಪೀಠದ ತೀರ್ಪಿನ ಆಧಾರದಲ್ಲಿ ಪರೀಕ್ಷೆಯನ್ನು ಮುಂದುವರಿಸಲಾಗುತ್ತಿದೆ.

    ವಿದ್ಯಾರ್ಥಿಗಳಿಗೆ ಹೊರೆ:

    ಕೆಲವು ಖಾಸಗಿ ಶಾಲೆಗಳು ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ಪ್ರಕಟವಾದ ಬಳಿಕ ಮಂಡಳಿ ಪರೀಕ್ಷೆ ನಡೆಯುವುದಿಲ್ಲವೆಂದು ಭಾವಿಸಿ ಶಾಲಾ ಹಂತದಲ್ಲಿಯೇ ಪರೀಕ್ಷೆ ನಡೆಸಲಾಗಿದೆ. ಅಂತಹ ಶಾಲೆಗಳಲ್ಲಿ ವಿದ್ಯಾರ್ಥಿಗಳು ಈಗ ಎರಡೆರಡು ಪರೀಕ್ಷೆಗಳನ್ನು ಬರೆಯುವಂತಾಗಿದೆ. ಉಳಿದ ಶಾಲೆಗಳಲ್ಲಿಯೂ ಎಂದಿನಂತೆ ಪರೀಕ್ಷೆ ನಡೆಯಲಿವೆ. ಒಟ್ಟು 28,14,104 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts