More

    50 ಸಾವಿರಕ್ಕಿಂತ ಮೇಲ್ಪಟ್ಟು ಹಣ ಕೊಂಡೊಯ್ಯುವಂತಿಲ್ಲ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​

    ಗದಗ:
    ವಿಧಾನಸಭಾ ಚುನಾವಣೆ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಚುನಾವಣಾ ಸಮಯದಲ್ಲಿ ಅಕ್ರಮ ವೆಚ್ಚವನ್ನು ನಿಯಂತ್ರಿಸುವುದಕ್ಕಾಗಿ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಯಾವುದೇ ವ್ಯಕ್ತಿಯು ಸೂಕ್ತ ದಾಖಲೇಗಳಿಲ್ಲದೇ 50 ಸಾವಿರಕ್ಕಿಂತ ಹೆಚ್ಚು ನಗದು ಕೊಂಡೊಯ್ಯುವುದನ್ನು ಮತ್ತು ಬೆಲೆ ಬಾಳುವ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​ ತಿಳಿಸಿದ್ದಾರೆ.
    ಈ ಕುರಿತು ಪ್ರಕಟಣೆ ತಿಳಿಸಿರುವ ಅವರು, ಓರ್ವ ದಾನಿಯಿಂದ ವಿವಿಧ ಕಾರಣಗಳಿಗಾಗಿ 2 ಲಕ್ಕಿಂತ ಹೆಚ್ಚಿನ ನಗದು, ಉಡುಗೊರೆಯನ್ನು ಸ್ವೀಕರಿಸುವುದನ್ನು ನಿಷೇಧಿಸಲಾಗಿದೆ. ವ್ಯಾಪಾರ ವಹಿವಾಟಿನ ಕಾರಣಗಳಿಗಾಗಿ ಸೂಕ್ತ ದಾಖಲಾತಿಗಳಿಲ್ಲದೇ 10,000 ರೂ.ಗಳಿಗಿಂತ ಹೆಚ್ಚಿಗೆ ಬೆಲೆಬಾಳುವ ಸರಕುಗಳನ್ನು ಸಂಗ್ರಹಿಸುವುದು ಹಾಗೂ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​ ಆದೇಶ ಹೊರಡಿಸಿದ್ದಾರೆ.

    ಪ್ರಚಾರ ಸಾಮಗ್ರಿ ನಿಷೇಧ:
    ಸಾರ್ವಜನಿಕ ಮತ್ತು ಖಾಸಗಿ ಕಟ್ಟಡಗಳು ಮತ್ತು ಇತರ ತೆರೆದ ಸ್ಥಳಗಳಲ್ಲಿ ಚಿಹ್ನೆಗಳು ಮತ್ತು ಬಿತ್ತಪತ್ರಗಳ ಪ್ರದಶಿರ್ಸುವುದನ್ನು ನಿಷೇಧಿಸಲಾಗಿದೆ. ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸ್ಥಳಿಯ ಪ್ರಾಧಿಕಾರದ ಲಿಖಿತ ಅನುಮತಿಯಿಲ್ಲದೇ ಯಾವುದೇ ಜಾಹೀರಾತು ಪ್ರದಶಿರ್ಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಪ್ರತಿಬಂಧಕಾಜ್ಞೆ ಜಾರಿ: ಚುನಾವಣಾ ಆಯೋಗವು ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ&2023 ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ಹಿದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮೇ.15 ರವರೆಗೆ ಜಿಲ್ಲೆಯಾದ್ಯಂತ ವಿತ್ತ ಜೀವಿಗಳಿಗೆ ಮಾರಕವಾಗುವ ಯಾವುದೇ ಮಾರಕಾಸ್ತ್ರಗಳನ್ನು (ಕಲ್ಲು , ಬಂದೂಕು, ಭಚಿರ್, ಕತ್ತಿ, ಚಾಕೂ , ಕುಡುಗೋಲು, ಕೊಡಲಿ, ಬಡಿಗೆ ಇತ್ಯಾದಿ) ಕೊಂಡೊಯ್ಯುವುದನ್ನು ನಿಷೇಧಿಸಿ ಆದೇಶಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts