More

    ಕರೊನಾ ವಿರುದ್ಧ ಹೋರಾಟಕ್ಕೆ ಐದು ಅಸ್ತ್ರಗಳು..ಜತೆಗೆ ಕೇಂದ್ರ ಸರ್ಕಾರದ ಸಹಕಾರ: ಅರವಿಂದ್​ ಕೇಜ್ರಿವಾಲ್​

    ನವದೆಹಲಿ: ಭಾರತದಲ್ಲಿ ಅತಿಯಾಗಿ ಕರೊನಾ ಬಾಧಿಸಿದ ಪ್ರದೇಶಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯೂ ಒಂದು. ಮಹಾರಾಷ್ಟ್ರ ಬಿಟ್ಟರೆ ದೆಹಲಿ ಎರಡನೇ ಸ್ಥಾನದಲ್ಲಿದೆ.

    ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಸೇರಿ ಹಲವು ವಿಧದ ತೊಂದರೆಗಳೂ ಅಲ್ಲಿ ಸೃಷ್ಟಿಯಾಗಿದ್ದವು. ತನ್ಮಧ್ಯ ಗೃಹ ಸಚಿವ ಅಮಿತ್​ ಷಾ ಅವರೇ ಸ್ವತಃ ದೆಹಲಿ ಬಗ್ಗೆ ಕಾಳಜಿ ವಹಿಸಿದ್ದು, ಅಲ್ಲಿ ಸೋಂಕು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸರ್ಕಾರಕ್ಕೆ ಸೂಚಿಸಿದ್ದಾರೆ.

    ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ವರ್ಚ್ಯುವಲ್​ ಸುದ್ದಿಗೋಷ್ಠಿ ನಡೆಸಿ, ರಾಷ್ಟ್ರರಾಜಧಾನಿಯ ಕೊವಿಡ್​-19 ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.  ನಾವು ಕರೊನಾ ಸೋಂಕಿನ ವಿರುದ್ಧ ಐದು ಅಸ್ತ್ರವನ್ನು ಪ್ರಯೋಗಿಸುತ್ತಿದ್ದೇವೆ. ಇದರಿಂದಾಗಿ ವೈರಸ್​ ಪ್ರಸರಣದ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

    ಮೊದಲನೇದಾಗಿ ಆಸ್ಪತ್ರೆಗಳಲ್ಲಿ ಬೆಡ್​ಗಳನ್ನು ಹೆಚ್ಚಿಸಿದ್ದೇವೆ. ಎರಡನೇ ಅಸ್ತ್ರವನ್ನಾಗಿ ಕೊವಿಡ್​-19 ತಪಾಸಣೆ ಮತ್ತು ಐಸೋಲೇಶನ್​ನ್ನು ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ. ಮೂರನೇದಾಗಿ ಪಲ್ಸ್ ಆಕ್ಸಿಮೀಟರ್​ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್​ಗಳನ್ನು ಹೆಚ್ಚಿಸಲಾಗಿದೆ. ನಾಲ್ಕನೇದಾಗಿ ಪ್ಲಾಸ್ಮಾ ಥೆರಪಿಯನ್ನು ಅಳವಡಿಸಿಕೊಳ್ಳಲಾಗಿದೆ ಹಾಗೂ ಕೊನೇಯ ಮತ್ತು ಐದನೇ ಅಸ್ತ್ರವೆಂದರೆ ಸಮೀಕ್ಷೆ, ಸ್ಕ್ರೀನಿಂಗ್​​ಗಳು. ಇವೆಲ್ಲವು​​ಗಳಿಂದಾಗಿ ಕರೊನಾ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ ಎಂದಿದ್ದಾರೆ.

    ಲಾಕ್​ಡೌನ್​ ತೆರವಿನ ಬಳಿಕ ಕರೊನಾ ಹೆಚ್ಚುತ್ತದೆ ಎಂಬುದು ಅಂದಾಜಿತ್ತು. ಆದರೆ ನಮ್ಮ ಕಲ್ಪನೆಗೂ ಮೀರಿ ಸೋಂಕಿನ ಪ್ರಮಾಣ ಹೆಚ್ಚಾಯಿತು. ನಮ್ಮ ಎದುರು ಇದ್ದಿದ್ದು ಎರಡೇ ಆಯ್ಕೆ. ಒಂದು ಮತ್ತೊಮ್ಮೆ ಲಾಕ್​ಡೌನ್​ ಹೇರುವುದು, ಇನ್ನೊಂದು ಕರೊನಾ ವಿರುದ್ಧ ಹೋರಾಡುವುದು. ಇವೆರಡಲ್ಲಿ ಹೆಚ್ಚಿನ ಜನರ ಅಭಿಪ್ರಾಯ ಲಾಕ್​​ಡೌನ್​ ಬೇಡ ಎಂಬುದಾಗಿತ್ತು. ಹಾಗಾಗಿ ಕರೊನಾ ವಿರುದ್ಧ ದಿಟ್ಟವಾಗಿ ಹೋರಾಡುತ್ತಿದ್ದೇವೆ ಎಂದು ತಿಳಿಸಿದರು.

    ಮೊದಮೊದಲು ಆಸ್ಪತ್ರೆಗಳಲ್ಲಿ ಬೆಡ್​ಗಳ ಸಮಸ್ಯೆ ಉಂಟಾಯಿತು. ಇದರಿಂದಾಗಿ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಯಿತು. ಕಳೆದ ಒಂದು ವಾರದಿಂದ ಬೆಡ್​ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಸದ್ಯ ದೆಹಲಿಯಲ್ಲಿ 13, 500 ಬೆಡ್​ಗಳಿವೆ. ಅದರಲ್ಲಿ 6500 ತುಂಬಿವೆ ಎಂದು ಕೇಜ್ರಿವಾಲ್​ ತಿಳಿಸಿದ್ದಾರೆ.

    ಜೂನ್​ ಮೊದಲ ವಾರದಲ್ಲಿ ದಿನಕ್ಕೆ 5000 ಮಂದಿಯನ್ನು ಕರೊನಾ ಟೆಸ್ಟ್​ಗೆ ಒಳಪಡಿಸಲಾಗುತ್ತಿತ್ತು. ಆದರೆ ಈಗ ಪ್ರತಿದಿನ 20,000 ಮಂದಿಗೆ ತಪಾಸಣೆ ಮಾಡುತ್ತಿದ್ದೇವೆ.

    ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನಮಗೆ ತುಂಬ ಸಹಕಾರ ನೀಡಿದೆ. ಆ್ಯಂಟಿಜನ್​ ಕಿಟ್​ ಬಳಸಲು ಕೇಂದ್ರ ಸರ್ಕಾರ ಮೊದಲು ನಮಗೆ ಅವಕಾಶ ನೀಡಿದೆ. ಇದೀಗ ನಾವು 6 ಲಕ್ಷಕ್ಕೂ ಅಧಿಕ ಕಿಟ್​ಗಳಿಗೆ ಆರ್ಡ್​ ಮಾಡಿದ್ದೇವೆ ಎಂದಿದ್ದಾರೆ. (ಏಜೆನ್ಸೀಸ್​)

    ಗ್ಯಾಸ್​ ಸ್ಪೋಟದಿಂದ ಇಡೀ ಮನೆ ಧ್ವಂಸವಾದ್ರೂ ತಾಯಿ-ಮಕ್ಕಳ ಜೀವ ಉಳಿಸಿದ ಫ್ರಿಡ್ಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts