More

    ಶೇ40 ಕಮಿಷನ್ ಆರೋಪ; ನ್ಯಾಯಾಂಗ ತನಿಖೆಗೆ ಮುಂದಾದ ಸರ್ಕಾರ

    ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ಹೆಚ್ಚು ಸದ್ದು ಮಾಡಿದ್ದ ಪಿಎಸ್‌ಐ ನೇಮಕ ಪರೀಕ್ಷಾ ಅಕ್ರಮದ ತನಿಖೆಗೆ ನ್ಯಾ.ವೀರಪ್ಪ ನೇತೃತ್ವದಲ್ಲಿ ಆಯೋಗ ರಚಿಸಿದ ಕಾಂಗ್ರೆಸ್ ಸರ್ಕಾರ, ಶೇ.40 ಕಮಿಷನ್ ಆರೋಪದ ತನಿಖೆಯತ್ತ ಗಂಭೀರ ಚಿಂತನೆ ನಡೆಸಿದೆ.

    ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಮಾತುಕತೆ ನಡೆಸಿದ್ದು, ತನಿಖಾ ಆಯೋಗದ ನೇತೃತ್ವವಹಿಸಲು ಒಪ್ಪಿಗೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಶೇ.40 ಕಮಿಷನ್ ಆರೋಪವು ತನ್ನದೇ ಆದ ಕಾಣಿಕೆ ಸಲ್ಲಿಸಿದ್ದು, ಅಧಿಕಾರಕ್ಕೆ ಬಂದ ಮೇಲೆ ತನಿಖೆಗೆ ವಿಳಂಬ ಮಾಡಿದರೆ ಜನರಿಗೆ ತಪ್ಪು ಸಂದೇಶ ಹೋಗಲಿದೆ.

    ಆಧಾರ, ಪುರಾವೆಗಳಿಲ್ಲದ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಬಿಜೆಪಿ ಅಧಿಕಾರದಲ್ಲಿದ್ದಾಗ ತಳ್ಳಿ ಹಾಕಿತ್ತು. ಚುನಾವಣೆಯಲ್ಲಿ ಸೋತು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತ ನಂತರವೂ 40 ಪರ್ಸೆಂಟ್ ಕಮಿಷನ್ ಆರೋಪಗಳಿಗೆ ದಾಖಲೆ ಒದಗಿಸುವಲ್ಲಿ ಕಾಂಗ್ರೆಸ್ ವಿಲವಾಗಿದೆ ಎಂದು ತಿವಿದಿತ್ತು.

    ಕಮಿಷನ್ ಆರೋಪದ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚನೆಗೆ ಸಿದ್ದರಾಮಯ್ಯ ಹೆಚ್ಚಿನ ಆಸಕ್ತಿವಹಿಸಿದ್ದಾರೆ. ಸಚಿವ ಸಂಪುಟದ ಅನೇಕ ಸದಸ್ಯರು ಕೂಡ ಒತ್ತಾಸೆ ನೀಡಿದ್ದಾರೆ.
    ಬೆಂಗಳೂರು
    ಬಿಜೆಪಿ ಆಡಳಿತಾವಧಿಯಲ್ಲಿ ಹೆಚ್ಚು ಸದ್ದು ಮಾಡಿದ್ದ ಪಿಎಸ್‌ಐ ನೇಮಕ ಪರೀಕ್ಷಾ ಅಕ್ರಮದ ತನಿಖೆಗೆ ನ್ಯಾ.ವೀರಪ್ಪ ನೇತೃತ್ವದಲ್ಲಿ ಆಯೋಗ ರಚಿಸಿದ ಕಾಂಗ್ರೆಸ್ ಸರ್ಕಾರ, ಶೇ.40 ಕಮಿಷನ್ ಆರೋಪದ ತನಿಖೆಯತ್ತ ಗಂಭೀರ ಚಿಂತನೆ ನಡೆಸಿದೆ.
    ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಮಾತುಕತೆ ನಡೆಸಿದ್ದು, ತನಿಖಾ ಆಯೋಗದ ನೇತೃತ್ವವಹಿಸಲು ಒಪ್ಪಿಗೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
    ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಶೇ.40 ಕಮಿಷನ್ ಆರೋಪವು ತನ್ನದೇ ಆದ ಕಾಣಿಕೆ ಸಲ್ಲಿಸಿದ್ದು, ಅಧಿಕಾರಕ್ಕೆ ಬಂದ ಮೇಲೆ ತನಿಖೆಗೆ ವಿಳಂಬ ಮಾಡಿದರೆ ಜನರಿಗೆ ತಪ್ಪು ಸಂದೇಶ ಹೋಗಲಿದೆ ಎಂಬ ಅಳುಕು ಆಡಳಿತ ಪಕ್ಷವನ್ನು ಕಾಡಲಾರಂಭಿಸಿದೆ.

    ಆಧಾರ, ಪುರಾವೆಗಳಿಲ್ಲದ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಬಿಜೆಪಿ ಅಧಿಕಾರದಲ್ಲಿದ್ದಾಗ ತಳ್ಳಿ ಹಾಕಿತ್ತು. ಚುನಾವಣೆಯಲ್ಲಿ ಸೋತು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತ ನಂತರವೂ 40 ಪರ್ಸೆಂಟ್ ಕಮಿಷನ್ ಆರೋಪಗಳಿಗೆ ದಾಖಲೆ ಒದಗಿಸುವಲ್ಲಿ ಕಾಂಗ್ರೆಸ್ ವಿಲವಾಗಿದೆ ಎಂದು ತಿವಿದಿತ್ತು.
    ಕಮಿಷನ್ ಆರೋಪದ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚನೆಗೆ ಸಿದ್ದರಾಮಯ್ಯ ಹೆಚ್ಚಿನ ಆಸಕ್ತಿವಹಿಸಿದ್ದಾರೆ. ಸಚಿವ ಸಂಪುಟದ ಅನೇಕ ಸದಸ್ಯರು ಕೂಡ ಒತ್ತಾಸೆ ನೀಡಿದ್ದಾರೆ.
    ಈ ಹಿನ್ನೆಲೆಯಲ್ಲಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿ ಇಷ್ಟರಲ್ಲೇ ಆದೇಶ ಹೊರಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

    ಪಿಎಸ್‌ಐ ನೇಮಕ ಅಕ್ರಮದ ತನಿಖೆಗೆ ನ್ಯಾ.ವೀರಪ್ಪ ನೇತೃತ್ವದಲ್ಲಿ ಆಯೋಗ ರಚಿಸಿದ್ದನ್ನು ಪ್ರತಿಪಕ್ಷ ಬಿಜೆಪಿ ದ್ವೇಷದ ಕ್ರಮವೆಂದು ಟೀಕಿಸಿದೆ. ಶೇ.40 ಕಮಿಷನ್ ಆರೋಪ ಮಾತ್ರವಲ್ಲ ಎಲ್ಲ ಹಗರಣಗಳ ತನಿಖೆಗೂ ಒತ್ತಾಯಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts