More

    ಇಲ್ಲಿ ಕೆಜಿ ಬಾಳೆಹಣ್ಣಿಗೆ 3,300 ರೂ.!; ಉತ್ತರ ಕೊರಿಯಾದಲ್ಲಿ ಹಣದುಬ್ಬರ ತೀವ್ರ, ಕಡಿಮೆ ಆಹಾರ ತಿನ್ನಿ ಎಂದ ಸರ್ಕಾರ

    ಪ್ಯೊಂಗ್​ಯಾಂಗ್: ಉತ್ತರ ಕೊರಿಯಾದಲ್ಲಿ ಆಹಾರದ ಕೊರತೆ ತೀವ್ರವಾಗಿ ಕಾಡಿದೆ. ಆಹಾರ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಈ ಹಿನ್ನೆಲೆಯಲ್ಲಿ ದೇಶವಾಸಿಗಳು 2025ರ ತನಕ ಕಡಿಮೆ ಆಹಾರ ಸೇವಿಸಬೇಕು ಎಂದು ನಾಯಕ ಕಿಮ್ ಜಾಂಗ್ ಉನ್ ಕರೆ ನೀಡಿದ್ದಾರೆ. ದೇಶದ ಮೇಲೆ ವಿವಿಧ ನಿರ್ಬಂಧಗಳಿದ್ದು, ಆಹಾರ ಆಮದು ಮಾಡಿಕೊಳ್ಳುವುದು ಕೂಡ ಕಷ್ಟವಾಗಿದೆ. ಹೀಗಾಗಿ ದೇಶ ವಾಸಿಗಳ ಆಹಾರದ ಬೇಡಿಕೆ ಪೂರೈಕೆ ಮಾಡುವುದಕ್ಕೆ ಅಸಾಧ್ಯವಾಗಿದೆ. ಆದ್ದರಿಂದ ಈ ರೀತಿ ಕ್ರಮಗಳನ್ನು ಜನರೇ ತೆಗೆದುಕೊಳ್ಳಬೇಕು ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾಗಿ ರೇಡಿಯೋ ಫ್ರೀ ಏಷ್ಯಾ ವರದಿ ಮಾಡಿದೆ. 1990ರ ದಶಕದ ತೀವ್ರ ಬರ ಪರಿಸ್ಥಿತಿ ಬಳಿಕ ಈಗಲೇ ಅಂತಹ ಸನ್ನಿವೇಶ ಮತ್ತೊಮ್ಮೆ ಉತ್ತರ ಕೊರಿಯಾವನ್ನು ಕಾಡಿದೆ ಎಂದು ಮೂಲಗಳು ತಿಳಿಸಿವೆ.

    ಇಲ್ಲಿ ಕೆಜಿ ಬಾಳೆಹಣ್ಣಿಗೆ 3,300 ರೂ.!; ಉತ್ತರ ಕೊರಿಯಾದಲ್ಲಿ ಹಣದುಬ್ಬರ ತೀವ್ರ, ಕಡಿಮೆ ಆಹಾರ ತಿನ್ನಿ ಎಂದ ಸರ್ಕಾರಭಾರಿ ಮಳೆಯಿಂದ ಬೆಳೆ ನಾಶ: ಉತ್ತರ ಕೊರಿಯಾದಲ್ಲಿ ಆಹಾರ ಕೊರತೆ ಕಾಣಿಸಿಕೊಳ್ಳಲು ಇತ್ತೀಚೆಗೆ ಸಂಭವಿಸಿದ ಭಾರಿ ಮಳೆ ಹಾಗೂ ಪ್ರವಾಹ ಪ್ರಮುಖ ಕಾರಣ. 2020ರ ಸೆಪ್ಟೆಂಬರ್​ನಲ್ಲಿ ಭಾರಿ ಮಳೆಯಾಗಿದೆ. 1981ರ ಬಳಿಕ ಸುರಿದ ಅತ್ಯಧಿಕ ಮಳೆ ಇದಾಗಿದೆ. 40 ಸಾವಿರ ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿ ಬೆಳೆ ನಾಶವಾಗಿದೆ ಎಂದು ಅಂದಾಜು ಮಾಡಲಾಗಿದೆ. 16 ಸಾವಿರಕ್ಕೂ ಅಧಿಕ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

    ಕೋವಿಡ್ ನಿರ್ಬಂಧವೂ ಕಾರಣ: ದೇಶದಲ್ಲಿ ಆಹಾರದ ಕೊರತೆ ಹೆಚ್ಚಾಗಲು ಕೋವಿಡ್ ನಿರ್ಬಂಧ ಹೆಚ್ಚಾಗಿದ್ದು ಕೂಡ ಕಾರಣ. ದೇಶದ ಎಲ್ಲ ಗಡಿಗಳನ್ನು ಬಂದ್ ಮಾಡಲಾಗಿದೆ. ಉತ್ತರ ಕೊರಿಯಾಕ್ಕೆ ಬಹುತೇಕ ಎಲ್ಲ ನೆರವು ಕೂಡ ಚೀನಾದಿಂದಲೇ ಲಭ್ಯವಾಗುತ್ತಿದೆ. ಈಗ ಅಲ್ಲಿ ಕೋವಿಡ್ ಸಂಕಷ್ಟ ಎದುರಾಗಿರುವ ಕಾರಣ ನೆರವಿನ ಪ್ರಮಾಣ ಬಹಳ ಕಡಿಮೆಯಾಗಿದೆ. ಇದು ಉತ್ತರ ಕೊರಿಯಾ ಜನರನ್ನು ಕಂಗೆಡುವಂತೆ ಮಾಡಿದೆ. ಇನ್ನು ದೇಶದಲ್ಲಿ ಬೆಳೆದ ಆಹಾರ ಉತ್ಪನ್ನಗಳು ಪ್ರತಿಕೂಲ ಹವಾಮಾನದ ಕಾರಣ ನಾಶವಾಗಿದ್ದು, ಸಂಕಷ್ಟವನ್ನು ಇನ್ನಷ್ಟು ಹೆಚ್ಚು ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts