More

    33 ಕೇಂದ್ರಗಳಲ್ಲಿ ಪಿಯು ಪರೀಕ್ಷೆ

    ಶಿವಮೊಗ್ಗ: ದ್ವಿತೀಯ ಪಿಯುಸಿ ಪರೀಕ್ಷೆ ಮಾ.4ರಿಂದ 23ರವರೆಗೆ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ 33 ಪರೀಕ್ಷಾ ಕೇಂದ್ರಗಳಲ್ಲಿ 8,620 ವಿದ್ಯಾರ್ಥಿಗಳು ಹಾಗೂ 11,128 ವಿದ್ಯಾರ್ಥಿನಿಯರು ಸೇರಿ ಒಟ್ಟು 19,748 ಮಂದಿ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.

    ಕಳೆದ ವರ್ಷ 19,187 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಅರ್ಹರಾಗಿದ್ದರು. ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ತುಸು ಏರಿಕೆಯಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿನಿಯರ ಸಂಖ್ಯೆಯೇ ಅಧಿಕವಾಗಿದೆ.

    ಪ್ರಶ್ನೆ ಪತ್ರಿಕೆ ಸೋರಿಕೆ ತಡಗಟ್ಟಲು ಮುಂಜಾಗ್ರತಾ ಕ್ರಮವಗಿ ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಕೊಂಡೊಯ್ಯುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಇದರಿಂದ ವಾಹನ ಸಾಗುವ ಮಾರ್ಗ ಹಾಗೂ ವಾಹನದಲ್ಲಿ ನಡೆಯುವ ಚಟುವಟಿಕೆಯ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

    ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ತಲಾ ಮೂವರನ್ನೊಳಗೊಂಡ 11 ಸಮಿತಿ ರಚಿಸಲಾಗಿದೆ. ಖಜಾನೆಯಿಂದ ಪರೀಕ್ಷಾ ಕೇಂದ್ರದವರೆಗೂ ಯಾವುದೆ ಅಡಚಣೆಯಿಲ್ಲದೆ ವಿಶ್ವಾಸಾರ್ಹತೆಯಿಂದ ಪ್ರಶ್ನೆಪತ್ರಿಕೆ ಕೊಂಡೊಯ್ಯುವುದು ಸಮಿತಿಗಳ ಜವಾಬ್ದಾರಿ.

    ಜಾಗೃತ ದಳಗಳ ರಚನೆ: ಪರೀಕ್ಷಾ ಕೇಂದ್ರದಲ್ಲಿ ನಕಲು ಸೇರಿ ಯಾವುದೆ ಅವ್ಯವಹಾರ ನಡೆಯದಂತೆ ನಿಗಾ ವಹಿಸಲು ತಲಾ ಮೂವರನ್ನೊಳಗೊಂಡ ಜಾಗೃತ ದಳ ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ರಚನೆಯಾಗಿರುವ ಒಂದು ಜಾಗೃತ ದಳಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮುಖ್ಯಸ್ಥರಾಗಿರುತ್ತಾರೆ. ಇದನ್ನು ಹೊರತುಪಡಿಸಿ ಶಿವಮೊಗ್ಗ ತಾಲೂಕಿನಲ್ಲಿ ಮೂರು ಹಾಗೂ ಭದ್ರಾವತಿ ತಾಲೂಕಿಗೆ ಎರಡು ಜಾಗೃತ ದಳಗಳನ್ನು ರಚಿಸಲಾಗಿದೆ. ಉಳಿದ ತಾಲೂಕುಗಳಿಗೆ ತಲಾ ಒಂದೊಂದರಂತೆ ಒಟ್ಟು 11 ತಾಲೂಕು ಮಟ್ಟದ ಜಾಗೃತ ದಳಗಳು ಕಾರ್ಯನಿರ್ವಹಿಸಲಿವೆ. ಪರೀಕ್ಷಾ ಕೇಂದ್ರದೊಳಕ್ಕೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

    ಯಾವ ವಿಭಾಗದಲ್ಲಿ ಎಷ್ಟು

    ಕಲಾ-5807, ವಾಣಿಜ್ಯ-7490, ವಿಜ್ಞಾನ-6451

    ಮೊದಲ ಬಾರಿ ಪರೀಕ್ಷೆಗೆ ಹಾಜರು – 16,941

    ಪುನರಾವರ್ತಿತ ಅಭ್ಯರ್ಥಿಗಳು- 1,744

    ಖಾಸಗಿಯಾಗಿ ನೋಂದಣಿ- 1,063

    ಜಿಲ್ಲೆಯಲ್ಲಿ ಒಟ್ಟು ಕಾಲೇಜುಗಳು: 121

    ಸರ್ಕಾರಿ- 51 (10,911 ವಿದ್ಯಾರ್ಥಿಗಳು)

    ಅನುದಾನಿತ- 22 (2,905 ವಿದ್ಯಾರ್ಥಿಗಳು)

    ಅನುದಾನ ರಹಿತ- 48 (5,758 ವಿದ್ಯಾರ್ಥಿಗಳು)

    ವಿದ್ಯಾರ್ಥಿನಿಯರೇ ಹೆಚ್ಚು: ಪರೀಕ್ಷೆ ಎದುರಿಸುತ್ತಿರುವವರ ಪೈಕಿ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರೀಕ್ಷೆಗೆ ನೋಂದಣಿ ಮಾಡಿಸಿದ 19,748 ಮಂದಿಯಲ್ಲಿ 8,620 ವಿದ್ಯಾರ್ಥಿಗಳು ಹಾಗೂ 11,128 ವಿದ್ಯಾರ್ಥಿನಿಯರಿದ್ದಾರೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲೂ ವಿದ್ಯಾರ್ಥಿನಿಯರೇ ಅಧಿಕ. ಮೊದಲ ಬಾರಿ ಪರೀಕ್ಷೆ ಎದುರಿಸುತ್ತಿರುವವರಲ್ಲೂ ವಿದ್ಯಾರ್ಥಿನಿಯರು, ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆಗೆ ನೋಂದಣಿಯಾದವರಲ್ಲಿ ವಿದ್ಯಾರ್ಥಿಗಳೇ ಹೆಚ್ಚು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts