More

    322ಕ್ಕೇರಿದ ಕರೊನಾ ಸೋಂಕಿತರ ಸಂಖ್ಯೆ

    ಹಾವೇರಿ: ಜಿಲ್ಲೆಯಲ್ಲಿ ಬುಧವಾರ ಕೆಎಸ್​ಆರ್​ಟಿಸಿ ಸಂಸ್ಥೆಯ ಮೂವರು ಚಾಲಕರು, ಗರ್ಭಿಣಿ ಸೇರಿ 14 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. 29 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

    ಜಿಲ್ಲೆಯಲ್ಲಿ ಬುಧವಾರದ 14 ಪ್ರಕರಣಗಳು ಸೇರಿ ಈವರೆಗೆ 322 ಜನರಿಗೆ ಕರೊನಾ ದೃಢಗೊಂಡಿದೆ. ಇಂದಿನ 29 ಜನ ಸೇರಿ ಈವರೆಗೆ 211 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 104 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಹಿರೇಕೆರೂರ ತಾಲೂಕಿನ 4, ರಾಣೆಬೆನ್ನೂರ ತಾಲೂಕಿನ 3, ಹಾವೇರಿ, ಬ್ಯಾಡಗಿ, ಸವಣೂರ ತಾಲೂಕಿನ ತಲಾ ಇಬ್ಬರಿಗೆ ಹಾಗೂ ಹಾನಗಲ್ಲ ತಾಲೂಕಿನ ಒಬ್ಬರಿಗೆ ಬುಧವಾರ ಸೋಂಕು ದೃಢಪಟ್ಟಿದೆ.

    ಕೆಎಸ್​ಆರ್​ಟಿಸಿ ಹೊನ್ನಳ್ಳಿ ಡಿಪೋ ಬಸ್ ಚಾಲಕರಾದ ಹಿರೇಕೆರೂರ ಚೌಡೇಶ್ವರ ನಗರದ 37 ವರ್ಷದ ಪುರುಷ, ರಾಮತೀರ್ಥದ 40 ವರ್ಷದ ಪುರುಷ, ಶಿರಗುಂಬಿ ಗ್ರಾಮದ 30 ವರ್ಷದ ಪುರುಷ ಈ ಮೂವರು ದಾವಣಗೆರೆಯಲ್ಲಿ ಸ್ವ್ಯಾಬ್ ಟೆಸ್ಟ್ ಮಾಡಿಸಿ ಹೊನ್ನಳ್ಳಿಯಿಂದ ಜು. 14ರಂದು ಹಿರೇಕೆರೂರಿಗೆ ಮರಳಿ ಕ್ವಾರಂಟೈನ್ ಆಗಿದ್ದರು. ಅವರನ್ನು ಈಗ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಂಸಭಾವಿಯ ಜನತಾ ಪ್ಲಾಟ್​ನ ನಿವಾಸಿ 48 ವರ್ಷದ ಪುರುಷನಿಗೆ ಐಎಲ್​ಐ ಲಕ್ಷಣದಿಂದ ಸೋಂಕು ದೃಢಪಟ್ಟಿದೆ.

    ಸವಣೂರಿನ ಲಕ್ಸರ್ ಬಜಾರನ 14, 16 ವರ್ಷದ ಬಾಲಕಿ, ಹಾವೇರಿ ತಾಲೂಕು ಕರ್ಜಗಿಯ 19 ವರ್ಷದ ಗರ್ಭಿಣಿ, ಹಾವೇರಿ ಅಶ್ವಿನಿ ನಗರದ 67 ವರ್ಷದ ವೃದ್ಧ, ಬ್ಯಾಡಗಿ ತಾಲೂಕು ಆಣೂರ ಗ್ರಾಮದ 14 ವರ್ಷದ ಬಾಲಕ, 35 ವರ್ಷದ ಮಹಿಳೆ, ಬೆಂಗಳೂರು ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಒಂದು ವಾರದ ಹಿಂದೆ ಕಂಪನಿಯ ಕಾರ್ಯಕ್ಕಾಗಿ ಬೆಂಗಳೂರಿಗೆ ಹೋಗಿ ಬಂದಿದ್ದ ಹಾನಗಲ್ಲ ತಾಲೂಕಿನ ಕೂಡಲ ಗ್ರಾಮದ 23 ವರ್ಷದ ಪುರುಷನಿಗೆ ಬುಧವಾರ ಸೋಂಕು ಖಚಿತವಾಗಿದೆ.

    ರಾಣೆಬೆನ್ನೂರ ನಗರದ ಗೌರಿಶಂಕರ ನಗರದ 53 ವರ್ಷದ ಪುರುಷ, ಮಾರುತಿ ನಗರದ 34 ವರ್ಷದ ಪುರುಷ, ಕಾಕೋಳದ 36 ವರ್ಷದ ಪುರುಷ ಯಾದಗಿರಿಯಿಂದ ಕಾಕೋಳಕ್ಕೆ ಆಗಮಿಸಿದ್ದ. ಇವರೆಲ್ಲರ ಸ್ವ್ಯಾಬ್ ಪರೀಕ್ಷೆಯನ್ನು ಜು. 14ಕ್ಕೆ ನಡೆಸಲಾಗಿತ್ತು. ಅಂದೇ ಪಾಸಿಟಿವ್ ವರದಿ ಬಂದಿದೆ.

    ಕರೊನಾ ಸೋಂಕಿನಿಂದ ಚಿಕಿತ್ಸೆಗೆ ದಾಖಲಾಗಿದ್ದ ಹಾವೇರಿ ತಾಲೂಕಿನ 8, ಸವಣೂರ 7, ಶಿಗ್ಗಾಂವಿ, ರಾಣೆಬೆನ್ನೂರಿನ ತಲಾ 6 ಜನ, ಹಾನಗಲ್ಲನ ಇಬ್ಬರು ಬುಧವಾರ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts