More

    3 ಕೋಟಿ ಸ್ಮಾರ್ಟ್ ಅವ್ಯವಹಾರ ಬೆಳಕಿಗೆ ! ; 260 ಕೋಟಿ ರೂಪಾಯಿ ಠೇವಣಿ ಇಡದೆ ಸಂಸ್ಥೆಗೆ ನಷ್ಟ ಉಂಟುಮಾಡಿದ ಮುಖ್ಯಲೆಕ್ಕಾಕಾರಿ

    ತುಮಕೂರು : ಸ್ಮಾರ್ಟ್‌ಸಿಟಿಯಲ್ಲಿ ನಡೆದಿರುವ ಬಹುದೊಡ್ಡ ಹಗರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ರಾಜ್ಯದ ಸ್ಮಾರ್ಟ್‌ಸಿಟಿ ಯೋಜನೆಯ ನೋಡಲ್ ಏಜೆನ್ಸಿಯಾದ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದ (ಕೆಯುಐಡಿಎ್ಸಿ) ಲೆಕ್ಕ ಪರಿಶೋಧನಾ ತನಿಖಾ ತಂಡವೇ ‘ತುಮಕೂರು ಸ್ಮಾರ್ಟ್ ಸಿಟಿ’ಯಲ್ಲಿ ಸುಮಾರು 3 ಕೋಟಿ ರೂ., ಅವ್ಯವಹಾರ ನಡೆದಿರುವುದನ್ನು ಪತ್ತೆ ಹಚ್ಚಿದೆ.

    2018ರಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ 260 ಕೋಟಿ ರೂ., ಅನುದಾನವನ್ನು ದೀರ್ಘಕಾಲಿನ ್ಲೆಕ್ಸಿ ಠೇವಣಿಯಲ್ಲಿಡದೆ ಲೆಕ್ಕ ಶಾಖೆಯ ಮುಖ್ಯಸ್ಥ ಕೆ.ಎ.ಶ್ರೀನಿವಾಸ್ ಎಂಬುವವರು ಉಳಿತಾಯ ಖಾತೆಯಲ್ಲೇ ಉಳಿಸಿಕೊಂಡಿದ್ದು, ಸಂಸ್ಥೆಗೆ ಅಂದಾಜು 3 ಕೋಟಿ ರೂ. ಬಡ್ಡಿ ನಷ್ಟವಾಗಿತ್ತು. ಮೇಲ್ನೋಟಕ್ಕೆ ಅವ್ಯವಹಾರ ಕಂಡು ಬರುತ್ತಿದ್ದಂತೆ ಅಂದಿನ ಸ್ಮಾರ್ಟ್‌ಸಿಟಿ ಅಧ್ಯಕ್ಷರಾಗಿದ್ದ ಡಾ.ಶಾಲಿನಿರಜನೀಶ್ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ಶ್ರೀನಿವಾಸ್ ವಿರುದ್ಧ ಕ್ರಮಕ್ಕೆ ಕೋರಿದ್ದರು.

    ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ಸಹಾಯಕ ನಿಯಂತ್ರಕರಾಗಿದ್ದ ಕೆ.ಎ.ಶ್ರೀನಿವಾಸ್ 2017ರಲ್ಲಿ ಸ್ಮಾರ್ಟ್‌ಸಿಟಿ ಕಚೇರಿ ಕಾರ್ಯಾರಂಭ ಆಗುತ್ತಿದ್ದಂತೆ ಹಿರಿಯ ಲೆಕ್ಕ ಪತ್ರ ವ್ಯವಸ್ಥಾಪಕ ಹುದ್ದೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಬಳಿಕ ತೆರವಾದ ಮುಖ್ಯ ಲೆಕ್ಕಾಕಾರಿ ಹುದ್ದೆಯನ್ನು ಹೆಚ್ಚುವರಿ ಪ್ರಭಾರವನ್ನಾಗಿ ಪಡೆದರು. ಈ ಸಂದರ್ಭದಲ್ಲಿ ಅನುದಾನವನ್ನು ಖಾತೆಯಲ್ಲೇ ಉಳಿಸಿಕೊಂಡು ತಮ್ಮಿಚ್ಛೆಯಂತೆ ಬಳಸಿಕೊಂಡು ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ.

    2 ವರ್ಷಗಳ ಬಳಿಕ ಕಂಟಕ: ಶಾಲಿನಿರಜನೀಶ್ ಅವರು ಬರೆದಿದ್ದ ಪತ್ರ ಪ್ರಧಾನ ಕಾರ್ಯದರ್ಶಿಗಳಿಗೆ ಸಿಗದಂತೆ 2 ವರ್ಷಗಳಿಂದ ಪ್ರಭಾವ ಬಳಸಿ ಮುಚ್ಚಿಹಾಕಿದ್ದ ಶ್ರೀನಿವಾಸ್‌ಗೆ ಈಗ ಕಂಟಕ ಎದುರಾಗಿದೆ. ಕೆಯುಐಡಿಎ್ಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಡಿಸೆಂಬರ್ 2020ರಲ್ಲಿ ಐಎಎಸ್ ಅಕಾರಿ ಎಂಟಿ ರೇಜು ಅಕಾರವಹಿಸಿಕೊಂಡ ಬಳಿಕ ಅವ್ಯವಹಾರ ಕಡತಕ್ಕೆ ಜೀವಬಂದಿದೆ.

    ಶಾಲಿನಿರಜನೀಶ್ ಬರೆದಿದ್ದ ಪತ್ರ ಇಟ್ಟುಕೊಂಡು ಆನಂತರ ಸ್ಮಾರ್ಟ್‌ಸಿಟಿ ಎಂಡಿ, ಸಿಇಒ ಆಗಿದ್ದ ಟಿ.ಭೂಬಾಲನ್ ಬರೆದಿದ್ದ ಪತ್ರಗಳನ್ನು ಆಧರಿಸಿ ಹಣ ದುರ್ಬಳಕೆ ನಡೆದಿರುವ ಬಗ್ಗೆ ತನಿಖೆಗಾಗಿ, ಲೆಕ್ಕಪರಿಶೋಧನಾ ಸಮಿತಿ ತಂಡವನ್ನು ನೇಮಿಸಿದ್ದ ಕೆಯುಐಡಿಎ್ಸಿ ಎಂಡಿ ರೇಜು ಅವರು ಸಮಿತಿ ನೀಡಿರುವ ವರದಿ ಹಿನ್ನೆಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಹಾಲಿ ಎಂಡಿ ಬಿ.ಟಿ.ರಂಗಸ್ವಾಮಿಗೆ ಪತ್ರ ಬರೆದು 3 ಕೋಟಿ ರೂ., ಹಗರಣದ ಸಮಗ್ರ ವಿವರಣೆ ನೀಡುವಂತೆ ಆದೇಶ ನೀಡಿರುವುದು ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಬೆಳಕಿಗೆ ಬಾರದೆ ಮುಚ್ಚೆ ಹೋಗುತ್ತಿದ್ದ ಅವ್ಯವಹಾರಕ್ಕೆ ಯಾರ ತಲೆದಂಡವಾಗಲಿದೆಯೋ ಕಾದುನೋಡಬೇಕಿದೆ.

    ನೋಟಿಸ್ ಕೊಟ್ಟು ಜಾರಿಕೊಂಡ ಎಂಡಿ : ಅವ್ಯವಹಾರದ ಬಗ್ಗೆ ಸಮಗ್ರ ವಿವರಣೆ ಕೋರಿದ ಪತ್ರ ಕೈಸೇರುತ್ತಿದ್ದಂತೆ ಸ್ಮಾರ್ಟ್‌ಸಿಟಿ ಎಂಡಿ ಬಿ.ಟಿ.ರಂಗಸ್ವಾಮಿ ಅವರು ಶ್ರೀನಿವಾಸ್‌ಗೆ ಸಮಜಾಯಿಸಿ ಕೊಡುವಂತೆ ನೋಟಿಸ್ ನೀಡಿ ಜಾರಿಕೊಂಡಿದ್ದಾರೆ. ಇದೀಗ ನಗರಾಭಿವೃದ್ಧಿ ಇಲಾಖೆಗೆ ಎಡತಾಕುತ್ತಿರುವ ಶ್ರೀನಿವಾಸ್ ಹಗರಣವನ್ನು ಮೇಲ್ಮಟ್ಟದಲ್ಲೇ ಮುಚ್ಚಿಹಾಕುವ ಪ್ರಯತ್ನ ನಡೆಸಿರುವುದು ರಹಸ್ಯವಾಗೇನೂ ಉಳಿದಿಲ್ಲ.

    ಸ್ಪೆಷಲ್ ಪರ್ಪಸ್ ವೆಹಿಕಲ್ : 2013ರ ಕಂಪನಿ ಕಾಯ್ದೆಯಂತೆ ಸ್ಮಾರ್ಟ್‌ಸಿಟಿ ಯೋಜನೆ ಜಾರಿಗಾಗಿ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್‌ಪಿವಿ) ರಚಿಸಿದ್ದು ಇದರ ಉಸ್ತುವಾರಿಯನ್ನು ಸಿಇಒ ನೇಮಿಸಲಾಗಿತ್ತು. ಯೋಜನೆಗೆ ಹಣ ಬಿಡುಗಡೆ, ಅನುಷ್ಠಾನ, ನಿರ್ವಹಣೆ, ಮೇಲ್ವಿಚಾರಣೆ ಹಾಗೂ ವೌಲ್ಯಮಾಪನದ ಜವಾಬ್ದಾರಿ ಎಲ್ಲವನ್ನು ಎಸ್‌ಪಿವಿ ನೋಡಿಕೊಳ್ಳುತ್ತಿದ್ದು ಎಲ್ಲವೂ ಪಾರದರ್ಶಕವಾಗಿಯೇ ನಡೆಯುತ್ತಿತ್ತು. ಐಎಎಸ್ ಅಕಾರಿಗಳ ಬದಲು ಸ್ಮಾರ್ಟ್‌ಸಿಟಿ ಸಿಇಒ, ಎಂಡಿ ಆಗಿ ದೂರದೃಷ್ಟಿ ಇಲ್ಲದ ಬೇರೆ, ಬೇರೆ ಇಲಾಖೆ ಅಕಾರಿಗಳನ್ನು ನೇಮಿಸಿಕೊಂಡಿದ್ದು ಯೋಜನೆ ಹಳಿತಪ್ಪುವಂತಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts