More

    ಶಿವಮೊಗ್ಗದ 18 ವಲಯಗಳಲ್ಲಿ 24X7 ನೀರು

    ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗವು ನಗರದಲ್ಲಿ 24X7 ನಿರಂತರ ನೀರು ವಿತರಣೆ ನಗರದ 18 ವಲಯಗಳಲ್ಲಿ ಚಾಲನೆಗೊಂಡಿದೆ. ಹೊಸದಾಗಿ ನಿರ್ಮಾಣವಾಗುವ ಮನೆ ಮತ್ತು ವಾಣಿಜ್ಯ ಕಟ್ಟಡಗಳಿಗೆ 24X7 ಯೋಜನೆಯಡಿ ನೀರಿನ ಸಂಪರ್ಕ ಕಲ್ಪಿಸಲು ತಗಲುವ ವೆಚ್ಚವನ್ನು ನೀರಿನ ಸಂಪರ್ಕ ಪಡೆಯುವ ಗ್ರಾಹಕರೇ ನೇರವಾಗಿ ಕಚೇರಿಗೆ ಪಾವತಿಸಿದ ಬಳಿಕ ಗುತ್ತಿಗೆದಾರರಿಂದ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.

    ಎಲ್ಲೆಲ್ಲಿ?: ಗೋಪಾಳ, ಸ್ವಾಮಿ ವಿವೇಕಾನಂದ ಬಡಾವಣೆ, ಆರ್‌ಎಂಎಲ್ ನಗರ, ಬಿ.ಬಿ.ಸ್ಟ್ರೀಟ್, ಮಲ್ಲೇಶ್ವರ ನಗರ, ಅಪ್ಪಾಜಿರಾವ್ ಕಾಂಪೌಂಡ್, ಪಾಲಿಕೆ ಟ್ಯಾಂಕ್, ಉರ್ದು ಶಾಲೆ ಟ್ಯಾಂಕ್, ಎನ್.ಟಿ.ರಸ್ತೆ, ಪಿಡಬ್ಲುೃಡಿ ಟ್ಯಾಂಕ್, ವಿನೋಬನಗರ ಶಿವಾಲಯ ಟ್ಯಾಂಕ್, ಸ್ಟೇಡಿಯಂ ಟ್ಯಾಂಕ್, ರವೀಂದ್ರನಗರ ಟ್ಯಾಂಕ್, ಊರಗಡೂರು ಟ್ಯಾಂಕ್, ಬಿಎಸ್‌ಎನ್‌ಎಲ್ ಟ್ಯಾಂಕ್, ಗಾಡಿಕೊಪ್ಪ ಟ್ಯಾಂಕ್, ಹರಿಗೆ ಟ್ಯಾಂಕ್, ಶರಾವತಿ ನಗರ ಎ ಬ್ಲಾಕ್ ಹೊಸ ಟ್ಯಾಂಕ್ ಮತ್ತು ಆರ್‌ಎಂಎಲ್ ನಗರ ಹೊಸ ಬ್ಯಾಂಕ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts