More

    ಗಾಜಾ ಮೇಲೆ ಇಸ್ರೇಲ್​ ಬರ್ಬರ ದಾಳಿ; 240 ಮಂದಿ ಮೃತ್ಯು

    ವದೆಹಲಿ: ಹಮಾಸ್​ ಉಗ್ರರನ್ನು ಗುರುಯಾಗಿಸಿಕೊಂಡು ಇಸ್ರೇಲ್​ ತನ್ನ ಬರ್ಬರ ದಾಳಿಯನ್ನು ಶನಿವಾರವೂ ಮುಂದುವರೆಸಿದ್ದು, 240 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರಾಕೆಟ್​ ಹಾಗೂ ಬಾಂಬ್​ ದಾಳಿಯಿಂದಾಗಿ ಇಡೀ ಗಾಜಾ ನಗರವೇ ದಟ್ಟ ಹೊಗೆಯಿಂದ ಆವರಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    ಇತ್ತ ಇಸ್ರೇಲ್​ ದಾಳಿ ಶುರುವಾಗುತ್ತಿದ್ದಂತೆ ಹಮಾಸ್​ ತನ್ನ ಸೇನಾ ಪಡೆಗಳಿಗೆ ಯುದ್ದ ಆರಂಭಿಸುವಂತೆ ಕರೆ ಕೊಟ್ಟಿದ್ದು, ಗಾಜಾಪಟ್ಟಿ ಕಾಪಾಡಿ ಎಂದು ಸಂದೇಶ ರವಾನಿಸಿದೆ.

    ಕದನ ವಿರಮ ಅಂತ್ಯಗೊಂಡ ಬಳಿಕ ಇಸ್ರೇಲ್​ ಹಮಾಸ್​ನಲ್ಲಿರುವ 400ಕ್ಕೂ ಅಧಿಕ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಭೂ, ವಾಯು ಹಾಗೂ ನೌಕಾ ಪಡೆ ಈ ದಾಳಿಯಲ್ಲಿ ಭಾಗಿಯಾಗಿದ್ದವು. ಇಸ್ರೇಲ್​ ಯುದ್ದ ವಿಮಾನಗಳು ಖಾನ್​ ಯೂನಿಸ್​ ನಗರದಲ್ಲಿರುವ 50ಕ್ಕೂ ಅಧಿಕ ನೆಲೆಗಳನ್ನು ನಾಶಪಡಿಸಿದೆ ಎಂದು ತಿಳಿದು ಬಂದಿದೆ.

    gaza

    ಇದನ್ನೂ ಓದಿ: ಗುರು ರಾಘವೇಂದ್ರ ಸಹಕಾರ ಬಬ್ಯಾಂಕ್​ ಅವ್ಯವಹಾರ; ಪ್ರಕರಣವನ್ನು ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರ

    ಇಸ್ರೇಲ್​ ಹಾಗೂ ಹಮಾಸ್​ ನಡುವೆ ವಾರಗಳ ಕಾಲ ಅಸ್ತಿತ್ವದಲ್ಲಿದ್ದ ಕದಮ ವಿರಾಮ ಸಮಯದಲ್ಲಿ 80ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಮಾಸ್​ ಬಂಡುಕೋರರು ಬಿಡುಗಡೆ ಮಾಡಿದ್ದರ, ಇಸ್ರೇಲ್​ 240ಕ್ಕೂ ಪ್ಯಾಲಸ್ಟೇನಿಯರನ್ನು ಬಿಡುಗಡೆ ಮಾಡಿತ್ತು. ಕದಮ ವಿರಾಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಇಸ್ರೇಲ್​ ಹಾಗೂ ಹಮಾಸ್​ ಶುಕ್ರವಾರದಿಂದ ಯುದ್ದ ಆರಂಭಿಸಿವೆ.

    ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ 5000 ರಾಕೆಟ್​ಗಳಿಂದ ದಾಳಿ ನಡೆಸಿ 1,500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಬಳಿಕ ಇಸ್ರೇಲ್ ನಡೆಸಿದ ಪ್ರತಿದಾಳೀಯಲ್ಲಿ ಗಾಜಾದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts