More

    ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ 2,12,266 ಚೀಲಗಳು ಆವಕ

    ಬ್ಯಾಡಗಿ: ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ 2,12,266 ಚೀಲಗಳ ಆವಕದಿಂದ ವ್ಯಾಪಾರದಲ್ಲಿ ಏರಿಕೆ ಕಂಡಿದೆ.

    ಕಳೆದ ಮೂರು ವಾರಗಳಿಂದ ಲಕ್ಷ ಚೀಲಗಳ ಆವಕ ದಾಟಿದ ಕಾರಣ ಮೆಣಸಿನಕಾಯಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಡಬ್ಬಿ ತಳಿ ಮಾತ್ರ ಕ್ವಿಂಟಾಲ್​ಗೆ 60 ಸಾವಿರ ರೂ. ದಾಟಿರುವುದು ರೈತರಲ್ಲಿ ಖುಷಿ ಮೂಡಿಸಿದೆ. ಗುಣಮಟ್ಟದ ಮೆಣಸಿನಕಾಯಿಗೆ ಹೆಚ್ಚು ದರ ಸಿಗುವ ಉದ್ದೇಶದಿಂದ ಮಾರುಕಟ್ಟೆಗೆ ಬಳ್ಳಾರಿ, ಆಂಧ್ರಪ್ರದೇಶದಿಂದಲೂ ಮೆಣಸಿನಕಾಯಿ ತರುತ್ತಿದ್ದು, ಹಿಂದಿನ ವರ್ಷದ ಗುರಿ ತಲುಪುವ ನಿರೀಕ್ಷೆಯಿದೆ.

    ಸೋಮವಾರದ ದರ: ಮೆಣಸಿನಕಾಯಿ ಕಡ್ಡಿ ತಳಿ-1209ರಿಂದ 25510 ರೂ., ಡಬ್ಬಿ ತಳಿ-1985ರಿಂದ 60111 ರೂ., ಗುಂಟೂರು ತಳಿ- 700 ರಿಂದ 10209 ರೂ. ದರದಲ್ಲಿ ಮಾರಾಟವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts