More

    ಶೀಘ್ರವೇ ಫೋರ್ಸ್​ ಗುರ್ಖಾ ಬಿಎಸ್​6 ಮಾರುಕಟ್ಟೆಗೆ..

    ಮುಂಬೈ: ಮಹಿಂದ್ರಾದವರ ಹೊಸ ಥಾರ್​ಗೆ ಪೈಪೋಟಿ ನೀಡುವುದಕ್ಕೆ ಫೋರ್ಸ್ ಮೋಟಾರ್ಸ್ ನವರ ಗುರ್ಖಾ ಬಿಎಸ್​ 6 ಮಾರುಕಟ್ಟೆಗೆ ಶೀಘ್ರವೇ ಲಗ್ಗೆ ಇಡಲಿದೆ. ಫೋರ್ಸ್ ಮೋಟಾರ್ಸ್ ಹೊಸ ಗುರ್ಖಾ ಬಿಎಸ್ 6 ಮಾಡೆಲ್​ನ ಫೋಟೋವನ್ನು ತನ್ನ ಫೇಸ್​ಬುಕ್ ಪುಟದಲ್ಲಿ ಪ್ರಕಟಿಸಿದ್ದು, ಕಮ್ಮಿಂಗ್ ಸೂನ್ ಎಂದು ಘೋಷಿಸಿದೆ.

    ಮಹಿಂದ್ರಾ ಈಗಾಗಲೇ ಥಾರ್ ಎಸ್​ಯುವಿಯನ್ನು ಜಗತ್ತಿಗೆ ಪರಿಚಯಿಸಿದ್ದು, ಅಕ್ಟೋಬರ್ 2ರಂದು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ​ಆದ್ರೆ ಫೋರ್ಸ್​ ಗುರ್ಖಾದ ಮೊದಲ ಇಮೇಜ್​ ಮಾತ್ರವೇ ಬಿಡುಗಡೆಯಾಗಿದೆ. ಅದರ ಇಂಟೀರಿಯರ್ಸ್​ ಮತ್ತು ಇತರೆ ಪೂರ್ಣ ವಿವರಗಳನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

    ಇದನ್ನೂ ಓದಿ: ಲೆಕ್ಕ ಕೊಡ್ದೇ ಇರೋ ದುಡ್ಡು ನಿಮ್ಮ ಅಕೌಂಟ್​ನಲ್ಲಿದ್ಯಾ? ಹಾಗಾದ್ರೆ ಅದ್ರಲ್ಲಿ ನಿಮ್ ಪಾಲು 17% ಮಾತ್ರ!

    ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಹಿಂದಿನ ಎಕ್ಸ್​ಪೋ ಸ್ಪೆಕ್ ವರ್ಷನ್​ನಲ್ಲಿ ನೀಡಲಾಗಿದ್ದ ಅದನ್ನೇ ಹೋಲುವ ವಿನ್ಯಾಸ ಮತ್ತು ಸ್ಟೈಲಿಂಗ್ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಬಿಎಸ್​ 6 ಮಾದರಿಯ ಇದರಲ್ಲಿ 2.6 ಲೀಟರ್ ಡೀಸೆಲ್​ ಎಂಜಿನ್ ಇರಲಿದ್ದು, ಗರಿಷ್ಠ 89 ಬಿಎಚ್​ಪಿ ಶಕ್ತಿ ಹೊಂದಿದೆ. 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಈ ವಾಹನ 4×4 ಸಿಸ್ಟಂನಲ್ಲಿ ಗಮನಸೆಳೆಯಲಿದೆ. ಸಾಹಸಿ ಚಾಲಕರನ್ನು ಫೋರ್ಸ್ ಗುರ್ಖಾ ಸೆಳೆದರೆ, ಮಹಿಂದ್ರಾ ಥಾರ್​ಗೂ ಅದರದ್ದೇ ಆದ ಫಾಲೋಯರ್ಸ್ ಇದ್ದಾರೆ. ಈ ಎರಡು ವಾಹನಗಳು 2020ರಲ್ಲಿ ಸದ್ಯ ನಿರೀಕ್ಷೆ ಹುಟ್ಟಿಸಿವೆ. (ಏಜೆನ್ಸೀಸ್)

    VIDEO|ಥಾರ್ ಹೊಸ ಅವತಾರ:​ ಅಕ್ಟೋಬರ್ 2ರಂದು ಮಾರುಕಟ್ಟೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts