More

    200-300 % ಸರ್ಕಾರ

    ಕಲಬುರಗಿ: ಕರೊನಾ ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಮಾಡೆಲ್ ಅಂತಿದ್ರೂ, ಈಗ ನೋಡಿ, ಇನ್ನೂರು, ಮುನ್ನೂರು ಪಸೆಂ ಟ್ ಸಕರ್ಾರ ಬಿಜೆಪಿ ನಡೆಯುತ್ತಿದೆ. ಕರೊನಾ ಪೀಡಿತರು ನರಕಯಾತನೆ ಅನುಭವಿಸುತ್ತಿದ್ದರೆ, ಬಿಜೆಪಿಯವರು ಹಣ ಲೂಟಿ ಮಾಡಿ ಹಬ್ಬ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಾಗ್ದಾಳಿ ನಡೆಸಿದರು.
    ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮಂಗಳವಾರ ಕಲಬುರಗಿಗೆ ಆಗಮಿಸಿದ್ದ ಅವರಿಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಕಾರ್ಯಕರ್ತರಿಂದ ನೀಡಿದ ಗೌರವ ಸ್ವೀಕರಿಸಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಕರ್ಾರವನ್ನು ಹತ್ತು ಪರ್ಸೆಂಟ್ ಸರ್ಕಾರ ಎಂದು ಕರೆದಿದ್ದರು. ಮೋದಿಯವರೇ ಈಗ ಎಷ್ಟು ಪರ್ಸೆಂಟ್​ ಸರ್ಕಾರ ಇದೆ ಗೊತ್ತಾ ಎಂದು ಪ್ರಶ್ನಿಸಿದರು.
    ರಾಜ್ಯದಲ್ಲಿ ಕರೊನಾ ಹೆಸರಲ್ಲಿ 4,500 ಕೋಟಿ ಖರ್ಚು ಮಾಡಲಾಗಿದೆ. ಅದರಲ್ಲಿ ಅರ್ಧದಷ್ಟು ಹಣ ಲೂಟಿ ಹೊಡೆಯುವ ಕೆಲಸ ಮಾಡಿದ್ದಾರೆ. ಸ್ಯಾನಿಟೈಸರ್ 650 ರೂ.ಗೆ ಲೀಟರ್ ಖರೀದಿಸಲು, 800 ರೂ.ಗೆ ಬೆಡ್ ಬಾಡಿಗೆ ಪಡೆಯಲು, ಬೆಂಗಳೂರಿನ ಪ್ರದರ್ಶನ ಕೇಂದ್ರದಲ್ಲಿ 10500 ಹಾಸಿಗೆಗಳ ಕೋವಿಡ್ ಸೆಂಟರ್ ಎಂದು ಹೇಳಿದ್ದು, ಅಧಿಕಾರಿಗಳು 6500 ಬೆಡ್ಗಳದ್ದು ಅಂತಾರೆ, ಹೀಗೆ ಕರೊನಾ ಸೋಂಕಿತರ ಹೆಸರಿನಲ್ಲಿ ಹಣ ಲೂಟಿ ಮಾಡಲು ನಿಮಗೆ ಸಹಕಾರ ನೀಡಬೇಕೆನ್ರಿ ಎಂದು ಡಿಕೆಶಿ ಗುಡುಗಿದರು.
    ಕರೊನಾ ನಿಯಂತ್ರಿಸಲು ಪ್ರಧಾನಿ 21 ದಿನ ಕೊಡಿ ಸಾಕು. ಆದರೆ, 120 ದಿನಗಳಾದರೂ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದು ಶಿವಕುಮಾರ ಹೇಳಿದರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಸ್ವಾಗತಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ.ಅಜಯಸಿಂಗ್ ಮಾತನಾಡಿದರು. ಇದಕ್ಕೂ ಮುನ್ನ ದೇವಲಗಾಣಗಾಪುರಕ್ಕೆ ಭೇಟಿ ನೀಡಿ ದತ್ತನ ದರ್ಶನ ಪಡೆದರು. ಅಲ್ಲದೆ ಕಲಬುರಗಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಭೆ ನಡೆಸಿದರು. ನಂತರ ಮಹಾದಾಸೋಹಿ ಶರಣಬಸವೇಶ್ವರ ದೇವಾಲಯಕ್ಕೆ, ಕೆಬಿಎನ್ ದರ್ಗಾಕ್ಕೆ ಭೇಟಿ ನೀಡಿದರು. ಅಲ್ಲದೆ ಹೈಕ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದರು.
    ಭಾಗಿಯಾದವರ
    ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶಾಸಕರಾದ ಕನ್ನಿಜ್ ಫಾತಿಮಾ ಇಸ್ಲಾಂ, ಶರಣಪ್ಪ ಮಟ್ಟೂರ, ಎಂ.ವೈ.ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಶಾಸಕರಾದ ಅಲ್ಲಂಪ್ರಭು ಪಾಟೀಲ್, ಬಿ.ಆರ್.ಪಾಟೀಲ್, ಯುವ ಕಾಂಗ್ರೆಸ್ ರಾಜ್ಯ ವಕ್ತಾರ ಚೇತನಕುಮಾರ ಗೋನಾಯಕ, ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್, ಜಿಪಂ ಸದಸ್ಯರಾದ ಶಿವಾನಂದ ಪಾಟೀಲ್, ಅರುಣಕುಮಾರ ಎಂ.ವೈ.ಪಾಟೀಲ್, ಸಂತೋಷ ಪಾಟೀಲ್ ದಣ್ಣೂರ, ಸಿದ್ದರಾಮ ಪ್ಯಾಟಿ, ಪ್ರಮುಖರಾದ ಸುಭಾಷ ರಾಠೋಡ, ವಿಜಯಕುಮಾರ ಜಿ.ರಾಮಕೃಷ್ಣ, ಜಗನ್ನಾಥ ಗೋಧಿ, ಸಂತೋಷ ಬಿಲಗುಂದಿ, ಶರಣಕುಮಾರ ಮೋದಿ, ಲತಾ ರವಿ ರಾಠೋಡ,ಡಾ.ಕಿರಣ ದೇಶಮುಖ, ಭೀಮರಡ್ಡಿ ಪಾಟೀಲ್ ಕುರಕುಂದಾ, ರಾಜೇಂದ್ರ ಪಾಟೀಲ್ ರೇವೂರ, ವೀರಣ್ಣಗೌಡ ಪರಸರಡ್ಡಿ ನಾಲವಾರ, ಶರಣು ಪಪ್ಪಾ, ಜೆ.ಎಂ.ಕೊರಬು, ಸಂತೋಷ ಪಾಟೀಲ್ ದುಧನಿ, ಬಾಬು ಒಂಟಿ, ಮಲ್ಲಿಕಾಜರ್ುನ ಹಲಕರ್ಟಿ , ಮಲ್ಹಾರಾವ ಕುಲಕರ್ಣಿ , ದೀಪಕನಾಗ ಪುಣ್ಯಶೆಟ್ಟಿ, ಅನೇಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts