More

    ಅಮೆರಿಕಾದಲ್ಲಿ ಹಮಾಸ್​ ವಿರುದ್ಧ ಮೊಳಗಿದ ಕಹಳೆ: 3 ಮಿಲಿಯನ್ ಜನ ಭಾಗಿ – ಇತಿಹಾಸ ಸೃಷ್ಟಿಸಿದ ಇಸ್ರೇಲ್​ ಪರ ರ‍್ಯಾಲಿ 

    ವಾಷಿಂಗ್ಟನ್: ಅಮೆರಿಕಾ ಇತಿಹಾಸದಲ್ಲಿಯೇ ಇಸ್ರೇಲ್ ಪರವಾದ ಅತಿ ದೊಡ್ಡ ರ‍್ಯಾಲಿ ಮಂಗಳವಾರ ನಡೆಯಿತು. ಯುಎಸ್​ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಬಿಗಿ ಭದ್ರತೆ ನಡುವೆ ನಡೆದ ಈ ರ‍್ಯಾಲಿಯಲ್ಲಿ 3 ಮಿಲಿಯನ್ ಜನರು ಭಾಗವಹಿಸಿದ್ದರು.

    ಇದನ್ನೂ ಓದಿ: ದೋಡಾ ಬಸ್ ಅಪಘಾತ: ಮೃತರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
    ಅಕ್ಟೋಬರ್ 7 ರ.ದು ಹಮಾಸ್​ ಉಗ್ರರು ದಾಳಿ ನಡೆಸಿದ ಸಂದರ್ಭ ವಿದೇಶಿಯರೂ ಸೇರಿದಂತೆ ಇಸ್ರೇಲ್​ನ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದ್ದು, ಕೂಡಲೇ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. “ನೆವರ್ ಎಗೇನ್” ಎಂಬ ಘೋಷಣೆ ಕೂಗಿ ಉಗ್ರರಿಗೆ ಎಚ್ಚರಿಕೆ ನೀಡಲಾಯಿತು.

    ಸ್ಥಳೀಯ ಯಹೂದಿ ಒಕ್ಕೂಟಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಇಸ್ರೇಲಿ ವಲಸಿಗ ಗುಂಪುಗಳು ಮತ್ತು ಯಹೂದಿ ಸಮುದಾಯ ಕೇಂದ್ರಗಳು ರ‍್ಯಾಲಿ ಆಯೋಜಿಸಿದ್ದವು. ಅಮೆರಿಕನ್ನರು ಬೃಹತ್​ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

    ಹಮಾಸ್ ದಾಳಿ ನಂತರ ಇಸ್ರೇಲ್ ಸಮರ ಸಾರಿದೆ. ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಯುದ್ಧ ನಡೆಯುತ್ತಿದ್ದು, 11,000 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದು, 2,700 ಮಂದಿ ನಾಪತ್ತೆಯಾಗಿದ್ದಾರೆ. ಏತನ್ಮಧ್ಯೆ, ಇಸ್ರೇಲ್‌ನಲ್ಲಿ 1,200 ಜನರು ಸಾವನ್ನಪ್ಪಿದ್ದಾರೆ. 240 ಜನರನ್ನು ಹಮಾಸ್​ ಉಗ್ರರು ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಗಳು ಒತ್ತೆಯಾಳುಗಳನ್ನು ರಕ್ಷಿಸಲು ಶ್ರಮಿಸುತ್ತಿವೆ. ಹೀಗಾಗಿ ಗಾಜಾಕ್ಕೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ರ‍್ಯಾಲಿ ನಡೆಸಿದರು.

    ಇಸ್ರೇಲ್​ ಅಧ್ಯಕ್ಷ ಐಸಾಕ್ ಹೆರ್ಜೋಗ್ ಲೈವ್ ವಿಡಿಯೋ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡುವಾಗ, “ಹಮಾಸ್‌ನಿಂದ ಒತ್ತೆಯಾಳಾಗಿರುವ ಮಕ್ಕಳು, ಹುಡುಗರು, ಹುಡುಗಿಯರು, ಪುರುಷರು ಮತ್ತು ಮಹಿಳೆಯರ ಬಿಡುಗಡೆಗೆ ಒತ್ತಾಯಿಸಿ ಲಕ್ಷಾಂತರ ಮಂದಿ ಒಟ್ಟುಗೂಡಿದ್ದೀರಿ. ಪ್ರಪಂಚದಾದ್ಯಂತ ಹೆಮ್ಮೆ ಮತ್ತು ಸುರಕ್ಷತೆಯಿಂದ ಬದುಕುವ ಹಕ್ಕು ಪ್ರತಿಯೊಬ್ಬರಿಗೆ ಇದೆ. ಅದೇ ರೀತಿ ಯಹೂದಿಗಳಿಗೂ ಇದೆ ಎಂದು ಹೇಳಿದರು.

    ಯಹೂದಿ ವಿರೋಧಿ ಪ್ರವೃತ್ತಿ ನಿಲ್ಲಬೇಕು, ಒತ್ತೆಯಾಳುಗಳ ಬಿಡುಗಡೆ ಕೂಡಲೇ ಆಗಬೇಕು ಎಂದು ಪ್ರತಿಭಟನಾಕಾರರು ಮುಗಿಲು ಮುಟ್ಟುವಂತೆ ಘೋಷಣೆಗಳನ್ನು ಕೂಗಿದರು.

    ಹರ್ಭಜನ್ ಸಿಂಗ್ ಇಸ್ಲಾಂ ಸೇರಲು ತಯಾರಾಗಿದ್ದರೆಂದ ಪಾಕ್​​ ಮಾಜಿ ನಾಯಕ; ನಾನು ಹೆಮ್ಮೆಯ ಭಾರತೀಯನೆಂದ ಎಂದ ಭಜ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts