More

    ಚುನಾವಣಾ ಅಕ್ರಮ; 2.76 ಕೋಟಿ ರೂ.ಮೌಲ್ಯದ ವಸ್ತು ಜಪ್ತಿ: ತುಷಾರ್​ ಗಿರಿನಾಥ್​

    ಬೆಂಗಳೂರು: ಮತದಾರರಿಗೆ ಹಂಚಲು ತಂದಿದ್ದ 2.76 ಕೋಟಿ ರೂ.ಮೌಲ್ಯದ ವಿವಿಧ ವಸ್ತುಗಳನ್ನು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಬಿಬಿಎಂಪಿ ಸೆಂಟ್ರಲ್‌ನಲ್ಲಿ 36 ಲಕ್ಷ ರೂ., ಉತ್ತರದಲ್ಲಿ 67 ಲಕ್ಷ ರೂ., ದಕ್ಷಿಣದಲ್ಲಿ 43 ಲಕ್ಷ ರೂ. ಹಾಗೂ ಬೆಂಗಳೂರು ನಗರದಲ್ಲಿ 1.28 ಕೋಟಿ ರೂ.ಸೇರಿ ಒಟ್ಟು 2.76 ಕೋಟಿ ರೂ.ಮೌಲ್ಯದ ಹೊಲಿಗೆ ಯಂತ್ರ, ಸೀರೆ, ವಾಹನ, ಶಾಲು, ಲೋಹ, ಕುಕ್ಕರ್, ನೋಟ್‌ಬುಕ್, ಬಾಕ್ಸ್, ಬಕೆಟ್, ತವಾ, ಪಕ್ಷದ ಧ್ವಜ, ಸ್ಟಿಕರ್, ಟೋಪಿ, ಚಿನ್ನ, ಬೆಳ್ಳಿ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

    ಇದನ್ನೂ ಓದಿ: ಕರ್ನಾಟಕ ಚುನಾವಣೆ-2023: ಚುನಾವಣಾಪೂರ್ವ ಸಮೀಕ್ಷೆಗಳು ಪ್ರಕಟ; ಯಾರಿಗೆ ಎಷ್ಟು? ಇಲ್ಲಿದೆ ಪೂರ್ತಿ ವಿವರ.

    172 ಕಣ್ಗಾವಲು ತಂಡ, 202 ರಾಜ್ಯ ಪ್ಲೈಯಿಂಗ್ ಸ್ಕ್ವಾಡ್, 67 ವಿಚಕ್ಷಣ ತಂಡ, 31 ವಿಡಿಯೋ ವೀಕ್ಷಣೆ ತಂಡ ಹಾಗೂ 5 ಅಂತರ್​ರಾಜ್ಯ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ನಾವು ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಗಡಿ ಪ್ರದೇಶಗಳಲ್ಲಿ ಬ್ಯಾರಿಕೇಡ್ ನಿರ್ಮಿಸಿ ತಪಾಸಣೆ ನಡೆಸಲಾಗುತ್ತದೆ. ಬಂದೋಬಸ್ತ್‌ಗೆ ಪೊಲೀಸ್ ಸೇರಿ ಇತರ ಸಿಬ್ಬಂದಿ ನಿಯೋಜಿಸಲಾಗಿದೆ. ಚುನಾವಣೆಯಲ್ಲಿ ರಾಜಕೀಯ ಅಭ್ಯರ್ಥಿಗಳು ಖರ್ಚು ವೆಚ್ಚದ ಮೇಲೆ ನಿಗಾ ವಹಿಸಲಾಗಿದೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

    ಚುನಾವಣಾ ಅಕ್ರಮ; 2.76 ಕೋಟಿ ರೂ.ಮೌಲ್ಯದ ವಸ್ತು ಜಪ್ತಿ: ತುಷಾರ್​ ಗಿರಿನಾಥ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts