More

    ಲಿಂಗನಮಕ್ಕಿಗೆ ಒಂದೇ ದಿನದಲ್ಲಿ 2.5 ಅಡಿ ನೀರು

    ಶಿವಮೊಗ್ಗ: ಜಿಲ್ಲಾದ್ಯಂತ ಶುಕ್ರವಾರವೂ ಮಳೆ ಮುಂದುವರಿದಿದ್ದು ಲಿಂಗನಮಕ್ಕಿ, ಭದ್ರಾ ಮತ್ತು ತುಂಗಾ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಇದರಿಂದ ಕಳೆದ 24 ಗಂಟೆಯಲ್ಲೇ ಲಿಂಗನಮಕ್ಕಿ ಜಲಾಶಯಕ್ಕೆ 2.55 ಅಡಿ ನೀರು ಹರಿದುಬಂದಿದೆ. ಈ ಮೂಲಕ ಎರಡನೇ ದಿನದಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ ಬರೋಬ್ಬರಿ 4.3 ಅಡಿಯಷ್ಟು ಏರಿಕೆಯಾಗಿದೆ.

    1,819 ಅಡಿ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯಕ್ಕೆ 23,252 ಕ್ಯೂಸೆಕ್ ನೀರಿನ ಹರಿದುಬಂದಿದ್ದು ಜಲಾಶಯದ ಮಟ್ಟ 1,747ಕ್ಕೆ ಏರಿಕೆಯಾಗಿದೆ. ಗುರುವಾರ 15,466 ಕ್ಯೂಸೆಕ್ ಇದ್ದ ನೀರಿನ ಒಳಹರಿವು 23 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಶುಕ್ರವಾರ 789 ಕ್ಯೂಸೆಕ್ ನೀರನ್ನು ಶರಾವತಿ ನದಿಗೆ ಹರಿಬಿಡಲಾಯಿತು.
    ಭದ್ರಾವತಿ ತಾಲೂಕಿನ ಬಿಆರ್‌ಪಿ ಸಮೀಪದ ಭದ್ರಾ ಜಲಾಶಯಕ್ಕೂ ನೀರಿನ ಒಳಹರಿವು ಹೆಚ್ಚಾಗಿದ್ದು ಗುರುವಾರ 6,479 ಕ್ಯೂಸೆಕ್ ಇದ್ದ ನೀರಿನ ಒಳಹರಿವು ಇಂದು 7,232 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಈ ಮೂಲಕ 138.11 ಅಡಿಗೆ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಜಲಾಶಯದಿಂದ 161 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು.
    ಇದೇ ವೇಳೆ ಗುರುವಾರ ಸಂಜೆ 23 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದ್ದ ತುಂಗಾ ಜಲಾಶಯದ ನೀರಿನ ಒಳಹರಿವು ಶುಕ್ರವಾರ ಬೆಳಗ್ಗೆ 1,5272 ಕ್ಯೂಸೆಕ್‌ಗೆ ಇಳಿದಿತ್ತು. ಈಗಾಗಲೇ ಜಲಾಶಯ ಭರ್ತಿ ಆಗಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ 16,186 ಕ್ಯೂಸೆಕ್ ನೀರನ್ನು 12 ಕ್ರಸ್ಟ್‌ಗೇಟ್ ತೆರೆದು ನದಿಗೆ ಬಿಡಲಾಯಿತು. ಉಳಿದಂತೆ ಮಾಣಿ ಚೆಕ್‌ಡ್ಯಾಂಗೆ 2642 ಕ್ಯೂಸೆಕ್, ಪಿಕ್‌ಅಪ್ ಚೆಕ್ ಡ್ಯಾಂಗೆ 775 ಕ್ಯೂಸೆಕ್, ಚಕ್ರ ಡ್ಯಾಂಗೆ 1,027 ಹಾಗೂ ಸಾವೆಹಕ್ಲು ಚೆಕ್‌ಡ್ಯಾಂಗೆ 1084 ಕ್ಯೂಸೆಕ್ ನೀರಿನ ಒಳಹರಿವು ಇತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts