More

    ಕುಶಾಲನಗರ ಚೆಕ್‌ಪೋಸ್ಟ್‌ನಲ್ಲಿ 2.34 ಲಕ್ಷ ರೂ. ವಶ

    ಕುಶಾಲನಗರ: ಕುಶಾಲನಗರ-ಮೈಸೂರು ಗಡಿ ಕೊಪ್ಪ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2,34,550 ರೂ.ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಸ್ಪಂದನಾ ಸ್ಫೂರ್ತಿ ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ನಿರ್ವಹಿಸುವ ರವಿಕುಮಾರ್ ಅವರಿಂದ 1.60 ಲಕ್ಷ ಹಾಗೂ ಬಂಧನ್ ಬ್ಯಾಂಕ್‌ನ ಸುದೀಪ್ ಅವರಿಂದ 74,550 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಸಾಲದ ಹಣವನ್ನು ಜನರಿಂದ ಸಂಗ್ರಹಿಸಿ ಬ್ಯಾಂಕ್‌ಗೆ ಜಮೆ ಮಾಡಲು ತೆರಳುತ್ತಿದ್ದುದಾಗಿ ರವಿಕುಮಾರ್ ಹಾಗೂ ಸುದೀಪ್ ತಿಳಿಸಿದ್ದಾರೆ. ಸರಿಯಾದ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕುಶಾಲನಗರ ನೀರಾವರಿ ಇಲಾಖೆಯ ಅಭಿಯಂತರ ಆನಂದ್, ಕುಶಾಲನಗರ ಸಂಚಾರ ಠಾಣಾಧಿಕಾರಿ ಕಾಶಿನಾಥ್‌ಬಗಲಿ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts